ಬೀದಿ ನಾಯಿ ಮೇಲಿನ ಪ್ರೀತಿ; 18 ಸಾವಿರ ಕಳೆದುಕೊಂಡ ಯುವತಿ

ಬೆಂಗಳೂರು, ಏಪ್ರಿಲ್ 21 : ನಾಯಿ ಮೇಲಿನ ಪ್ರೀತಿಯಿಂದಾಗಿ ಬೆಂಗಳೂರಿನ ಯುವತಿಯೊಬ್ಬರು 18 ಸಾವಿರ ರೂ. ಕಳೆದುಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಈ ಸೈಬರ್ ಕ್ರೈಂ ವಂಚನೆ ನಡೆದಿದೆ.

ಚಾಮರಾಜಪೇಟೆಯ 25 ವರ್ಷದ ಯುವತಿ ಬೀದಿಯಲ್ಲಿದ್ದ ಕಣ್ಣು ಕಾಣದ, ಅನಾರೋಗ್ಯ ಪೀಡಿತ ನಾಯಿಗೆ ಸಹಾಯ ಮಾಡಲು ಹೋಗಿ ಹಣ ಕಳೆದುಕೊಂಡಿದ್ದಾರೆ. ಇದೊಂದು ಸೈಬರ್ ಕ್ರೈಂ ಪ್ರಕರಣವಾಗಿದ್ದು, ದೂರು ದಾಖಲಾಗಿದೆ.

ಲಾಕ್ ಡೌನ್ ಸಮಯದಲ್ಲಿ ಬೀದಿ ನಾಯಿಗಳಿಗೆ ಯುವತಿ ಆಹಾರ ಹಾಕುತ್ತಿದ್ದರು. ಆಗ ಬೀದಿಯಲ್ಲಿ ಅನಾರೋಗ್ಯಪೀಡಿತ ಲ್ಯಾಬ್ರೆಡಾರ್ ನಾಯಿ ನೋಡಿದ್ದಾರೆ. ಅದಕ್ಕೆ ಕಣ್ಣು ಸಹ ಕಾಣುತ್ತಿರಲಿಲ್ಲ. ಅದರ ಮಾಲೀಕರು ಬೀದಿಯಲ್ಲಿ ಬಿಟ್ಟು ಹೋಗಿದ್ದರು.

Dog Lover Lost Money By Calling Fake Animal Rescue Helpline

ನಾಯಿಗೆ ಸಹಾಯ ಮಾಡಲು ಮುಂದಾದ ಯುವತಿ ಆನ್ ಲೈನ್ ಮೂಲಕ 24*7 ಪ್ರಾಣಿಗಳ ರಕ್ಷಣೆ ಮಾಡುವ ವೆಬ್ ಸೈಟ್‌ ನಂಬರ್ ಪಡೆದು, ಕರೆ ಮಾಡಿದ್ದಾರೆ. ಅಂಬ್ಯುಲೆನ್ಸ್ ಕಳಿಸುವುದಾಗಿ ಹೇಳಿದ ವೆಬ್ ಸೈಟ್‌ನವರು, ಚಿಕಿತ್ಸೆ ಉಚಿತ ಆದರೆ, ಅಂಬ್ಯುಲೆನ್ಸ್‌ಗೆ 5 ರೂ. ಪಾವತಿ ಮಾಡಿ ಎಂದು ಹೇಳಿದ್ದಾರೆ.

ಫೋನ್‌ಗೆ ಅರ್ಜಿಯೊಂದನ್ನು ಕಳಿಸಿದ ಅವರು ಹೆಸರು, ವಿಳಾಸ, ಫೋನ್ ನಂಬರ್ ಭರ್ತಿ ಮಾಡಿ. ಗೂಗಲ್ ಪೇ ಮೂಲಕ 5 ರೂ. ಪಾವತಿ ಮಾಡಿ ಎಂದು ಹೇಳಿದ್ದಾರೆ. ಯುವತಿ ಕೆಲವು ಸಮಯದ ಬಳಿಕ ಹಣ ಪಾವತಿ ಮಾಡಲು ಹೋದಾಗ ಅಕೌಂಟ್ ಬ್ಯಾಲೆನ್ಸ್‌ ಸೊನ್ನೆಯಾಗಿತ್ತು.

ಎರಡು ದಿನಗಳ ಹಿಂದೆ ಯುವತಿ ಬ್ಯಾಂಕ್ ಅಕೌಂಟ್‌ಗೆ ವೇತನ ಜಮೆಯಾಗಿತ್ತು. ಅನುಮಾನಗೊಂಡ ಯುವತಿ ಅಕೌಂಟ್ ಪರಿಶೀಲಿಸಿದಾಗ ಅದರಿಂದ 18,389 ರೂ.ಗಳನ್ನು ಅಶ್ವಿನಿ ಎಂಬ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿತ್ತು.

ಯುವತಿ ಕರೆ ಮಾಡಿದ್ದ ವೆಬ್ ಸೈಟ್ ನಕಲಿಯಾಗಿದ್ದು, ಯುಪಿಐ ಕೋಡ್ ಹಾಕದೇ, ಓಟಿಪಿ ಕೇಳದೇ ಆಕೆಯ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದರು.

ಸೈಬರ್ ಕ್ರೈಂ ಪೊಲೀಸರು ಯುವತಿ ಪೋನ್ ಮಾಡಿದ್ದ ನಂಬರ್ ಪರಿಶೀಲಿಸಿದಾಗ ಒಂದು ವಾರದ ಹಿಂದೆ 40 ಸಾವಿರ ರೂ. ವಂಚನೆ ಮಾಡಿದ್ದ ಪ್ರಕರಣ ಸಹ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+