ಎಚ್‌ಡಿ ದೇವೇಗೌಡರ ಕುರಿತು ಇಂಗ್ಲಿಷ್‌ನಲ್ಲಿ ಜೀವನ ಚರಿತ್ರೆ
Recommended Video
ಬೆಂಗಳೂರು, ಏ.27: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಬಗ್ಗೆ ಇಂಗ್ಲಿಷ್‌ನಲ್ಲೂ ಜೀವನ ಚರಿತ್ರೆ ಸದ್ಯದಲ್ಲಿ ಬಿಡುಗಡೆಯಾಗಲಿದೆ.
ಖುದ್ದು ದೇವೇಗೌಡರೇ ಕರಡು ಪರಿಶೀಲಿಸುತ್ತಿದ್ದಾರೆ. ಹಾಸನದಿಂದ ದೆಹಲಿಯವರೆಗೂ ಅವರ ರಾಜಕೀಯ ಜೀವನದಲ್ಲಿ ನಡೆದ ಘಟನೆಗಳು, ತಿರುವುಗಳು ಎಲ್ಲವನ್ನೂ ಸವಿವರವಾಗಿ ಓದುಗರಿಗೆ ನೀಡಲಾಗುತ್ತಿದೆ.
ಜೀವನ ಚರಿತ್ರೆಯನ್ನು ಜೆಡಿಎಸ್ ಮುಖಂಡ ವೈ,ಎಸ್.ವಿ ದತ್ತ ಅವರು ಕನ್ನಡದಲ್ಲಿ ಬರೆಯುತ್ತಿದ್ದು, ಇಂಗ್ಲಿಷ್‌ನಲ್ಲೂ ಸಿದ್ಧವಾಗುತ್ತಿದೆ.ಆಂಗ್ಲ ಆವೃತ್ತಿ ಕರಡನ್ನು ದೇವೇಗೌಡರೇ ಪರಿಶೀಲಿಸುತ್ತಿದ್ದಾರೆ.

ತಮ್ಮ 88ನೇ ವಯಸ್ಸಿನಲ್ಲೂ ಉತ್ಸಾಹವನ್ನು ಬಿಡದೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವೂ ಪ್ರಚಾರ ನಡೆಸಿದ್ದಾರೆ.
ದೆಹಲಿಯಲ್ಲಿ ಎಡ ಪಕ್ಷ ನಾಯಕರನ್ನೂ ಬೇಟಿಯಾಗಿದ್ದಾರೆ. ಹಳ್ಳಿಯಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿ ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದರು. ಅವರ ಮುಂದಿದ್ದ ಸವಾಲುಗಳೇನಿತ್ತು ಎನ್ನುವ ಕುರಿತು ಎಲ್ಲವನ್ನೂ ಪುಸ್ತಕದಲ್ಲಿ ವಿವರಿಸಲಾಗುತ್ತಿದೆ.












Click it and Unblock the Notifications