ವಿಜ್ಞಾನ ಕುರಿತು ಮಾಹಿತಿ ಬೇಕಿದ್ದರೆ ಓಪನ್ ಡೇ ಗೆ ಬನ್ನಿ!
ಬೆಂಗಳೂರು, ಮಾರ್ಚ್ 03: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನದ ಬಗ್ಗೆ ಮಾಹಿತಿ ಕಾರ್ಯಾಗಾರ, ವಿಜ್ಞಾನ ಪ್ರದರ್ಶನಗಳನ್ನೊಳಗೊಂಡ ಓಪನ್ ಡೇ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಮಾರ್ಚ್ 10 ರಂದು ಆಯೋಜಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಕಾರ್ಯಾಗಾರ ನಡೆಯಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ನಡೆದು ಬಂದ ಹಾದಿ ಕುರಿತು ಐಐಎಸ್ ಸಿ ಮುಖ್ಯ ಕಟ್ಟಡದಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅದರಲ್ಲಿ ಐಐಎಸ್ಸಿ ಕಾರ್ಯಕ್ರಮಗಳು, ಹಿಂದಿನ ಕಟ್ಟಡಗಳ ಚಿತ್ರವನ್ನು ನೋಡಬಹುದಾಗಿದೆ. ಜತೆಗೆ ಮಕ್ಕಳಿಗಾಗಿ ಕಿಡ್ಸ್ ಜೋನ್ ಓಪನ್ ಪ್ಲೇ ಕಾರ್ಯಕ್ರಮವನ್ನು ಕೂಡ ಅಧೇ ದಿನ ಓಲ್ಡ್ ಏರೋಸ್ಪೇಸ್ ಬಿಲ್ಡಿಂಗ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಏರೋಸ್ಪೇಸ್ ಎಂಜಿನಿಯರಿಂಗ್, ಲ್ಯಾಬೊರೇಟರೀಸ್ ಫಾರ್ ಹೈಪರ್ ಸೋನಿಕ್ಸ್ ಅಂಡ್ ಶಾಕ್ ವೇವ್ ರಸರ್ಚ್, ಬಯೋ ಕೆಮಿಸ್ಟ್ರಿ, ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ಕುರಿತು ಕಾರ್ಯಾಗಾರ ಮತ್ತು ರಸ ಪ್ರಶ್ನೆ ಕಾರ್ಯಕ್ರಮವಿರುತ್ತದೆ. ನ್ಯೂರೋ ಸೈನ್ಸ್, ಸಸ್ಟೈನೇಬಲ್ ಟೆಕ್ನಾಲಜೀಸ್, ಕೆಮಿಕಲ್ ಎಂಜಿನಯರಿಂಗ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿಯರಿಂಗ್ ಇನ್ನು ಮುಂತಾದ ವಿಷಯಗಳ ಮೇಲೆ ನುರಿತ ತಜ್ಞರು ಬೆಳಕು ಚೆಲ್ಲಲಿದ್ದಾರೆ.












Click it and Unblock the Notifications