ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಪ್ರಕರಣ: ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ

By Mahesh
|
Google Oneindia Kannada News

ಬೆಂಗಳೂರು,ಮಾ.18: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಯುವ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೇನು ಕೆಲಸ? ಮೃತ ದೇಹ ನೋಡಲು ಮನೆಗೆ ಹೋಗಲಿಲ್ಲವೇಕೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಎಸೆದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

'ಆಸ್ಪತ್ರೆಗೆ ಹೆಣ ನೋಡಲು ಹೋಗುವಾಗಲೂ ಎಚ್ಡಿಕೆ ಬಳಿ ಪರ್ಮಿಷನ್ ತಗೋ ಬೇಕಾ? ವಿಪಕ್ಷಗಳದ್ದು ಮೊಸಳೆ ಕಣ್ಣೀರು ಯಾರೂ ನಂಬಬೇಡಿ' ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. [ಭ್ರಷ್ಟರ ಶಿಕ್ಷೆಗೆ ಆಗ್ರಹಿಸಿದ ಫ್ಯಾನ್ ಪೇಜ್ ]

ಎಚ್ಡಿಕೆಯಿಂದ ಗಂಭೀರ ಆರೋಪ: ವಿಕ್ಟೋರಿಯ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ಮರಣೋತ್ತರ ಪರೀಕ್ಷಾ ವರದಿ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ರವಿ ಅವರು ಮೃತಪಟ್ಟ ಸೆಂಟ್‌ಜಾನ್ ಅಪಾರ್ಟ್‌ಮೆಂಟ್‌ಗಾಗಲಿ, ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರ ಇಟ್ಟಿದ್ದ ನಿವಾಸಕ್ಕಾಗಲಿ ಭೇಟಿ ನೀಡದ ಮುಖ್ಯಮಂತ್ರಿ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ವರದಿಯನ್ನು ತಿರಚಲು ಹೋಗಿದ್ದರೇ? ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. [ಖಡಕ್ ಆಫೀಸರ್ ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

CM Siddaramaiah trying to influence Ravi's post mortem report, alleges HD Kumaraswamy

ಸಿಬಿಐ ತನಿಖೆಯಾಗಲಿ: ಸರ್ಕಾರದ ನಡವಳಿಕೆಗಳು ಸಂಶಯ ಮತ್ತು ಅಪನಂಬಿಕೆಗೆ ಎಡೆಮಾಡಿಕೊಟ್ಟಿದೆ. ಸಿಐಡಿ ತನಿಖೆ ಬೇಡ ಸಿಬಿಐ ತನಿಖೆ ನಡೆಸಬೇಕು ಎಂದು ಹೋರಾಟ ನಡೆಸುತ್ತಿರುವುದು ಜನರ ಭಾವನೆಗಳಿಗೆ ದನಿಯಾಗಿ ಎಂದರು. ವಿರೋಧ ಪಕ್ಷವಾಗಿ ಜನರ ಭಾವನೆಗಳಿಗೆ ಸ್ಪಂದಿಸುವುದು ಕರ್ತವ್ಯ. ಡಿ.ಕೆ. ರವಿ ಸಾವಿನ ಬಗ್ಗೆ ಜನತೆ ಆಕ್ರೋಶಭರಿತರಾಗಿದ್ದು, ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಮನ್ನಣೆ ನೀಡಬೇಕು ಎಂದರು.

ಪಿಎಸ್‌ಐ ಮಲ್ಲಿಕಾರ್ಜುನ್ ಬಂಡೆ ಹತ್ಯೆ ಪೊಲೀಸರ ಆಯುಧದ ಗುಂಡಿನಿಂದಲೇ ಆಗಿದೆ ಎಂಬುದು ದೃಢಪಟ್ಟಿದೆ. ಅದೊಂದು ಕೆಟ್ಟ ಪ್ರಕರಣ. ಆದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ಅದರಿಂದ ಯಾವ ಪಶ್ಚಾತ್ತಾಪವನ್ನು ಪಡಲಿಲ್ಲ. ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಮೈಸೂರಿನಲ್ಲಿ ದೈಹಿಕ ಹಲ್ಲೆ ನಡೆದಿತ್ತು. ಅದನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಲಘುವಾಗಿ ತೆಗೆದುಕೊಂಡಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. [ಮರಳು ಮಾಫಿಯಾ ಎಂದರೇನು?]

ಬಿಜೆಪಿ ಪ್ರತಿಕ್ರಿಯೆ: ದಕ್ಷ ಅಧಿಕಾರಿಯಾಗಿದ್ದ ರವಿ ಅವರ ಸಾವು ಎಲ್ಲರಿಗೂ ನೋವು ತಂದಿದೆ. ಇದರ ನಡುವೆಯೇ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯಲು ಸಿಬಿಐ ತನಿಖೆ ಒಂದೇ ದಾರಿ ಆದರೆ ಇದರಲ್ಲಿ ಸಿಎಂ ಮೀನಾಮೇಷ ಎಣಿಸುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಇದರ ನಡುವೆಯೇ ವ್ಯವಸ್ಥಿತವಾಗಿ ಪ್ರಕರಣವನ್ನೇ ಮುಚ್ಚಿ ಹಾಕಲು ಷಡ್ಯಂತ್ರಗಳು ನಡೆಯುತ್ತಿವೆ. ಸಾಕ್ಷಿಗಳನ್ನು ನಾಶ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

English summary
Janata Dal (Secular) leader HD Kumaraswamy accused Karnataka Chief Minister Siddaramiah of trying to influence the post mortem reports of IAS officer DK Ravi. JD (S) leader demanded a CBI probe into the mysterious circumstance that caused death of Ravi, who had raided offices of real-estate firms and jewellery shops, in the last few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X