Get Updates
Get notified of breaking news, exclusive insights, and must-see stories!

ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ

ವಿಶ್ವ ಭೂ ದಿನ ಒಂದು ದಿನದ ಆಚರಣೆಯಾಗದೆ ಪ್ರತಿದಿನದ ಹಬ್ಬವಾಗಬೇಕು. ನಾವು ವಾಸಿಸುವ ಪರಿಸರವನ್ನು ಪ್ರೀತಿಸಿದರೆ ಮಾತ್ರ ಚೆನ್ನಾಗಿಟ್ಟುಕೊಳ್ಳಲು ಸಾಧ್ಯ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ, ರಾಸಾಯನಿಕ ತ್ಯಾಜ್ಯಗಳಿಂದ ತುಂಬಿದ ಫಲವತ್ತಾದ ಭೂಮಿ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನಗಳ ನಡುವೆ ಕೂಡಾ ಸುಂದರ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ಮಾನವನಿಗಿದೆ. ಬದುಕಲು ಇಚ್ಛೆ ಇದ್ದವರು ಈ ಕೆಳಗಿನ ಟಿಪ್ಸ್ ಓದಿ ಅಳವಡಿಸಿಕೊಂಡರೆ ಬದುಕಿನಲ್ಲಿ ಭಾಗ್ಯೋದಯ ಇಲ್ಲದಿದ್ದರೆ ಅಂತ್ಯ.

ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಳ ವಿಧಾನಗಳಿದೆ. ಹಲವು ವರ್ಷಗಳ ಕಾಲ ವಿಶ್ವ ಭೂ ದಿನವನ್ನು ಅಮೆರಿಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. 90 ರ ದಶಕದ ನಂತರ ವಿಶ್ವದ ಉಳಿದ ರಾಷ್ಟ್ರಗಳು ಭೂಮಿಯ ಮಹತ್ವವನ್ನು ಸಾರುತ್ತಾ, ಜನಜಾಗೃತಿ ಮಾಡಲು ಮುಂದಾಗಿವೆ. ಜನಜಾಗೃತಿಯೊಂದೇ ಸಾಲದು, ಪರಿಸರ ಸಂರಕ್ಷಣೆ ಸಂಕಲ್ಪ ತೊಟ್ಟ ಮೇಲೆ ಅದು ಅನುಷ್ಠಾನಗೊಳ್ಳಬೇಕು. ಇದಕ್ಕಾಗಿ ಕೆಲ ಸರಳ ಮಾರ್ಗೋಪಾಯಗಳನ್ನು ಅಳವಡಿಸಕೊಳ್ಳಬೇಕು. [ಭೂ ರಮೆಯನ್ನು ಕೊಂಡಾಡಿ, ನಿಮ್ಮದೇ ವಿಶ್ವ ಉಳಿಸಿಕೊಳ್ಳಿ]

ಗಿಡ ನೆಡಿ ಮನೆಯ ಮುಂದೊಂದು ಹಿಂದೊಂದು

ಮಕ್ಕಳಿಗೆ ಮಣ್ಣಲ್ಲಿ ಆಡುವುದು ಇಷ್ಟ.ಚಿಕ್ಕಂದಿನಲ್ಲೇ ಸಸಿ ನೆಡುವುದು, ಪಾತಿ ಮಾಡುವುದು, ನೀರು ಹಾಕುವುದು ಆರೈಕೆ ಮಾಡುವುದನ್ನು ಕಲಿಸಿ ಕೊಡಿ. ವಿಶೇಷಸಸ್ಯಗಳು, ಔಷಧೀಯ, ಸುಗಂಧ ಸಸ್ಯಗಳೊಡನೆ ಹಸಿರು ಕ್ರಾಂತಿ ಆಟ ಆರಂಭಿಸಬಹುದು. ಹಸಿರಿನ ಬಗ್ಗೆ ಒಲವು ಮೂಡಿಸುವುದು ಅವಶ್ಯ. ಮುಂದೆ ಮನೆಗಳಲ್ಲಿ ಪಾಟ್ ಗಳಲ್ಲಾದರೂ ಗಿಡಗಳು ನಳನಳಿಸಬಹುದು. ಹಣ್ಣು ಹಂಪಲು, ಹೂಗಳನ್ನು ಬೆಳೆಯುವುದು ಮಕ್ಕಳಿಗೆ ಶೈಕ್ಷಣಿಕ ಪಾಠದ ಭಾಗವಾದರೆ ವಿಶ್ವಕ್ಕೆ ಅನುಕೂಲ.

