ಕೊಟ್ಟಕ್ಕಲ್ ನರಸಿಂಹ ರಸಾಯನ ಹೆಸರಿನಲ್ಲಿ ವಿದೇಶಕ್ಕೆ ಮಾದಕ ವಸ್ತು ಸಾಗಣೆ!
ಬೆಂಗಳೂರು, ಅ. 04: ಎರಡು ದಿನದ ಹಿಂದಷ್ಟೇ ಸ್ವಿಗ್ಗಿ ಡೆಲಿವರಿ ಮೂಲಕ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲ ಬಯಲಿಗೆ ಎಳೆದಿದ್ದ ಎನ್ ಸಿಬಿ ಬೆಂಗಳೂರು ಘಟಕದ ಅಧಿಕಾರಿಗಳು ಈಗ ಕೇರಳದ ಖ್ಯಾತ ಆಯುರ್ವೇದ ಕಂಪೆನಿ ಹೆಸರಿನಲ್ಲಿ ಮಾದಕ ವಸ್ತು ವಿದೇಶಕ್ಕೆ ಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದಾರೆ. ಇದರ ಜತೆಗೆ ಸುಡೋಪೆಡ್ರೈನ್ ಮಾದಕ ಮಾತ್ರೆಗಳನ್ನು ಆಸ್ಟ್ರೇಲಿಯಾಗೆ ರವಾನಿಸಲು ಯತ್ನಿಸಿದ್ದ ಡ್ರಗ್ ಪೆಡ್ಲರ್ ನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಪ್ರಕರಣದಲ್ಲಿ ಮೂವರನ್ನು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಮಾದಕ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.
ಕೇರಳಾದಲ್ಲಿ ಕೊಟ್ಟಕ್ಕಲ್ ಆಯುರ್ವೇದ ಸಂಸ್ಥೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕೊಟ್ಟಕ್ಕಲ್ ಹೆಸರಿನ ಡಬ್ಬಾಗಳಲ್ಲಿ ಹಾಷಿಷ್ ಆಯಿಲ್ (ಮಾದಕ ಮೂಲಿಕೆ) ತುಂಬಿಸಿ ಬಹ್ರೇನ್ ಗೆ ಸಾಗಾಣೆ ಮಾಡಲು ಯತ್ನಿಸಲಾಗುತ್ತಿತ್ತು. ಚವನ್ ಪ್ರಾಶ್, ನರಸಿಂಹ ರಸಾಯನ ಮತ್ತಿತರ ಹೆಸರಿನ ಆಯುರ್ವೇದ ಮೆಡಿಸಿನ್ ಹೆಸರಿನ ಡಬ್ಬಾಗಳಲ್ಲಿ ಹಾಷಿಷ್ ಆಯಿಲ್ ತುಂಬಿ ವಿದೇಶಕ್ಕೆ ಸಾಗಣೆ ಮಾಡುತ್ತಿರುವ ಬಗ್ಗೆ ಎನ್ ಸಿಬಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಎನ್ ಸಿಬಿ ಕೊಚ್ಚಿ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇದರ ಜಾಡು ಹಿಡಿದ ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ಎನ್ ಸಿಬಿ ಘಟಕದ ಅಧಿಕಾರಿಗಳು ದಾಳಿ ನಡೆಸಿ ಬಹ್ರೇನ್ ಗೆ ಹಾಷಿಷ್ ಆಯಿಲ್ ಸಾಗಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 3.5 ಕೆ.ಜಿ ಹಾಷಿಷ್ ಆಯಿಲ್ ನ್ನು ಎನ್ ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೇರಳಾದ ಎರ್ನಾಕುಲಂನಿಂದ ಆಸ್ಟ್ರೇಲಿಯಾಗೆ ತೆರಳುತ್ತಿರುವ ಸಂಶಯಾಸ್ಪದ ಕೊರಿಯರ್ ಬಗ್ಗೆ ಕೇರಳ ಎನ್ ಸಿಬಿ ಅಧಿಕಾರಿಗಳು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡಸಿದ ಚೆನ್ನೈ ಘಟಕದ ಎನ್ ಸಿಬಿ ಅಧಿಕಾರಿಗಳು 8 KG ತೂಕದ ಸುಡೋಪೆಡ್ರೈನ್ ಎಂಬ ಮಾದಕ ವಸ್ತು ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ. ಚೆನ್ನೈನ ಕಾರ್ಗೋ ವಿಮಾನದಲ್ಲಿ ತುಂಬಲಾಗಿದ್ದ ಕಾರ್ಗೊ ಜಾಡು ಹಿಡಿದು ಈ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ವಾರದ ಅಂತರದಲ್ಲಿ ಎನ್ ಸಿಬಿ ಚನ್ನೈ ವಲಯದ ಅಧಿಕಾರಿಗಳು ಮೂರು ಮಾದಕ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾಗೆ ಸ್ಯುಡೋಪೆಡ್ರೈನ್ ಕಳುಹಿಸುತ್ತಿದ್ದ ಡ್ರಗ್ ಪೆಡ್ಲರ್ ನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಅತ ನೀಡಿದ ಮಾಹಿತಿ ಮೇರೆಗೆ ಆಸ್ಟ್ರೆಲಿಯಾದ ಅಧಿಕಾರಿಗಳನ್ನು ಸಂಪರ್ಕಿಸಿ, ಆಸ್ಟ್ರೆಲಿಯಾಕ್ಕೆ ಸಾಗಣೆ ಮಾಡಿದ್ದ ನಾಲ್ಕು ಕೆ.ಜಿ. ತೂಕದ ಸ್ಯೂಡೋಪೆಡ್ರೈನ್ ಮಾತ್ರೆ ಜಪ್ತಿ ಮಾಡಿದ್ದಾರೆ.

Recommended Video
ಗಾಂಜಾ ದಂಧೆ ಬಯಲಿಗೆ: ಬೆಂಗಳೂರಿನಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಸ್ವಿಗ್ಗಿ ಡೆಲಿವರಿ ಮೂಲಕ ಮನೆ ಬಾಗಿಲಿಗೆ ಡ್ರಗ್ ಸಾಗಣೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಘಟಕದ ಎನ್ ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ಸಂಬಂಧ ಹಲವರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಗಾಂಜಾ ಪಾಕೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಗಾಂಜಾ ವನ್ನೂ ಸಣ್ಣ ಪಾಕೆಟ್ ಮಾಡಿ ಸ್ವಿಗ್ಗಿ ಫುಡ್ ಡೆಲಿವರಿ ಆಪ್ ಮೂಲಕವೇ ಗ್ರಾಹಕರ ಮನೆ ಬಾಗಿಲಿಗೆ ರವಾನಿಸುತ್ತಿದ್ದ ಅಂಶ ಬಯಲಾಗಿತ್ತು. ದೊಟ್ಟ ಮೊಟ್ಟದ ಡ್ರಗ್ ಜಾಲವನ್ನು ಎನ್ ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಗ್ರಾಹಕರಿಗೆ ಮನೆ ಬಾಗಿಲಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿತ್ತು . ಫುಡ್ ಡೆಲಿವರಿ ಮಾಡುವ ಹೆಸರಿನಲ್ಲಿ ಡ್ರಗ್ ಮಾರಾಟ ಮಾಡಿದ್ದ ಪ್ರಕರಣ ಪತ್ತೆ ಮಾಡದ್ದಕ್ಕೆ ಎನ್ ಸಿಬಿ ಅಧಿಕಾರಿಗಳು ಪ್ರಶಂಸೆಗೆ ಪಾತ್ರರಾಗಿದ್ದರು












Click it and Unblock the Notifications