ಬೆಂಗಳೂರಲ್ಲಿ ಕ್ರಿಸ್ಮಸ್‌, ಹೊಸ ವರ್ಷದಲ್ಲಿ ಡ್ರಗ್ಸ್‌ ದಂಧೆ ಜೋರು: ಈ ವಿಷಯದಲ್ಲಿ ಪೊಲೀಸ್‌ ಹೈ - ಅಲರ್ಟ್

New Year Drug Bust Bengaluru: ಬೆಂಗಳೂರಿನಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಭಯಾನಕ ಡ್ರಗ್ಸ್‌ ದಂಧೆಯೊಂದು ಹೊರ ಬಿದ್ದಿದೆ. ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಭಯಾನಕ ಹಾಗೂ ದೊಡ್ಡ ಮಟ್ಟದ ಡ್ರಗ್ಸ್‌ ದಂಧೆ ನಡೆಯುವುದು ಬಹಿರಂಗವಾಗುತ್ತಿದೆ. ಹೊಸ ವರ್ಷಾಚರಣೆಯ ಸಿದ್ಧತೆ ಜೋರಾಗಿರುವ ಬೆನ್ನಲ್ಲೇ ಬರೋಬ್ಬರಿ 24 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಎಂಡಿಎಂಎ (ಡ್ರಗ್ಸ್‌) ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಇದನ್ನು ತಡೆಯುವುದಕ್ಕೆ ಬೆಂಗಳೂರು ಪೊಲೀಸರು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಎಂ.ಜಿ ರಸ್ತೆ (ಮಹಾತ್ಮಾ ಗಾಂಧಿ) ಹಾಗೂ ಬ್ರಿಗೇಡ್, ರಿಚ್ಮಂಡ್‌ ಸರ್ಕಲ್‌, ಇಂದಿರಾ ಗಾಂಧಿ ನಗರ ಹಾಗೂ ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗದಲ್ಲಿ ಪಬ್, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ರಂಗೇರುತ್ತವೆ. ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ರಾತ್ರಿ ಪೂರ್ತಿ ಯುವಕ ಹಾಗೂ ಯುವತಿಯರು ಸೇರುತ್ತಾರೆ. ಬೆಂಗಳೂರಿನಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಸಮಯದಲ್ಲಿ ಮದ್ಯ ಮಾರಾಟವೂ ಸಹ ಜೋರಾಗಿ ನಡೆಯುತ್ತದೆ. ಇನ್ನು ಡ್ರಗ್ಸ್‌ ಮಾಫಿಯಾ ಸಹ ಜಾಸ್ತಿ ಆಗುತ್ತಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಯುವಕ ಹಾಗೂ ಯವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾರೆಯೇ ಎನ್ನುವ ಅನುಮಾನಕ್ಕೆ ಈ ಪ್ರಕರಣ ಕಾರಣವಾಗಿದೆ.

Drug racket in Bengaluru during Christmas and New Year Police on high alert in this regard

ಏಕೆಂದರೆ ಬೆಂಗಳೂರಿನಲ್ಲಿ ಈ ಹಿಂದೆ ಎಂದೂ ಇಲ್ಲದಷ್ಟು ಹಾಗೂ ದಾಖಲೆಯ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. ನೈಜೇರಿಯಾ ಮೂಲದ ರೋಝೆಮ್ ಎನ್ನುವ ಮಹಿಳೆಯಿಂದ 24 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. ಒಬ್ಬರಿಂದಲೇ ಈ ಪ್ರಮಾಣದಲ್ಲಿ ಡ್ರಗ್ಸ್‌ ವಶಪಡಿಸಿಕೊಂಡಿದ್ದರೆ, ಇನ್ನು ಎಷ್ಟು ಜನ ಈ ರೀತಿಯ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಅನುಮಾನ ಹಾಗೂ ಆತಂಕ ಎರಡೂ ಏಕಕಾಲಕ್ಕೆ ಶುರುವಾಗಿದೆ.

ಬೆಂಗಳೂರಿನಲ್ಲಿ ಹೊಸ ವರ್ಷ ಪ್ರಾರಂಭವಾಗುವ ಮುನ್ನವೇ ಡ್ರಗ್ಸ್‌ ದಂಧೆಯ ಕರಾಳ ಮುಖ ಅನಾವರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ದಂಧೆ ಇನ್ನಷ್ಟು ಹೆಚ್ಚಳವಾಗಲಿದೆಯೇ ಎನ್ನುವ ಅನುಮಾನ ಶುರುವಾಗಿದೆ. ಇನ್ನು ಬೆಂಗಳೂರಿನಲ್ಲಿ ಡ್ರಗ್ಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಡ್ರಗ್ಸ್‌ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Drug racket in Bengaluru during Christmas and New Year Police on high alert in this regard

ಒಂದು ತಿಂಗಳಿನಿಂದ ಕಾರ್ಯಾಚರಣೆ: ಬೆಂಗಳೂರಿನಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ಇವೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಹಾಗೂ ಆತಂಕವೂ ಇದೆ. ಹೀಗಾಗಿ, ಕಳೆದ ಒಂದು ತಿಂಗಳಿನಿಂದಲೂ ಬೆಂಗಳೂರು ಪೊಲೀಸರು ಈ ವಿಚಾರದಲ್ಲಿ ಹೈ ಅಲರ್ಟ್‌ ಆಗಿದ್ದು, ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೈ ಅಲರ್ಟ್‌: ಡ್ರಗ್ಸ್‌ ದಂಧೆ ಹಾಗೂ ಕ್ರೈಮ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಹಾಗೂ ಈ ಹಿಂದೆ ಈ ವಿಚಾರಗಳಲ್ಲಿ ಅಪರಾಧಿಗಳಾಗಿದ್ದವರನ್ನು ಬೆಂಗಳೂರಿನ ಎಲ್ಲಾ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಕರೆಸಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಬೆಂಗಳೂರು ಪೊಲೀಸರಿಂದ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+