ಬೆಂಗಳೂರಿಗೂ ಬರಲಿದೆ 'ಡ್ರೈವರ್ ಲೆಸ್ ಮೆಟ್ರೋ' ರೈಲು!
ಬೆಂಗಳೂರು ಮೆಟ್ರೋ ರೈಲು ನಿಗಮವು ತನ್ನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳನ್ನು ಶೀಘ್ರದಲ್ಲೇ ಅಳವಡಿಸಿಕೊಳ್ಳಲಿದೆ. ಈ ವಿಷಯವನ್ನು ಬೆಂಗಳೂರು ಮೆಟ್ರ ರೈಲು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತ್ ರಾವ್ ತಿಳಿಸಿದ್ದಾರೆ. ಇದೇ ವರ್ಷದಲ್ಲಿ
ಬೆಂಗಳೂರು, ಜೂನ್ 29: ಬೆಂಗಳೂರಿಗರ ಹೊಸ ಕಣ್ಮಣಿಯಾಗಿರುವ ಬೆಂಗಳೂರು ಮೆಟ್ರೋ ರೈಲು ವ್ಯವಸ್ಥೆಗೆ ಶೀಘ್ರದಲ್ಲೇ ಚಾಲಕ ರಹಿತ ರೈಲುಗಳು ಸೇರ್ಪಡೆಗೊಳ್ಳಲಿವೆ ಎಂದು ನಮ್ಮ ಮೆಟ್ರೋ ರೈಲು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉದ್ಘಾಟನೆಯಾದ ಕೊಚ್ಚಿ ಮೆಟ್ರೋನಲ್ಲಿ ಚಾಲಕ ರೈಲುಗಳನ್ನು ಯೋಜನೆಯ ಆರಂಭಿಕ ಹಂತದಲ್ಲೇ ಸಂಚಾರಕ್ಕೆ ಬಳಸಲಾಗಿದೆ. ಇನ್ನು, ದೆಹಲಿ ಮೆಟ್ರೋ ರೈಲು ನಿಗಮವು ತನ್ನಲ್ಲಿ ಹೊಸ ಡ್ರೈವರ್ ಲೆಸ್ ರೈಲುಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಮೆಟ್ರೋ ರೈಲು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತ್ ರಾವ್ ಅವರು, ''ಬೆಂಗಳೂರಿಗೂ ಶೀಘ್ರದಲ್ಲೇ ಚಾಲಕ ರಹಿತ ರೈಲುಗಳು ಆಗಮಿಸಲಿವೆ'' ಎಂದು ತಿಳಿಸಿದರು.
ಚಾಲರ ರಹಿತ ರೈಲು ಬಂದ ನಂತರ, ಈಗ ಚಾಲಕರನ್ನಾಗಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಮುಂದೆ ಚಾಲಕ ರಹಿತ ರೈಲುಗಳು ಬಂದರೂ ಈಗ ಇರುವ ಚಾಲಕ ಸಹಿತ ರೈಲುಗಳು ಮುಂದೆಯೂ ಸಂಚರಿಸಲಿವೆ. ಹಾಗಾಗಿ, ಈಗಿರುವ ಚಾಲಕರಿಗೆ ಯಾವುದೇ ತೊಂದರೆಯಾಗದು'' ಎಂದು ತಿಳಿಸಿದ್ದಾರೆ.












Click it and Unblock the Notifications