E Khata: ಇ-ಖಾತಾ ಮೇಳ: ಆಸ್ತಿದಾರರಿಗೆ ಮಹತ್ವದ ಸಂದೇಶ ನೀಡಿದ ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್!

E Khata: ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿಯು ಇ - ಖಾತಾ ಮೇಳ ಪ್ರಕ್ರಿಯೆಗೆ ಚುರುಕು ನೀಡಿದ್ದು. ಬೆಂಗಳೂರಿನ ಆಸ್ತಿದಾರರಿಗೆ ಶೀಘ್ರ ಇ - ಖಾತಾ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತಿದೆ. ವೇಗವಾಗಿ ಬೆಂಗಳೂರಿನ ಆಸ್ತಿದಾರರಿಗೆ ಇ - ಖಾತಾ ನೀಡುವುದಕ್ಕೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ಇ ಖಾತಾಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ನಗರದಾದ್ಯಂತ ಇ-ಖಾತಾ ಮೇಳ ಆಯೋಜನೆ ಮಾಡಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಲು ನಾಗರಿಕರಲ್ಲಿ ಅರಿವು ಮೂಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇ - ಖಾತಾ ಯೋಜನೆಯು ಈ ತಿಂಗಳು ಪೂರ್ತಿ ಇರಲಿದೆ. ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಸುಲಭವಾಗಿ ಇ - ಖಾತಾ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

E-Khata Mela new updates BBMP Commissioner Maheshwar Rao gave important message to property owners

ಯಲಹಂಕ ವಲಯ ವ್ಯಾಪ್ತಿಯಲ್ಲಿ "ಮುಖ್ಯ ಆಯುಕ್ತರ ನಡೆ ವಲಯದ ಕಡೆ" ಕಾರ್ಯಕ್ರಮದ ಭಾಗವಾಗಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 4 ಸ್ಥಳಗಳಲ್ಲಿ ಇ-ಖಾತಾ ಮೇಳಗಳನ್ನು ಆಯೋಜಿಸಿದ್ದು, ಇದನ್ನು ಆಸ್ತಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಲಹಂಕ ಕೆರೆಗೆ ಸ್ಥಳೀಯ ಶಾಸಕರಾದ ವಿಶ್ವನಾಥ್ ಅವರೊಂದಿಗೆ ಭೇಟಿ ನೀಡಿ ಕೆರೆ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೆರೆ ಭಾಗದಲ್ಲಿ ವಾಯು ವಿಹಾರ, ಸಸಿಗಳ ಪೋಷಣೆ ಸೇರಿದಂತೆ ಇನ್ನಿತರೆ ನಿರ್ವಹಣೆ ಸರಿಯಾಗಿ ಮಾಡಲು ಸೂಚನೆ ನೀಡಲಾಯಿತು. ಜೊತೆಗೆ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ: ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ಅಗಲೀಕರಣ ಮಾಡಲಾಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮಣಿಪಾಲ್ ಹಾಗೂ ನಿಟ್ಟೆ ಮಹಾವಿದ್ಯಾಲಯದ ಬಳಿ ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸಿದ್ದು, ಅದನ್ನು ತೆರವುಗೊಳಿಸಿ ಮತ್ತೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಕ್ರಮವಹಿಸಲು ಸೂಚನೆ ಕೊಟ್ಟರು.

ಇ-ಖಾತಾ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು

ಇ-ಸ್ವತ್ತು ಪೋರ್ಟಲ್‌ನ ಪ್ರಕಾರ, ಇ - ಖಾತಾ ಪಡೆಯುವುದಕ್ಕೆ ಕೆಲವೊಂದು ನಿರ್ದಿಷ್ಟ ಹಾಗೂ ಪ್ರಮುಖ ದಾಖಲೆಗಳಿದ್ದರೆ ಸಾಕು. ಅವುಗಳೆಂದರೆ: ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ), ಆಸ್ತಿ ಮಾಲೀಕರ ಫೋಟೋ, ನೋಂದಾಯಿತ ಆಸ್ತಿ ದಾಖಲೆಗಳು (ಮಾರಾಟ ಪತ್ರ, ಇತ್ಯಾದಿ), ಋಣಭಾರ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ ರಶೀದಿ ಮತ್ತು ಆಸ್ತಿಯ ಫೋಟೋ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+