Earth Day: Easy tips to all save our mother Earth

ತ್ಯಾಜ್ಯ ನಿರ್ವಹಣೆ
ಬೆಂಗಳೂರಿಗರಿಗೆ ತ್ಯಾಜ್ಯ ನಿರ್ವಹಣೆಯ ಕಷ್ಟ ಸಾಮಾನ್ಯವಾಗಿ ಗೊತ್ತಿರುತ್ತೆ.ಘನ ತ್ಯಾಜ್ಯ, ಜಲ ತ್ಯಾಜ್ಯ, ಇ ಕಸ ಸೇರಿದಂತೆ ಹಲವು ರೀತಿ ಕಸ ಇರುತ್ತದೆ. ಮಕ್ಕಳಿಗೆ ಈ ಕಸ ಬೇರ್ಪಡಿಸುವ ಅವಶ್ಯಕತೆ, ಬೇರ್ಪಡಿಸುವ ರೀತಿ ಹೇಳಿಕೊಟ್ಟರೆ ಮನೆಯಲ್ಲಿ ಆಚರಿಸಬಹುದು. ಕೈಗ್ಲೌಸ್ ಹಾಕಿಕೊಂಡು ಸುರಕ್ಷಿತವಾಗಿ ಕಸವನ್ನು ಆಟದ ಮೈದಾನದಿಂದ ಹೊರ ಹಾಕುವುದನ್ನು ಕಲಿತರೆ ಮುಂದೆ ತ್ಯಾಜ್ಯ ನಿರ್ವಹಣೆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ವೃತ್ತಿಪರರಿಗೆ ಸಲಹೆ
ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಕಾರ್ ಪೂಲಿಂಗ್, ಬೈಕ್ ಪೂಲಿಂಗ್ ವ್ಯವಸ್ಥೆ ತಕ್ಕಮಟ್ಟಿಗೆ ಜಾರಿಯಲ್ಲಿದೆ. ಇದರಿಂದ ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಇಂಧನ, ಸಮಯ ಉಳಿತಾಯವಾಗುತ್ತದೆ. ಬೈಸಿಕಲ್ ಬಳಕೆ ಕೂಡಾ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ. ಬೈಕ್ ಹಾಗೂ ಕಾರು ಅಗತ್ಯವಿದಾಗ ಮಾತ್ರ ಬಳಸುವುದು ಪರಿಸರಕ್ಕೆ ಒಳ್ಳೆಯದು.

Earth Day: Easy tips to all save our mother Earth

ಚಾರಣ, ಅರಣ್ಯ ದರ್ಶನ
ನಗರ ಪ್ರದೇಶಗಳಿಂದ ಮಕ್ಕಳನ್ನು ನೈಸರ್ಗಿಕ ಪರಿಸರದತ್ತ ಕೊಂಡೊಯ್ಯಬೇಕು. ಅರಣ್ಯದಲ್ಲಿನ ವೈವಿಧ್ಯಮಯ ಜೀವ ಪರಿಸರ ಜೀವಿಸುತ್ತಿರುವ ಬಗೆ, ಉಳಿವಿಗಾಗಿ ಪಡುತ್ತಿರುವ ಸಂಕಷ್ಟಗಳು ಅರ್ಥವಾಗುತ್ತದೆ. ಗುಬ್ಬಿ ಕಾಣೆಯಾಗಿದೆ ಎಂಬ ಕೂಗು ಎದ್ದಿರುವಂತೆ ಇತರೆ ಜೀವಿಗಳ ಬಗ್ಗೆ ಮಾಹಿತಿ, ಜೀವನ ದರ್ಶನ ಮಕ್ಕಳಿಗೆ ಸಿಗುವುದು ಅವಶ್ಯ. ಜೊತೆಗೆ ಮಕ್ಕಳ ಪೋಷಕರಿಗೂ ಕೂಡಾ.

ಸಾವಯವ ಕೃಷಿ
ಅರಣ್ಯಕ್ಕೆ ಕಾಲಿಟ್ಟಂತೆ ಮಕ್ಕಳನ್ನು ಹತ್ತಿರದ ಕೃಷಿಕರ ಹತ್ತಿರ ಕರೆದೊಯ್ಯಬೇಕು. ದೇಶದ ಬೆನ್ನಲುಬು ಎನಿಸಿರುವ ರೈತರ ಜೀವನ, ಆಹಾರ ಪದಾರ್ಥಗಳ ಬೆಳೆಯುವ ಬಗೆ ಹೇಗೆ ಎಂಬುದರ ನೇರ ಪ್ರಾತ್ಯಾಕ್ಷಿಕೆ ಸಿಕ್ಕಂತಾಗುತ್ತದೆ. ನಂತರ ಆಹಾರ ಸಂರಕ್ಷಣೆ, ಸಾವಯವ ಕೃಷಿ ಮಹತ್ವ, ಬೆಳೆಗಾರರು, ಮಾರುಕಟ್ಟೆ ಶುಚಿತ್ವ ಪರಿಸರ ಸಂರಕ್ಷಣೆ ವಿಧಾನಗಳನ್ನು ಅರಿಯಬಹುದು.

