ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ಪ್ರಕರಣ: ಇ.ಡಿ.ಯಿಂದ ಕೇಸ್ ದಾಖಲು
ಬೆಂಗಳೂರು, ಸೆಪ್ಟೆಂಬರ್ 11: ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ನಲ್ಲಿ ನೂರಾರು ಕೋಟಿ ನಗನಾಣ್ಯ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್ ಅಮರ್ ಲಾಲ್ ವಿರುದ್ಧ ಇಡಿ ಪ್ರಕರಣ ದಾಖಲಾಗಿದೆ.
ಬೌರಿಂಗ್ ಲಾಕರ್ ನಲ್ಲಿ 250 ಕೋಟಿ ಚೆಕ್ ಹೊಂದಿದ್ದ, ವಿದೇಶಿ ಕರೆನ್ಸಿ, ಖಾಲಿ ಚೆಕ್, ಹಲವು ದಾಖಲೆಗಳು ಪತ್ತೆಯಾಗಿತ್ತು ಆರೋಪಿಗೆ ಇಡಿ ನೋಟಿಸ್ ನೀಡಿತ್ತು ಇದೀಗ ಪ್ರಕರಣ ದಾಖಲಿಸಿಕೊಂಡಿದೆ.
ಲಾಕರ್ ನಲ್ಲಿ 3.90 ಕೋಟಿ ನಗದು, 7.80 ಕೋಟಿ ಮೌಲ್ಯದ ಆಭರಣಗಳು, 650 ಗ್ರಾಂ ಚಿನ್ನ, 15 ಲಕ್ಷ ಬೆಲೆ ಬಾಳುವ ರೋಲೆಕ್ಸ್ ವಾಚ್ ದೊರೆತಿದೆ. ಅವಿನಾಶ್ 1993ರಿಂದ ಬೌರಿಂಗ್ ಕ್ಲಬ್ ಸದಸ್ಯರಾಗಿದ್ದರು.
ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಒಟ್ಟು 126 ಲಾಕರ್ ಗಳಿವೆ, ಇವುಗಳನ್ನು ಯಾರೂ ಸರಿಯಾಗಿ ಬಳಸುತ್ತಿರಲಿಲ್ಲ, ಹಾಗಾಗಿ ಆಡಳಿತ ಮಂಡಳಿಯು ಎಲ್ಲಾ ಲಾಕರ್ ಮಾಲೀಕರಿಗೆ ಪತ್ರ ಬರೆದು ಲಾಕರ್ ಪರಿಶೀಲಿಸುವಂತೆ ತಿಳಿಸಿತ್ತು. ಹೀಗಾಗಿ ಎಲ್ಲಾ ಲಾಕರ್ ಗಳ ಮಾಲೀಕರು ಲಾಕರ್ ತೆರೆಯಲು ಬಂದಿದ್ದರು ಆದರೆ ಮೂರು ಲಾಕರ್ ಗಳ ಮಾಲೀಕರು ಮಾತ್ರ ಬಂದಿರಲಿಲ್ಲ.
ಬೌರಿಂಗ್ ಇನ್ಸ್ಟಿಟ್ಯೂಟ್ ನ ಲಾಕರ್ ನಲ್ಲಿ ಕೋಟಿಗಟ್ಟಲೆ ಹಣ , ಚಿನ್ನಾಭರಣ, ಆಸ್ತಿ ದಾಖಲೆಗಳು ದೊರೆತಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಐಟಿ ಅಧಿಕಾರಿಗಳು ಇಂದು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು. ಬಿಜೆಪಿ ಮುಖಂಡರಾದ ಪ್ರಸಾದ್ ರೆಡ್ಡಿ ಅವರ ಕೋರಮಂಗಲ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.

