ಉಪನಗರ ರೈಲು ಯೋಜನೆ ಡಿಪಿಆರ್ ಗೆ ಸಮೀಕ್ಷೆ: ಡ್ರೋಣ್ ಮೂಲಕ ಸರ್ವೆ

ಬೆಂಗಳೂರು, ಮಾರ್ಚ್ 09: ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾದ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ ನೀಡಿದೆ.

12 ಸಾವಿರ ಕೋಟಿ ರೂ ವೆಚ್ಚದಲ್ಲಿ 68ಕಿ.ಮೀ ಎಲಿವೇಟೆಡ್ ರೈಲು ಮಾರ್ಗ ಸೇರಿ 142 ಕಿ.ಮೀ ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ಮಾ.7ಕ್ಕೆ ಸಮೀಕ್ಷೆ ಆರಂಭವಾಗಿದ್ದು, 6 ತಿಂಗಳಲ್ಲಿ ಪೂರ್ಣಗೊಳ್ಳಿಸಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಪಿಯುಷ್ ಗೋಯೆಲ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪತ್ರ: ಲೊಟ್ಟಿಗೊಲ್ಲಹಳ್ಲಿ ರೈಲು ನಿಲ್ದಾಣದಿಂದ ಡ್ರೋಣ್ ಮೂಲಕ ಸಮೀಕ್ಷೆ ಆರಂಭಗೊಂಡಿದೆ. ಯೋಜನಾ ವೆಚ್ಚ ಹಂಚಿಕೆ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ನೈಋತ್ಯ ರೈಲ್ವೆ ಪತ್ರ ಬರೆದಿದೆ. ಮುಂಬೈ ಮಾದರಿಯಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದರೆ ಶೇ.50 ವೆಚ್ಚ ಭರಿಸಲು ಕೇಂದ್ರ ಸಿದ್ಧವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

DPR complete in six months for suburban railway

ಎಸಿ ರೈಲು: ಬೆಂಗಳೂರು ಜನತೆಗೆ ಹವಾನಿಯಂತ್ರಿತ ಉಪನಗರ ರೈಲು ಸೇವೆಯನ್ನೂ ನೀಡಲು ಇಲಾಖೆ ಮುಂದಾಗಿದೆ. 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ನಿಲ್ದಾಣಗಳ ನಿರ್ಮಾಣ, ನವೀಕರಣ ಮತ್ತು ಹೊಸ ರೈಲು ಖರೀದಿ ಮಾಡಲಾಗುವುದು ಎಂದಿ ಪಿಯುಷ್ ಗೋಯೆಲ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+