ಚಿಕ್ಕಲಸಂದ್ರದಲ್ಲಿ ಆರಂಭವಾಗದ ಮತದಾನ: ವಾಪಸ್ ತೆರಳಿದ ಮತದಾರರು
ಬೆಂಗಳೂರು, ಮೇ 12: ನಗರದ ಚಿಕ್ಕಲಸಂದ್ರದಲ್ಲಿರುವ ವಾರ್ಡ್‌ನ ಬೂತ್ 131,136,95 ರಲ್ಲಿ ಇವಿಎಂ ಯಂತ್ರ ಕೈಕೊಟ್ಟಿದೆ. ಬೆಳಗ್ಗೆ 6.45ರಿಂದ ಮತದಾನಕ್ಕಾಗಿ ಜನರು ಕಾದುನಿಂತಿದ್ದರು. ಇದುವರೆಗೂ ಯಂತ್ರ ಸರಿಯಾಗದ ಹಿನ್ನೆಲೆಯಲ್ಲಿ ನಾಗರಿಕರು ವಾಪಸ್ ತೆರಳುತ್ತಿದ್ದಾರೆ.

ಬೆಳಗ್ಗೆಯಿಂದಲೂ ಇವಿಎಂ ಯಂತ್ರ ಕಾರ್ಯ ನಿರ್ವಹಿಸುತ್ತಿಲ್ಲ, ಚಿಕ್ಕಲ ಸಂದ್ರ ಕೆಇಬಿ ರಸ್ತೆಯಲ್ಲಿ ಬರುವ ಮತಗಟ್ಟೆ ಇದಾಗಿದೆ. ಬಿಬಿಎಂಪಿ ಯೋಗ ಕೇಂದ್ರದಲ್ಲಿ ಮತಗಟ್ಟೆ ಮಾಡಲಾಗಿತ್ತು, ಶುಭಮಂಗಳ ಶಾಲೆಯಲ್ಲಿ ಒಂದು ಇವಿಎಂ ಯಂತ್ರ ಕೆಲಸ ನಿರ್ವಹಿಸುತ್ತಿಲ್ಲಮ ಮತ ಚಲಾಯಿಸಲು ಬಂದ ಸಾರ್ವಜನಿಕರು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ. ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತಿದ್ದರು.












Click it and Unblock the Notifications