ಬೌರಿಂಗ್ ಇನ್‌ಸ್ಟಿಟ್ಯೂಟ್ ಪ್ರಕರಣ;ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ
ಬೌರಿಂಗ್ ಇನ್ಸ್ಟಿಟ್ಯೂಟ್ ನ ಲಾಕರ್ ನಲ್ಲಿ ಕೋಟಿಗಟ್ಟಲೆ ಹಣ , ಚಿನ್ನಾಭರಣ, ಆಸ್ತಿ ದಾಖಲೆಗಳು ದೊರೆತಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಐಟಿ ಅಧಿಕಾರಿಗಳು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು.ಬಿಜೆಪಿ ಮುಖಂಡರಾದ ಪ್ರಸಾದ್ ರೆಡ್ಡಿ ಅವರ ಕೋರಮಂಗಲ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಅವಿನಾಶ್ ಯಾರು, ಅವನ ಹಿಂದೆ ಪ್ರಭಾವಿ ವ್ಯಕ್ತಿಗಳು ನಿಂತಿದ್ದೇಕೆ
ಬೌರಿಂಗ್ ಇನ್‌ಸ್ಟಿಟ್ಯೂಟ್ ಕ್ಲಬ್ ಲಾಕರ್ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ. ಅವಿನಾಶ್ ಅಮರ್‌ಲಾಲ್ ಕುಕ್ರೇಜಾ ಲಾಕರ್ ನಲ್ಲಿ ಪತ್ತೆಯಾದ ಆಸ್ತಿಪತ್ರ ಪ್ರಮಾಣದ ಮೊತ್ತ ಈ ಮುಂದೆ 550 ಕೋಟಿಯಲ್ಲ 800 ಕೋಟಿಗೂ ಅಧಿಕವೆನ್ನುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಬೌರಿಂಗ್ ಕ್ಲಬ್ ಮೇಲೆ ಶನಿವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು, ಅಲ್ಲಿ ಅವಿನಾಶ್ ಕುಕ್ರೇಜಾ ಅವರಿಗೆ ಸಂಬಂಧಿಸಿದ್ದ ಲಾಕರ್ ನಲ್ಲಿ 800 ಕೋಟಿಗೂ ಅಧಿಕ ಮೊತ್ತದ ಆಸ್ತಿಪತ್ರಗಳು, ಹಣ, ಆಭರಣಗಳು ದೊರೆತಿದ್ದವು.ಲಾಕರ್ ರಹಸ್ಯದ ಹಿಂದೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಕುಟುಂಬಸ್ಥರ ಹೆಸರೂ ಕೂಡ ಕೇಳಿಬರುತ್ತಿದೆ. ಕೆಲವರು ಅವಿನಾಶ್ ರಕ್ಷಣೆಗೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿದೆ.

ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ನಲ್ಲಿ ಇದ್ದಿದ್ದು 800ಕೋಟಿ
ಲಾಕರ್ ನಲ್ಲಿ 3.90 ಕೋಟಿ ನಗದು, 7.80 ಕೋಟಿ ಮೌಲ್ಯದ ಆಭರಣಗಳು, 650 ಗ್ರಾಂ ಚಿನ್ನ, 15 ಲಕ್ಷ ಬೆಲೆ ಬಾಳುವ ರೋಲೆಕ್ಸ್ ವಾಚ್ ದೊರೆತಿದೆ. ಅವಿನಾಶ್ 1993ರಿಂದ ಬೌರಿಂಗ್ ಕ್ಲಬ್ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ. ಸುಮಾರು 800 ಕೋಟಿಗೂ ಹೆಚ್ಚು ಬೆಲೆಬಾಳುವ ದಾಖಲೆಗಳಿದ್ದವು ಎನ್ನಲಾಗಿದೆ.

ಬೌರಿಂಗ್ ಇನ್‌ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜಿನಾಮೆ
ಅವಿನಾಶ್ ಅಮರಲಾಲ್ ಕುಕ್ರೇಜ್ ಆಗಸ್ಟ್ 1ರಂದು ತಾಯಿ ಜೊತೆ ಬೌರಿಂಗ್ ಇನ್ಸ್ಟಿಟ್ಯೂಟ್‌ಗೆ ಆಗಮಿಸಿ, ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರಿಗೆ ರಾಜೀನಾಮೆ ನೀಡಿದ್ದಾರೆ, ರಾಜೀನಾಮೆ ಅಂಗೀಕಾರವಾಗಿದ್ದು, ತಕ್ಷಣದಿಂದಲೇ ಅವಿನಾಶ್, ಪತ್ನಿ ಮತ್ತು ಮಕ್ಕಳ ಸದಸ್ಯತ್ವ ರದ್ದಾಗಿದೆ.
-
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ












Click it and Unblock the Notifications