E Khata: ಬೆಂಗಳೂರಿನ ಎಲ್ಲಾ ಭಾಗದಲ್ಲೂ ಇ - ಖಾತಾ ಮೇಳ, ಆಸ್ತಿದಾರರಿಗೆ ಗುಡ್‌ನ್ಯೂಸ್!

E Khata: ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ನಗರದ ಆಸ್ತಿದಾರರಿಗೆ ಇ - ಖಾತಾ ವಿಚಾರದಲ್ಲಿ ಭಾರೀ ಸಮಸ್ಯೆ ಆಗುತ್ತಿದೆ. ಆ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಇದೀಗ ಮಹತ್ವದ ಹೆಜ್ಜೆಯನ್ನು ಬಿಬಿಎಂಪಿ ಇರಿಸಿದೆ. ನಗರದಲ್ಲಿ ಎಲ್ಲಾ ಪ್ರಮುಖ ಜಾಗಗಳಲ್ಲೂ ಇ - ಖಾತಾ ಮೇಳವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಬೆಂಗಳೂರಿನ ಆಸ್ತಿದಾರರು ಇ - ಖಾತಾ ಮಾಡಿಸಿಕೊಳ್ಳುವುದಕ್ಕೆ ಕಚೇರಿಗಳಿಗೆ ಪರದಾಡದೆ ಹಾಗೂ ಯಾವುದೇ ಗೊಂದಲಗಳು ಇಲ್ಲದೆ ಸರಳವಾಗಿ ಇ - ಖಾತಾವನ್ನು ಮಾಡಿಸಿಕೊಳ್ಳುವುದಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇ - ಖಾತಾಗೆ ಸಂಬಂಧಿಸಿದಂತೆ ಬಿಬಿಎಂಪಿ ಏನೆಲ್ಲಾ ಅಪ್ಡೇಟ್ಸ್‌ ನೀಡಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರವಾರು ಇ-ಖಾತಾ ಮೇಳವನ್ನು ಆಯೋಜಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ. ಇದರಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇ - ಖಾತಾ ಮೇಳ ಆಯೋಜನೆ ಆಗಲಿದೆ. ಇ - ಖಾತಾ ಮೇಳ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಸ್ತಿದಾರರಿಗೆ ಇ - ಖಾತಾ ಪಡೆದುಕೊಳ್ಳುವುದು ಸುಲಭವಾಗಲಿದೆ ಎಂದೇ ಹೇಳಲಾಗುತ್ತಿದೆ.

E-Khata Mela in all parts of Bengaluru good news for property owners

ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಇ - ಖಾತಾ ಮೇಳವನ್ನು ಆಯೋಜಿಸಲಾಗುತ್ತಿದ್ದರೂ. ಎಲ್ಲಾ ವಿಧಾನಸಭಾ ಕ್ಷೇತ್ರವಾರು ಇ - ಖಾತಾ ಮೇಳ ಆಯೋಜನೆ ಆಗಿಲ್ಲ. ಇದೀಗ ಮೊದಲ ಬಾರಿ ಇ - ಖಾತಾ ಮೇಳ ಆಯೋಜನೆ ಆಗುತ್ತಿದೆ. ಬೆಂಗಳೂರಿನಲ್ಲಿ ಒಟ್ಟು ಇಲ್ಲಿಯ ವರೆಗೆ 6.5 ಲಕ್ಷ ಸ್ವತ್ತುಗಳಿಗೆ ಖಾತಾದಾರರು ಅಂತಿಮ ಇ-ಖಾತಾವನ್ನು ಪಡೆದಿದ್ದಾರೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಬಿಬಿಎಂಪಿಯು ಆಯೋಜಿಸುತ್ತಿರುವ ಇ - ಖಾತಾ ಮೇಳದಲ್ಲಿ ಭಾಗವಹಿಸುವುದಕ್ಕೆ ಏನೆಲ್ಲಾ ದಾಖಲೆಗಳು ಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಸೂಚನೆಗಳು ಹಾಗೂ ಇ-ಖಾತೆ ಪಡೆಯಲು ತರಬೇಕಾಗುವ ದಾಖಲೆಗಳ ಬಗ್ಗೆಯೂ ಅಪ್ಡೇಟ್ಸ್‌ ನೀಡಲಾಗಿದೆ. ಇ - ಖಾತಾಗೆ ಸಂಬಂಧಿಸಿದಂತೆ ಬೇಕಾಗುವ ಪ್ರಮುಖ ದಾಖಲೆಗಳ ವಿವರ ಈ ರೀತಿ ಇದೆ.

* ನೋಂದಾಯಿತ ಆಸ್ತಿ ಪತ್ರ

* ಆಸ್ತಿ ತೆರಿಗೆ ರಶೀದಿ

* ಬೆಸ್ಕಾಂ ಮೀಟರ್ ಸಂಖ್ಯೆ

* ಆಸ್ತಿಯ GPS ಸಹಿತ ಫೋಟೋ

* ಆಧಾರ್ ಕಾರ್ಡ್ ಪ್ರತಿ

* ಇಸಿ(ಖುಣಭಾರ ಪತ್ರ)

* ಖಾತಾ ಪ್ರತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+