E-Khata and OTS: ಬಿಬಿಎಂಪಿಗೆ ಬರೋಬ್ಬರಿ 100 ಕೋಟಿ ಆದಾಯದ ಬಂಪರ್!
E-Khata and OTS: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ವಿಚಾರದಲ್ಲಿ ಹೊಸ ಸಾಧನೆಯನ್ನು ಮಾಡಿದೆ. ಬೆಂಗಳೂರಿನಲ್ಲಿ ಆಸ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಬಿಬಿಎಂಪಿಯು ಹಲವು ವಿನೂತನ ಕ್ರಮಗಳನ್ನು ಜಾರಿ ಮಾಡುತ್ತಿದೆ. ಅದರಲ್ಲಿ ಒಟಿಎಸ್ ಹಾಗೂ ಇ - ಖಾತಾ ಯೋಜನೆಗಳು ಸಹ ಪ್ರಮುಖವಾಗಿವೆ. ಈ ಯೋಜನೆಗಳಿಂದ ಬಿಬಿಎಂಪಿಗೆ ಭರ್ಜರಿ ಆದಾಯ ಹರಿದು ಬರುತ್ತಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತಂದು ಪ್ರತಿ ವರ್ಷವೂ ಆಸ್ತಿ ತೆರಿಗೆ ಸಂಗ್ರಹ ಮಾಡುವುದು ಇದರ ಉದ್ದೇಶವಾಗಿದೆ.
ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬಿಬಿಎಂಪಿಯು ಒಂದಿಲ್ಲೊಂದು ಶಾಕ್ ಕೊಡುತ್ತಲ್ಲೇ ಬಂದಿದೆ. ಆದರೆ, ನಿಯಮಾನುಸಾರ ತೆಗೆದುಕೊಂಡಿರುವ ಕ್ರಮದಿಂದಾಗಿ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇಲ್ಲಿಯ ವರೆಗೆ ಬರೋಬ್ಬರಿ 2.25 ಲಕ್ಷ ಆಸ್ತಿದಾರರಿಗೆ ಅಂತಿಮ ಇ - ಖಾತಾವನ್ನು ನೀಡಿದೆ. ಒಂದು ಬಾರಿ ಪರಿಹಾರ ಯೋಜನೆ(OTS) ಜಾರಿಯಿದ್ದ ವೇಳೆಯೂ ಖಾತೆ ಮಾಡಿಕೊಳ್ಳಲು ಅವಕಾಶ ನೀಡಿದ್ದ ವೇಳೆ ಸುಮಾರು 80 ಸಾವಿರ ಆಸ್ತಿ ಮಾಲೀಕರು ಖಾತೆ ಮಾಡಿಸಿಕೊಂಡಿದ್ದಾರೆ.

ನಗರದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಆಯಾ ವಲಯಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಪೈಕಿ 1 ಲಕ್ಷ ಆಸ್ತಿಗಳನ್ನು ಸೇರ್ಪಡೆ ಮಾಡಿದಲ್ಲಿ ಸುಮಾರು 100 ಕೋಟಿ ರೂ. ಆಸ್ತಿ ತೆರಿಗೆ ಪಾಲಿಗೆಗೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಇದು ಈಗ ಸಕ್ಸಸ್ ಆಗಿದ್ದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಭರ್ಜರಿ ಆದಾಯ ಹರಿದು ಬಂದಿದೆ.
ಇ- ಖಾತಾ ತಂದ ಲಾಭ: ಬಿಬಿಎಂಪಿಗೆ ಇ - ಖಾತಾ ಭರ್ಜರಿ ಲಾಭವನ್ನು ತಂದು ಕೊಟ್ಟಿದೆ ಎಂದೇ ಹೇಳಲಾಗುತ್ತಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದಲೇ ಇ ಖಾತಾವನ್ನು ಅಂದರೆ ಡಿಜಿಟಲ್ ಖಾತಾವನ್ನು ಜಾರಿ ಮಾಡಲಾಗಿದೆ. ಈ ಮೂಲಕ ಇದು ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 5,210 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಬರೋಬ್ಬರಿ ಪ್ರಸಕ್ತ ಸಾಲಿನಲ್ಲಿ 4,604 ಕೋಟಿ ರೂಪಾಯಿ ಅಂದರೆ ಶೇ. 88.36 ರಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಲಾಗಿದೆ. ಈ ರೀತಿ ಅವಧಿಯ ಒಳಗಾಗಿ ಈ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ ಮಾಡಿರುವುದು ದಾಖಲೆ ಅಂತಲೇ ಹೇಳಲಾಗುತ್ತಿದೆ.
ಇ -ಖಾತಾ ಜಾರಿ ಮಾಡಿರುವುದರಿಂದ ಆಸ್ತಿದಾರರು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಿ ಖಾತಾಗಳಿಗೂ ಒಂದು ದುಪ್ಪಟ್ಟು ದಂಡವನ್ನು ವಿಧಿಸಿ ಆಸ್ತಿ ತೆರಿಗೆ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ.












Click it and Unblock the Notifications