ಬೆಮೆಲ್ ನಲ್ಲಿ ಮೆಟ್ರೋ ಬೋಗಿಗಳ ಪರೀಕ್ಷಾರ್ಥ ಸಂಚಾರ ಯಶಸ್ವಿ
ಬೆಂಗಳೂರು, ಫೆಬ್ರವರಿ 07 : ಬಿಇಎಂಎಲ್ ಸಂಸ್ಥೆಯು ಫೆ.14 ರಂದು ಬಿಎಂಆರ್ ಸಿ ಎಲ್ ಗೆ ಮೂರು ಬೋಗಿಗಳನ್ನು ಹಸ್ತಾಂತರಿಸಲು ಉದ್ದೇಶಿಸಿದ್ದು, ಒಟ್ಟು 6 ಬೋಗಿಗಳನ್ನು ಜೋಡಿಸಿ ಪರೀಕ್ಷಾರ್ಥ ಸಂಚಾರ ನಡೆಸಿದೆ.
ಬಿಇಎಂಎಲ್ ಕಾರ್ಖಾನೆಯಲ್ಲಿರುವ ಹಳಿಗಳ ಮೇಲೆ ಫೆ.೬ರಂದು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಬಿಎಂಆರ್ ಸಿಎಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ಟ್ವೀಟ್ ಮಾಡಿದ್ದಾರೆ.
ಫೆ.14ರಂದು ಆರು ಬೋಗಿಗಳನ್ನು ಹಸ್ತಾಂತರಿಸುವುದಾಗಿ ಬಿಇಎಂಎಲ್ ಆಶ್ವಾಸನೆ ಕೊಟ್ಟಿದೆ. ಆ ಬಳಿಕ ರಾತ್ರಿ ವೇಳೆ ಮೆಟ್ರೋ ರೈಲು ಹಳಿಗಳ ಮೇಲೆ ಪರೀಕ್ಷಾರ್ಥವಾಗಿ ಒಂದು ತಿಂಗಳವರೆಗೆ ಕಾರ್ಯಾಚರಣೆಗೊಳಿಸಲಾಗುವುದು. ಆನಂತರ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರೈಲ್ವೆ ಸುರಕ್ಷತಾ ಆಯುಕ್ತರ ತಂಡವು6 ಬೋಗಿಗಳ ರೈಲು ಕಾರ್ಯಾಚರಣೆಗೆ ಸುರಕ್ಷತಾ ಪ್ರಮಣಪತ್ರ ನೀಡಿದ ಬಳಿಕ ಕಡು ನೇರಳೆ ಮತ್ತು ಹಸಿರು ಬಣ್ಣದ ಮಾರ್ಗದಲ್ಲಿ 6 ಬೋಗಿಗಳ ರೈಲುಗಳನ್ನು ಸಂಚಾರ ಪ್ರಾರಂಭಿಸಲಾಗುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮವು 1,42 ಕೋಟಿ ರೂ. ವೆಚ್ಚದಲ್ಲಿ 150 ಹೊಸ ಬೋಗಿಗಳ ಖರೀದಿಗೆ ಮಾ.2017 ರಲ್ಲೇ ಬಿಎಂಆರ್ ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆ ಪ್ರಕಾರ ಡಿ.2019ರೊಳಗೆ ಎಲ್ಲ ಬೋಗಿಗಳನ್ನು ಬೆಮೆಲ್ ಪೂರೈಕೆ ಮಾಡಬೇಕಿದೆ.











Click it and Unblock the Notifications