ಹೊಸ ವರ್ಷಾಚರಣೆಗೆ ಹದ್ದಿನ ಕಣ್ಣು' ಟಾರ್ಚ್ ಟವರ್'

ಬೆಂಗಳೂರು, ಡಿಸೆಂಬರ್ 18 : ಹೊಸ ವರ್ಷ ಆಚರಣೆಗೆ ದಿನಗಣನೆ ಆರಂಭವಾಗಿದೆ. ಅದರೊಂದಿಗೆ ಪೊಲೀಸರಿಗೂ ತಲೆನೋವು ಶುರುವಾಗಿದೆ. ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವ ಜವಾಬ್ದಾರಿ ಪೊಲೀಸರ ಮೇಲಿದೆ.

ಹಾಗಾಗಿ ಈ ಬಾರಿ ಮುಂಬೈ ಮಾದರಿಯಲ್ಲಿ ಟಾರ್ಚ್ ಟವರ್ ನಿರ್ಮಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಹೊಸ ವರ್ಷಾಚರಣೆ ವೇಳೆ ತೆಗೆದುಕೊಳ್ಳಬೇಕಾದ ಭದ್ರತೆ ಬಗ್ಗೆ ಈಗಾಗಲೇ ಹೆಚ್ಚುವರಿ ಆಯುಕ್ತರು ಮತ್ತು ಡಿಸಿಪಿಗಳ ಸಭೆ ನಡೆಸಿರುವ ಕಮಿಷನರ್ ಸುನಿಲ್ ಕುಮಾರ್ ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಬೆಂಗಳೂರು ಅಪರಾಧ ವಿಭಾಗದಲ್ಲಿ ಕೆಲಸ ಮಾಡಿರುವ ಅಧಿಕಾರಿಯೊಬ್ಬರು ಈ ಬಾರಿ ಮುಂಬೈ ಮಾದರಿಯಲ್ಲಿ ವಾಚ್ ಮತ್ತು ಟಾರ್ಚ್ ಟವರ್ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ.

Eagle eye on new year celebration

2016ರಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕಮ್ಮನಹಳ್ಳಿ ಸಮೀಪದಲ್ಲಿ ಒಂದು ಲೈಂಗಿಕ ದೌರ್ಜನ್ಯ ಘಟನೆ ನಡೆದಿತ್ತು. ಇದು ಬೆಂಗಳೂರಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಲು ಎಂಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ಹೆಚ್ಚು ಜನರು ಸೇರುವ ಜಾಗದಲ್ಲಿ ವಾಚ್ ಮತ್ತು ಟಾರ್ಚ್ ಟವರ್ ನಿರ್ಮಿಸಲಾಗುತ್ತದೆ.

ಟಾರ್ಚ್ ಟವರ್ ಎಂದರೇನು?
ಮುಂಬೈ ಗೇಟ್ ನಲ್ಲಿ ಪ್ರತಿ ವರ್ಷಾಚರಣೆ ವೇಳೆ ಎಂಟರಿಂದ ಹತ್ತು ಅಡಿ ಎತ್ತರದ ಎಂಟತ್ತು ಟವರ್ ಗಳನ್ನು ನಿರ್ಮಿಸಿ ಅದರ ಮೇಲೆ ಸಿಬ್ಬಂದಿ ಬೈನಾಕ್ಯುಲರ್ ಮತ್ತು ಕ್ಯಾಮರಾಗಳಲ್ಲಿ ನಿಗಾ ಇಟ್ಟಿರುತ್ತಾರೆ. ಮೇಲಿನಿಂದ ಗಮನಿಸುವ ಅವರು ಯಾವುದೇ ಅಹಿತರಕರ ಘಟನೆಗಳು ನಡೆಯುವ ಸುಳಿವು ಕಂಡುಬಂದಲ್ಲಿ ನಡೆಯುವ ಜಾಗಕ್ಕೆ ಟಾರ್ಚ್ ಬಿಡುತ್ತಾರೆ. ಟಾರ್ಚ್ ಬಿದ್ ಜಾಗಕ್ಕೆ ಧಾವಿಸುವ ಮಫ್ತಿ ಸಿಬ್ಬಂದಿ ಕಿಡಿಗೇಡಿಗಳನ್ನು ಬಂಧಿಸುತ್ತಾರೆ. ಗುಂಡಪಿನ ನಡೆಉವೆ ಮಫ್ತಿಯಲ್ಲಿರುವ ಸಿಬ್ಬಂದಿಗೆ ಅಕ್ಕಪಕ್ಕ ಏನಾಗುತ್ತಿದೆ ಎಂದು ಮಾತ್ರ ತಿಳಿದಿರುತ್ತದೆ. ಟವರ್ ನಲ್ಲಿರುವವರಿಗೆ ಎಲ್ಲವೂ ಗೋಚರಿಸುತ್ತದೆ.

ಬಾರು-ಪಬ್ ಗಳಿಗೆ ಸೂಚನೆ
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ. ಅಶೋಕ್ ನಗರ, ಕೋರಮಮಗಲ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಪಬ್ ಮತ್ತು ಬಾರ್‌ ಮಾಲೀಕರಿಗೆ ಆಯಾ ವ್ಯಾಪ್ತಿಯ ಅಧಿಕಾರಿಗಳು ಖಡಕ್ ಸೂಚನೆ ರವಾನಿಸಿದ್ದಾರೆ. ಡಿ. 31ರ ರಾತ್ರಿ ಎಲ್ಲ ಸಿಸಿಟಿವಿಗಳು ಕೆಲಸ ಮಾಡುತ್ತಿರಬೇಕು. ಕುಡಿದು ಕಿರುಚಾಡುವವರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.

ಮಫ್ತಿಯಲ್ಲಿ ಮಹಿಳಾ ಸಿಬ್ಬಂದಿ
ಮಹಿಳಾ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಹಲವಾರು ಸಂಘಟನೆಗಳ ಸದಸ್ಯರು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಗುಂಡಪಿನಲ್ಲಿ ಬೆರೆತಿರುತ್ತಾರೆ. ಹೆಣ್ಣುಮಕ್ಕಳಿಗೆ ತೊಂದರೆ ನೀಡಲು ಪ್ರಯತ್ನಿಸಿದಲ್ಲಿ ಅವರನ್ನು ಬಂಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+