ಮರಣೋತ್ತರ ಪರೀಕ್ಷೆ ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು
ಬೆಂಗಳೂರು, ಮಾ.18: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಮರಣೋತ್ತರ ಪರೀಕ್ಷೆ ಫಲಿತಾಂಶ ಹೊರಬಂದಿದ್ದು, ನಿರೀಕ್ಷೆಯಂತೆ ಆತ್ಮಹತ್ಯೆ ಎಂದು ವರದಿಯಲ್ಲಿ ಹೇಳಲಾಗಿದೆ. ರವಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಲವಂತವಾಗಿ ಯಾರೂ ಕತ್ತು ಹಿಸುಕಿದ ಕುರುಹುಗಳು ಪತ್ತೆಯಾಗಿಲ್ಲ ಎಂದು ಮೊದಲ ವರದಿಯಲ್ಲಿ ನಮೂದಾಗಿದೆ.
ಇದು ನೇರವಾಗಿ ಆತ್ಮಹತ್ಯಾ ಪ್ರಕರಣವಾಗಿದೆ ಎಂದು ತನಿಖಾಧಿಕಾರಿಗಳಿಗೆ ವೈದ್ಯರು ಹೇಳಿರುವುದರಿಂದ ಇನ್ಮುಂದೆ ಪ್ರಕರಣದ ತನಿಖೆ ಹಾದಿ ಇನ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಡ ಏನಿತ್ತು? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಮೇಲೆ ನಡೆಯಲಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಮರಣೋತ್ತರ ವರದಿ
ವಿಕ್ಟೋರಿಯಾ ಆಸ್ಪತ್ರೆಯ ಡಾ. ವೆಂಕಟ್ ರಾಘವನ್ ಅವರ ನೇತೃತ್ವದ ತಂಡ ತನ್ನ ಮೊದಲ ವರದಿಯನ್ನು ಸಿಐಡಿಗೆ ನೀಡಲಿದೆ. ವರದಿಯಲ್ಲಿ ಇದು ಆತ್ಮಹತ್ಯೆ ಸಾವಿನ ಕಾರಣ asphyxiation ಎಂದು ನಮೂದಿಸಲಾಗಿದೆ. ಇದು ಸಹಜವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಬೀತುಪಡಿಸಲು ಸಾಕು.[ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ]

ರವಿ ಅವರ ಮೇಲೆ ಯಾವುದೇ ಬಲ ಪ್ರಯೋಗವಾಗಿರುವ ಬಗ್ಗೆ ಕುರುಹುಗಳು ಸಿಕ್ಕಿಲ್ಲ. ಕುತ್ತಿಗೆಗೆ ಬಟ್ಟೆ ಬಿಗಿದಾಗ ಉಂಟಾಗುವ ಮಾರ್ಕ್ ಬಿಟ್ಟರೆ ಯಾವುದೇ ಒತ್ತಡದ ಚಿನ್ಹೆ ಪತ್ತೆಯಾಗಿಲ್ಲ ಎಂದು ವರದಿಯಲ್ಲಿದೆ. ಮರಣೋತ್ತರ ಪರೀಕ್ಷೆಯನ್ನು ತಹಸೀಲ್ದಾರ್ ವೈ ನಾಗರಾಜ್ ಅವರ ಸಮಕ್ಷಮದಲ್ಲಿ ನಡೆಸಲಾಗಿದೆ. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ಈಗ ಏನಾದರೂ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಮರಣೋತ್ತರ ಪರೀಕ್ಷೆಗೆ ಸಾಕ್ಷಿಯಾಗಿ ತಹಸೀಲ್ದಾರ್ ಅವರು ಕೋರ್ಟಿಗೆ ಹಾಜರಾಗಬೇಕಾಗುತ್ತದೆ.ಆದರೆ, ಇನ್ನೂ ಎಫ್ ಎಸ್ ಎಲ್ ಪರೀಕ್ಷೆ ವರದಿ ಬರಬೇಕಿದೆ.ಮೆದುಳು, ಕಿಡ್ನಿ, ಕರುಳು, ಕಿಬೊಟ್ಟೆ ಪರೀಕ್ಷೆ ವರದಿ ಬರಲು ಸೋಮವಾರ ತನಕ ಕಾಯಬೇಕಿದೆ.
ಸಾವಿನ ಕಾರಣ ಇನ್ನೂ ನಿಗೂಢ:
ಆಗ್ನೇಯ ವಲಯ ಡಿಸಿಪಿ ರೋಹಿಣಿ ಕಟೋಚ್ ಅವರ ತಂಡ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವುದಕ್ಕೂ ಮುನ್ನ ಹಲವಾರು ವ್ಯಕ್ತಿಗಳ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ರವಿ ಅವರ ಮಾವ, ಚಾಲಕ, ಕಿರಿಯ ಸಿಬ್ಬಂದಿ ಮುಂತಾದವರು ಇವರಲ್ಲಿ ಪ್ರಮುಖರು. [ಸಿಬಿಐ ಬೇಡ ಸಿಐಡಿಯಿಂದಲೇ ತನಿಖೆಯಾಗಲಿ]
ವಿಚಾರಣೆ ಬಳಿಕ ಕೌಟುಂಬಿಕ ಕಲಹ ಇರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರವಿ ಅವರ ಫೋನ್ ಪಾಸ್ ವರ್ಡ್ ಬ್ರೇಕ್ ಮಾಡಿ ಕರೆ ವಿವರ, ಎಸ್ ಎಂಎಸ್ ವಿವರ ಪಡೆದು ಚೆಕ್ ಮಾಡಲಾಗುತ್ತಿದೆ. ಮಾ.16ರಂದು ಕೊನೆ ಕರೆ ಬಂದಿದ್ದು, ಕೊನೆ ಸಂದೇಶ ಹೀಗೆ ಎಲ್ಲವೂ ಪರಿಶೀಲನೆಗೊಳ್ಳುತ್ತಿದೆ.
ಸಾವಿನ ನಿಗೂಢತೆ ಬಗ್ಗೆ ಪೊಲೀಸರು ಈಗ ತಲೆಕೆಡಿಸಿಕೊಂಡಿದ್ದಾರೆ. ಯಾವ ರೀತಿ ಒತ್ತಡಕ್ಕೆ ಮಣಿದು ರವಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ.












Click it and Unblock the Notifications