E-Khata: ಬಿಬಿಎಂಪಿಯಿಂದ ಆಸ್ತಿದಾರರಿಗೆ ಇ - ಖಾತಾ ಹೊಸ ಗುಡ್‌ನ್ಯೂಸ್, ಬೇಕಾಗುವ ದಾಖಲೆಗಳೇನು ?

E-Khata: ಬೆಂಗಳೂರಿನ ಆಸ್ತಿದಾರರಿಗೆ ಇ ಖಾತಾ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕರ್ನಾಟಕದಲ್ಲಿ ಆಸ್ತಿದಾರರಿಗೆ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ ಕಳೆದ ಒಂದು ವರ್ಷದಿಂದಲೂ ಇ ಖಾತಾ ನೀಡಲಾಗುತ್ತಿದ್ದರೂ ಎಲ್ಲಾ ಆಸ್ತಿದಾರರಿಗೂ ಇ ಖಾತಾ ಸೌಲಭ್ಯ ಸಿಗುತ್ತಿಲ್ಲ. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು. ಇದರ ಭಾಗವಾಗಿ ಬೃಹತ್ ಇ ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ. ಇ ಖಾತಾ ಮಾಡಿಸಿಕೊಳ್ಳಲು ಯಾವೆಲ್ಲಾ ದಾಖಲೆಗಳ ಅವಶ್ಯಕತೆ ಇದೆ ಹಾಗೂ ಎಲ್ಲಿ ಇ ಖಾತಾ ಮೇಳ ನಡೆಯುತ್ತಿದೆ ಎನ್ನುವ ವಿವರ ಇಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ ಖಾತಾ ಮೇಳವನ್ನು ಆಯೋಜಿಸುತ್ತಿದ್ದು ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಇ ಖಾತಾವನ್ನು ಆಸ್ತಿದಾರರು ಬಿಬಿಎಂಪಿ ವೆಬ್‌ಸೈಟ್ ಮೂಲಕ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಜನಸೇವಕರ ಮೂಲಕ ಮನೆಯಲ್ಲೇ ಪಡೆಯಬಹುದು. ಆದರೆ, ಈ ರೀತಿ ಇ ಖಾತಾ ಪಡೆದುಕೊಳ್ಳುವುದಕ್ಕೆ ಕೆಲವರಿಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಇ ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ.

E-Khata new good news for property owners from BBMP what are documents required

ಇ ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು

* ನೋಂದಾಯಿತ ಆಸ್ತಿ ಪತ್ರ

* SAS ಆಸ್ತಿ ತೆರಿಗೆ ರಶೀದಿ

* ಬೆಸ್ಕಾಂ ಮೀಟ‌ರ್ ಸಂಖ್ಯೆ

* ಆಸ್ತಿಯ GPS & ಫೋಟೋ

* ಆಧಾರ್ ಕಾರ್ಡ್ ಪ್ರತಿ

* E.C

* ಖಾತಾ

ಎಲ್ಲಿ ಇ ಖಾತಾ ಮೇಳ: ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಇ- ಖಾತಾ ಮೇಳವನ್ನು ದಿನಾಂಕ 29ನೇ ಜೂನ್ 2025ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇ ಖಾತಾಗೆ ಎಷ್ಟು ವೆಚ್ಚವಾಗಲಿದೆ: ಇನ್ನು ಬೆಂಗಳೂರಿನಲ್ಲಿ ಇ ಖಾತಾ ಕೊಡುವುದಕ್ಕೆ ಕೆಲವು ಅಧಿಕಾರಿಗಳು ದುಡ್ಡು ಕೇಳುತ್ತಿದ್ದಾರೆ. ದುಡ್ಡು ಕೊಟ್ಟರಷ್ಟೇ ಇ ಖಾತಾ ಸಿಗುತ್ತಿದೆ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಇಂದಿಗೂ ಕೆಲವು ಆಸ್ತಿದಾರರು ಇ ಖಾತಾ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರೀತಿ ಖಾತಾ ಇಲ್ಲದ ಆಸ್ತಿದಾರರಿಗೆ ಇ ಖಾತಾ ಮೇಳ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಇ ಖಾತಾ ಅರ್ಜಿಗೆ 125 ಮತ್ತು ಸರ್ವೀಸ್ ಶುಲ್ಕ 45 ಪಾವತಿಸಬೇಕು. ದಾಖಲೆಗಳ ಪುಟ ಹೆಚ್ಚಿದ್ದರೆ, ಪ್ರತಿ ಪುಟಕ್ಕೆ 5 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇನ್ನು ಯಾವುದಾದರು ಗೊಂದಲ ಇದ್ದರೆ ಸಹಾಯವಾಣಿ ಸಂಖ್ಯೆ:
ಬಿಬಿಎಂಪಿ ಸಹಾಯವಾಣಿ 080-22660000 ಅಥವಾ ಹತ್ತಿರದ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+