ರಸ್ತೆ ಗುಂಡಿಗಳ ಸಮಸ್ಯೆಗೆ ವೈಟ್ ಟಾಪಿಂಗ್ ಬಿಟ್ಟು ಬೇರೆ ಉಪಾಯ ಹೇಳಿ

ಬೆಂಗಳೂರು, ಫೆಬ್ರವರಿ 15: ರಸ್ತೆಗುಂಡಿಗಳ ಸಮಸ್ಯೆ ನಿವಾರಣೆಗೆ ವೈಟ್ ಟಾಪಿಂಗ್ ಬಿಟ್ಟು ಬೇರೆ ಉಪಾಯವೇನಾದರೂ ಇದ್ದರೆ ಹೇಳಿ ಎಂದು ಸಾರಿಗೆ ತಜ್ಞರು ಸಲಹೆ ಕೇಳಿದ್ದಾರೆ.

ಬೆಂಗಳೂರಲ್ಲಿ ರಸ್ತೆ-ಗುಂಡಿಗಳಿದ್ದು ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿತ್ತು, ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವೈಟ್ ಟಾಪಿಂಗ್ ಎನ್ನುವ ಹೊಸ ಯೋಜನೆಯನ್ನು ಬಿಬಿಎಂಪಿ ಜಾರಿಗೆ ತಂದಿತ್ತು. ಆದರೆ ವೈಟ್ ಟಾಪಿಂಗ್‌ನಿಂದ ವಾಹನಗಳ ಟೈರ್‌ಗಳಿಗೆ ಹಾನಿ ಉಂಟಾಗಲಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್ ಬಿಟ್ಟು ಬೇರೆ ಉಪಾಯವೇನಾದರೂ ಇದ್ದರೆ ತಿಳಿಸಿ ಎಂದು ಕೇಳಿದ್ದಾರೆ.

ವೈಟ್ ಟಾಪಿಂಗ್ ರಸ್ತೆಯು 180 ಮಿ.ಮೀ ದಪ್ಪವಾದ ಸಿಮೆಂಟ್ ಮೇಲ್ಪದರವನ್ನು ಹೊಂದಿರುತ್ತದೆ. ಎಲ್ಲಾ ಕಾಲಕ್ಕೂ ಅನುಗುಣವಾಗುವ ನಿಟ್ಟಿನಲ್ಲಿ ಸ್ವಲ್ಪ ದಪ್ಪವಾಗಿಯೇ ಮಾಡಲಾಗಿದೆ. ಆದರೆ ಇದರಿಂದ ವಾಹನಗಳ ಟಯರ್‌ಗಳಿಗೆ ಹಾನಿ ಉಂಟಾಗುತ್ತಿದೆ ಎನ್ನುವುದು ತಿಳಿದುಬಂದಿದೆ.

Experts calls for better planning for white topping

ವೈಟ್ ಟಾಪಿಂಗ್ ರಸ್ತೆಯ ಮೇಲೆ ಹೋಗುತ್ತಿದ್ದಾಗ ಒಂದೊಮ್ಮೆ ಬಿದ್ದರೆ ಪ್ರಾಣಾಪಾಯವೇನು ಸಂಭವಿಸುವುದಿಲ್ಲ ಆದರೆ ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಎಡವಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ವೈಟ್ ಟಾಪಿಂಗ್ ರಸ್ತೆಯ ಮೇಲೆ ಹೋಗುತ್ತಿದ್ದಾಗ ಬ್ರೇಕ್ ಹಾಕುವುದು ಕಷ್ಟ ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ.ಆದರೆ ಬಿಬಿಎಂಪಿ ಅಧಿಕಾರಿಗಳು ಹೇಳುವ ಪ್ರಕಾರ ವೈಟ್ ಟಾಪಿಂಗ್ ರಸ್ತೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಬೆಂಗಳೂರಲ್ಲಿ ಇದೀಗ 20 ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+