E-Khata: ಇ - ಖಾತಾ ಸಂಕಷ್ಟ: ಬೆಂಗಳೂರಲ್ಲಿ ಮನೆ ಖರೀದಿ - ಮಾರಾಟದಲ್ಲಿ ಹೊಸ ತೊಂದರೆ!

E-Khata: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಯಾವುದೇ ಮೋಸ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಇ ಖಾತಾ ಜಾರಿ ಮಾಡಿದೆ. ಅಲ್ಲದೇ ಬೆಂಗಳೂರು ಸೇರಿ ಕರ್ನಾಟಕದ ಲಕ್ಷಾಂತರ ಜನ ಆಸ್ತಿದಾರರು ಈಗಾಗಲೇ ಇ ಖಾತಾ ಪಡೆದುಕೊಂಡಿದ್ದಾರೆ. ಆದರೆ, ಸಕಾಲದಲ್ಲಿ ಇ ಖಾತಾ ಸಿಗದೆ ಇರುವುದರಿಂದ ರಿಯಲ್ ಎಸ್ಟೇಟ್‌ಗೆ ಭಾರೀ ಪೆಟ್ಟು ಬಿದ್ದಿದೆ. ಅಲ್ಲದೇ ಇದೀಗ ಇ ಖಾತಾ ಬೇಗ ಕೊಡಬೇಕು ಎಂದು ಕ್ರೆಡಾಯ್ ಆಗ್ರಹಿಸಿದೆ.

ಹೌದು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇ ಖಾತಾ ವಿಳಂಬದಿಂದಾಗಿ ರಿಯಲ್ ಎಸ್ಟೇಟ್‌ಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ತ್ವರಿತಗತಿಯಲ್ಲಿ ಅನುಮೋದನೆ ಕೊಡಬೇಕು ಎಂದು ಸರ್ಕಾರಕ್ಕೆ ಕ್ರೆಡಾಯ್ ಒತ್ತಾಯಿಸಿದೆ. ಇ-ಖಾತಾ ಕೊಡುವುದರಲ್ಲಿ ಅಳವಡಿಸಿಕೊಂಡಿರುವ ಸರ್ಕಾರದ ಕೆಲವು ನಿಯಮಗಳಿಂದ ಕಟ್ಟಡಗಳಿಗೆ ವಿಳಂಬ ಸೇರಿದಂತೆ ಅನುಮೋದನೆ ಸಹ ವಿಳಂಬವಾಗುತ್ತಿದೆ. ಇದು ಪರೋಕ್ಷವಾಗಿ ರಿಯಲ್‌ ಎಸ್ಟೇಟ್ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಡಲಾಗಿದೆ.

E-Khata problem New problem in buying and selling houses in Bengaluru

ಇ - ಖಾತಾ ಕೊಡುವುದು ವಿಳಂಬವಾಗುತ್ತಿರುವುದರಿಂದ ಮನೆ ಖರೀದಿ ಮಾಡಬೇಕು ಎಂದು ಕಾಯುತ್ತಿರುವವರು ಮನೆ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕ್ರೆಡಾಯ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಆಸ್ತಿಗಳಿಗೆ ಇ - ಖಾತಾ ಸಿಗುವುದು ವಿಳಂಬವಾಗುತ್ತಿರುವುದರಿಂದ ಇದು ರಿಯಲ್ ಎಸ್ಟೇಟ್ ವಹಿವಾಟಿನ ಮೇಲೆ ಪ್ರಭಾವ ಬೀರುತ್ತಿದೆ. ಪರೋಕ್ಷವಾಗಿ ರಿಯಲ್ ಎಸ್ಟೇಟ್‌ಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ರಾಜ್ಯ ಸರ್ಕಾರವು ಇ ಖಾತಾ ಪ್ರಕ್ರಿಯೆಯನ್ನು ಬೇಗ ಮಾಡಿದರೆ ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಹಕಾರಿಯಾಗಲಿದೆ. ಇ ಖಾತಾ ಕಡ್ಡಾಯ ಮಾಡಿರುವುದರಿಂದ ಇ ಖಾತಾ ಆಗದೆ ಇರುವ ಆಸ್ತಿಗಳ ಖರೀದಿ ಹಾಗೂ ಮಾರಟಕ್ಕೆ ಸಮಸ್ಯೆ ಆಗುತ್ತಿದೆ. ಇದರಿಂದ ಪರೋಕ್ಷವಾಗಿ ಮನೆಗಳ ಮಾರಾಟಕ್ಕೆ ಸಮಸ್ಯೆ ಆಗುತ್ತಿದೆ ಎಂದು ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಹೇಳಿದ್ದಾರೆ.

ರೆಪೊ ದರ ಶೇ 1ರಷ್ಟು ಇಳಿದಿದೆ. ಪರಿಷ್ಕರಣೆಯಿಂದ ಅಕ್ಟೋಬರ್ 10ರಿಂದ 12ರವರೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಯಲ್ಲಿ (ಕೆಟಿಪಿಒ) ಕ್ರೆಡಾಯ್ ರಿಯಾಲ್ಟಿ ಎಕ್ಸ್‌ಪೋ-2025 ಆಯೋಜನೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

ರಿಯಲ್ ಎಸ್ಟೇಟ್‌ಗೆ ಹಿನ್ನಡೆ: ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇ ಖಾತಾ ಕಡ್ಡಾಯ ಮಾಡಿರುವುದರಿಂದ ಆಸ್ತಿದಾರರಿಗೆ ಸಂಕಷ್ಟ ಎದುರಾಗಿದೆ. ಕರ್ನಾಟಕ ಸರ್ಕಾರವು ಆಸ್ತಿಗಳಿಗೆ ಇ ಖಾತಾ ಮಾಡಿಸಿಕೊಳ್ಳುವುದಕ್ಕೆ ಮೊಬೈಲ್ ಆ್ಯಪ್ ಅಪ್ಲಿಕೇಷನ್ ಪ್ರಾರಂಭಿಸುವುದಾಗಿ ಹೇಳಿದೆಯಾದರೂ ಅದಿನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ, ಇ ಖಾತಾ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತಿದೆ. ಇದು ಪರೋಕ್ಷವಾಗಿ ರಿಯಲ್ ಎಸ್ಟೇಟ್ ವಹಿವಾಟಿಗೆ ಹೊಡೆತ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+