Earth Day: Easy tips to all save our mother Earth

ಪುನರ್ ಬಳಕೆ ಕಲಿಸಿರಿ

ವಸ್ತುಗಳ ಪುನರ್ ಬಳಕೆ ಮಾಡುವ ವಿಧಾನವನ್ನು ಬೇಸಿಗೆ ಶಿಬಿರಗಳನ್ನು ಬಹಳಷ್ಟು ಕಡೆ ಹೇಳಿಕೊಡಲಾಗುತ್ತದೆ. ಪತ್ರಿಕೆಗಳು, ಮ್ಯಾಗಜೀನ್ , ಪುನರ್ ಬಳಕೆ, ಯಾವ ವಸ್ತು ಪುನರ್ ಬಳಕೆ ಮಾಡಬಹುದು ಅದರ ಅಗತ್ಯ ಏನಿದೆ? ಪುನರ್ ಬಳಕೆ ಉಪಯೋಗಗಳೇನು ಎಂಬುದು ಪಾಠದ ಜೊತೆಗೆ ಆಟವಾಗಿ ಮಕ್ಕಳಿಗೆ ತಲುಪಬೇಕಿದೆ

ನೀರು ಉಳಿಸಿ ಭೂಮಿ ಉಳಿಸಿ

ದಿನ ಬೆಳಗ್ಗೆ ಹಲ್ಲುಜ್ಜುವಾಗ ನಲ್ಲಿ ನೀರು ಪೋಲಾಗದಂತೆ ಎಚ್ಚರವಹಿಸಿ, ಅನಗತ್ಯವಾಗಿ ಹರಿಯುವ ನೀರಿನ ಬಗ್ಗೆ ಜಾಗೃತಿ ಮೂಡಬೇಕಿದೆ. ಜಗತ್ತಿನಲ್ಲೇ ಭೂಮಿಗಿಂತ ನೀರು ಅಧಿಕ ಪ್ರಮಾಣದಲ್ಲಿದ್ದರೂ ದುರ್ಬಳಕೆ ಹೆಚ್ಚಾಗುತ್ತಿರುವುದರಿಂದ ನೀರಿನ ಉಳಿತಾಯ ಬಹುಮುಖ್ಯವಾಗಿದೆ. ನಗರ ಪ್ರದೇಶದಲ್ಲಿ ನೀರಿನ ಬವಣೆ ತಪ್ಪಿಸಲು ನೀರು ಪುನರ್ ಬಳಕೆ, ಇಂಗು ಗುಂಡಿ ಸ್ಥಾಪನೆ ಕಾರ್ಯ ಕಡ್ಡಾಯಗೊಳಿಸಬೇಕು.

Earth Day: Easy tips to all save our mother Earth

ಪವರ್ ಕಟ್ ಸಮಸ್ಯೆ

ಅನಗತ್ಯವಾಗಿ ವಿದ್ಯುತ್ ಪೋಲಾಗುವುದನ್ನು ತಪ್ಪಿಸುವುದು ಹೇಗೆ? ಇಂಧನ ಉಳಿತಾಯ ಹೇಗೆ ಮಾಡಬೇಕು? ನೈಸರ್ಗಿಕ ಬೆಳಕನ್ನು ಬಳಸುವುದು ಹೇಗೆ? ಸೌರಶಕ್ತಿ ಉಪಯೋಗಗಳು, ಟಿವಿ, ಫ್ರಿಜ್, ಕೂಲರ್, ಹೀಟರ್ ಹಾಗೂ ಕಂಪ್ಯೂಟರ್ ಮುಂತಾದ ಗೃಹೋಪಯೋಗಿ ವಸ್ತುಗಳಿಂದ ಪರಿಸರಕ್ಕೆ ಎಷ್ಟು ಹಾನಿ. ವಿದ್ಯುತ್ ಉಳಿತಾಯದ ಸರಳ ವಿಧಾನಗಳನ್ನು ಹೇಳಿಕೊಡುವುದು ಪೋಷಕರ ಕರ್ತವ್ಯ.

ಪ್ಲಾಸಿಕ್ಟ್ ಮುಕ್ತ ವಿಶ್ವ

ಹಲವು ಕಡೆ ಪ್ಲಾಸ್ಟಿಕ್ ಬಳಕೆ ನಿಷೇಧ ಹೇರಲಾಗಿದೆ. ಮಕ್ಕಳಿಗೆ ಪ್ಲಾಸ್ಟಿಕ್ ದುರ್ಬಳಕೆ ಬಗ್ಗೆ ವಿವರಿಸಿ ಬಟ್ಟೆ ಬ್ಯಾಗ್ ಅಥವಾ ಪುನರ್ ಬಳಕೆ ಪ್ಲಾಸ್ಟಿಕ್ ಬಳಸುವಂತೆ ಸೂಚಿಸಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶಗಳನ್ನು ಹೆಚ್ಚೆಚ್ಚು ಸೃಷ್ಟಿಸುತ್ತಾ ಹೋಗಬೇಕು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+