ಡಿಕೆ ರವಿ, ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ?

ಬೆಂಗಳೂರು, ಜೂ.26: ಐಪಿಎಸ್ ಅಧಿಕಾರಿ ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡು ಅಕಾಲಿಕ ಸಾವಿಗೆ ತುತ್ತಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸಿಐಡಿ ನಂತರ ಸಿಬಿಐ ಕೂಡಾ ಇದು ಆತ್ಮಹತ್ಯೆ ಎಂದು ಪರಿಗಣಿಸಿದೆ. ಅದರೆ, ಸಾವಿಗೆ ನಿಜವಾದ ಕಾರಣ ಏನು ಎಂಬುದು ಸ್ಪಷ್ಟಗೊಳ್ಳಬೇಕಿದೆ. ಸಿಬಿಐ ಮೂಲಗಳ ಪ್ರಕಾರ ಕೋಲಾರದ ಡಿಸಿಯಾಗಿ ರವಿ ಗಳಿಸಿದ ಜನಪ್ರಿಯತೆಯೇ ಅವರಿಗೆ ಮುಳುವಾಗಿರುವ ಸಾಧ್ಯತೆಗಳಿವೆ.

ಇದೇ ನಿಟ್ಟಿನಲ್ಲಿ ಕೊನೆ ಹಂತದ ವಿಚಾರಣೆ ಕೈಗೊಂಡಿರುವ ಸಿಬಿಐ ತಂಡ ಇತ್ತೀಚೆಗೆ ಕೋಲಾರದ ಪ್ರಮುಖ ರಾಜಕಾರಣಿಗಳನ್ನು ತನ್ನ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದೆ. ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ, ವರ್ತೂರು ಪ್ರಕಾಶ್ ಈ ಪೈಕಿ ಪ್ರಮುಖರು.

ಡಿಕೆ ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ತನ್ನ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ, ರವಿ ಸಾವಿನಲ್ಲಿ ಯಾವುದೇ ಸಂಶಯ ಕಂಡು ಬಂದಿಲ್ಲ ಎಂದು ಬರೆಯಲಾಗಿದೆ.

DK Ravi

ಫೋರೆನ್ಸಿಕ್ ವರದಿ, ಮರಣೋತ್ತರ ಪರೀಕ್ಷಾ ವರದಿ, ಎಫ್ ಎಸ್ಎಲ್ ವರದಿ, ಡಿಕೆ ರವಿ ಫೋನ್ ಕಾಲ್, ವಾಟ್ಸಪ್ ಸಂದೇಶ ಪರೀಕ್ಷೆ, ಹಲವಾರು ಜನರ ವಿಚಾರಣೆ ಬಳಿಕ ಈ ಅಂತಿಮ ನಿರ್ಣಯಕ್ಕೆ ಬರಲಾಗಿದೆ ಎಂದು ಸಿಬಿಐ ಹೇಳಿದೆ.[ಆತ್ಮಹತ್ಯೆ ಹಿಂದೆ ಕ್ರಿಮಿನಲ್ ಸಂಚಿಲ್ಲ: ಸಿಬಿಐ]

ಕರ್ನಾಟಕ ಸರ್ಕಾರ ಮೇ ತಿಂಗಳಿನಲ್ಲಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ಹಸ್ತಾಂತರಿಸಿತ್ತು. ಸಿಐಡಿ ತನಿಖೆ, ಮಧ್ಯಂತರ ವರದಿಯಲ್ಲೂ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿತ್ತು.

ವೈಯಕ್ತಿಕ ವಿಚಾರ ತನಿಖೆ: ಸಿಐಡಿ ತನಿಖೆಯಲ್ಲಿ ಹೇಳಿದಂತೆ ಡಿಕೆ ರವಿ ವೈಯಕ್ತಿಕ ವಿಚಾರಗಳು, ಇತರೆ ಅಧಿಕಾರಿಗಳು, ಕುಟುಂಬಸ್ಥರ ಜೊತೆಗಿನ ಸಂಬಂಧದ ಬಗ್ಗೆಯೂ ಸಿಬಿಐ ಆಳವಾಗಿ ತನಿಖೆ, ವಿಚಾರಣೆ ಮುಗಿಸಿದೆ. ಅದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಮಹಿಳಾ ಅಧಿಕಾರಿಯೊಂದಿಗೆ ಅಗತ್ಯಕ್ಕಿಂತ ಹೆಚ್ಚಿನ ಸ್ನೇಹವಿದ್ದರೂ ಅದರಲ್ಲಿ ಯಾವುದೇ ಸಂಶಯ ಬರುವ ವಿಚಾರ ಕಂಡು ಬಂದಿಲ್ಲ.

ಮಹಿಳಾ ಅಧಿಕಾರಿ ಜೊತೆ ವಿನಿಮಯ ಮಾಡಿಕೊಂಡ ಸಂದೇಶಗಳನ್ನು ಎರಡೆರಡು ಬಾರಿ ಪರಿಶೀಲನೆ ನಡೆಸಲಾಗಿದೆ. ಫೋನ್ ಕರೆ ಗಳಲ್ಲೂ ಯಾವುದೇ ವ್ಯತ್ಯಾಸ ಕಾಣಿಸಿಲ್ಲ. ಹೀಗಾಗಿ ಮಾನಸಿಕ ಒತ್ತಡ ಉಂಟಾಗಿದ್ದರೆ ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಿಲ್ಲ.

ಮಾಫಿಯಾಗಳ ವಿರುದ್ಧ ರವಿ
ರಿಯಲ್ ಎಸ್ಟೇಟ್ ಮಾಫಿಯಾ, ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ಡಿಕೆ ರವಿ ಹಲವಾರು ರಾಜಕಾರಣಿಗಳ ವಿರೋಧ ಕಟ್ಟಿಕೊಂಡಿದ್ದರು. ಈ ಬಗ್ಗೆ ಕೋಲಾರ, ಬೆಂಗಳೂರುಗಳಲ್ಲಿ ಸಿಬಿಐ ವಿಚಾರಣೆ ನಡೆಸಿದೆ.ಕೋಲಾರ ಡಿಸಿಯಾಗಿದ್ದಾಗ ಅವರು ತೆಗೆದುಕೊಂಡ ಕೆಲ ನಿರ್ಣಯಗಳು ಅವರ ಬದುಕಿನ ದಿಕ್ಕು ಬದಲಿಸಿದೆ. ಜಿಲ್ಲಾಧಿಕಾರಿಯಾಗಿ ರವಿ ಕೂಡಾ ಭಾರಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅದರೆ, ಇದೇ ಒತ್ತಡ ಅವರ ಸಾವಿಗೆ ಮುಳುವಾಯಿತು, ಮಾಫಿಯಾಗಳು ಒತ್ತಡ ಹೇರಿದವು ಎಂದು ಹೇಳಲು ಯಾವುದೇ ಪುರಾವೆ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+