E-khata: ಇ - ಖಾತಾ ಬೆಂಗಳೂರು ಆಸ್ತಿಗಳ ಡಿಜಿಟಲೀಕರಣದಲ್ಲಿ ಸಂಕಷ್ಟ!

E-khata: ಬೆಂಗಳೂರಿನಲ್ಲಿ ಅವಸರದಲ್ಲಿ ಇ - ಖಾತಾ ಯೋಜನೆ ಜಾರಿ ಮಾಡಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜನ ಬಿಬಿಎಂಪಿಯ ಕಾರ್ಯ ವೈಖರಿಗೆ ಕೆಂಡಾಮಂಡಲರಾಗಿದ್ದಾರೆ. ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ನಗರ ಪಾಲಿಕೆ ಹಾಗೂ ಸ್ಥಳೀಯ ಆಡಳಿತಗಳಲ್ಲಿ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಇ- ಖಾತಾ ಎಂದರೆ ಆಸ್ತಿಗಳ ಡಿಜಿಟಲೀಕರಣವಾಗಿದೆ. ಇ - ಖಾತಾ ಮಾಡಿಸಿದರೆ ಡಿಜಿಟಲ್‌ ರೂಪದಲ್ಲಿ ನಿಮ್ಮ ಆಸ್ತಿಗಳ ವಿವರ ಲಭ್ಯವಿರಲಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳನ್ನು ಸಹ ಪೂರ್ಣ ಡಿಜಿಟಲೀಕರಣ ಮಾಡದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಜನ ಇದರಿಂದ ಪರದಾಡುತ್ತಿದ್ದಾರೆ. ಆಸ್ತಿದಾರರಿಗೆ ಬಿಬಿಎಂಪಿಯು ಹೊಸ ತಲೆ ನೋವು ತಂದಿದೆ ಅದರ ವಿವರ ಇಲ್ಲಿದೆ.

ಬಿಬಿಎಂಪಿಯು ಇ ಖಾತಾ ವಿಚಾರದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಆಸ್ತಿದಾರರ ಆಸ್ತಿ ಸಂರಕ್ಷಣೆ ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಇ - ಖಾತಾ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಅಧಿಕೃತವಾಗಿ ನೋಂದಣಿಯಾಗಿವೆ. ಆದರೆ ಐದರಿಂದ ಆರು ಲಕ್ಷ ಆಸ್ತಿಗಳು ಇನ್ನೂ ರಿಜಿಸ್ಟ್ರೇಷನ್‌ ಆಗಿಲ್ಲ. ಆದರೆ, ಅಂತಿಮ ಇ - ಖಾತಾ ಪಡೆದಿರುವ ಆಸ್ತಿಗಳ ಪ್ರಮಾಣ ಕೇವಲ ಶೇ 10ಕ್ಕೂ ಕಡಿಮೆ ಇದೆ ಎಂದು "KP" ವರದಿ ಮಾಡಿದೆ.

E Khata BBMP Stumbles in Digitizing Bengaluru Properties

ಬಿಬಿಎಂಪಿಯು ಇ - ಖಾತಾ ಮಾಡಿಸುವುದನ್ನು ಆಸ್ತಿದಾರರಿಗೆ ಕಡ್ಡಾಯ ಮಾಡಿದೆ. ಆದರೆ, ಅದಕ್ಕೆ ಬೇಕಾದ ಯಾವ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಬಿಬಿಎಂಪಿಯು ಆಸ್ತಿಗಳ ಡಿಜಿಟಲೀಕರಣವನ್ನೇ ಮಾಡಿಲ್ಲ. ಹೀಗಾಗಿ, ಇ - ಖಾತಾ ಮಾಡಿಸಿಕೊಳ್ಳುವಲ್ಲಿ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ 20ಲಕ್ಷ ಆಸ್ತಿಗಳ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಡಿಜಿಟಲಿಕರಣಕ್ಕೆ ಪರಿವರ್ತಿಸಲಾಗಿದೆ.

ಆಸ್ತಿ ಮಾಲೀಕರು ಆನ್‌ಲೈನ್‌ನಲ್ಲಿ ಕರಡು ಇ ಖಾತಾ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಪರಿಶೀಲನೆ ಮಾಡಬಹುದು ಎಂದು ಹೇಳಲಾಗಿದೆ. ಆದರೆ, ನಗರದ ಹಲವು ಭಾಗದಲ್ಲಿ ಆಸ್ತಿಗಳನ್ನು ಸ್ಕ್ಯಾನ್‌ ಮಾಡಿಯೇ ಇಲ್ಲ. ಇದರಿಂದ ಆಸ್ತಿದಾರರ ಕರಡು ಇ ಖಾತಾ ಡೌನ್‌ಲೋಡ್‌ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ. ನಗರದಲ್ಲಿ ಇಲ್ಲಿಯ ವರೆಗೆ 10.34 ಲಕ್ಷ ಆಸ್ತಿದಾರರಿಗೆ ಮಾತ್ರ ಆಸ್ತಿಯ ಕರಡು ಇ ಖಾತಾ ಸಿಕ್ಕಿದೆ.

ಬಿಬಿಎಂಪಿಯು ಜನರಿಂದ ಒಂದಿಲ್ಲೊಂದು ಕಾರಣಕ್ಕೆ ವಿರೋಧಕ್ಕೆ ಗುರಿಯಾಗುತ್ತದೆ. ಇದೀಗ ಇ - ಖಾತಾ ವಿಚಾರದಲ್ಲೂ ಅದೇ ಆಗಿದೆ. ಇ - ಖಾತಾ ಕಡ್ಡಾಯ ಅಂತ ಹೇಳುತ್ತಿರುವ ಬಿಬಿಎಂಪಿ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಇದು ಬೆಂಗಳೂರಿನ ಆಸ್ತಿದಾರರು ಪರದಾಡುವುದಕ್ಕೆ ಕಾರಣವಾಗಿದೆ. ಆಸ್ತಿದಾರರು ಕೇಳಿದಾಗ ಸರಿಪಡಿಸುವುದಾಗಿ ಬಿಬಿಎಂಪಿ ಹೇಳುತ್ತಿದೆ. ಬಿಬಿಎಂಪಿ ಹೇಳಿದ ಪ್ರಕಾರ ಎಲ್ಲಾ ಆಸ್ತಿಗಳ ಡಿಜಿಟಲೀಕರಣವೇ ಆಗಿಲ್ಲ ಎಂದು ಬೆಂಗಳೂರು ಆಸ್ತಿದಾರರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+