ಚಾಲುಕ್ಯ ವೃತ್ತ ಉಕ್ಕಿನ ಸೇತುವೆ ನಿರ್ಮಾಣ ಮೊತ್ತ, ಇನ್ನಷ್ಟು ಹೆಚ್ಚಾಗುತ್ತಾ?

ಬೆಂಗಳೂರು, ಜನವರಿ 3: ವಿವಾದಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣವನ್ನು ರಾಜ್ಯ ಸರ್ಕಾರ ಮಾಡುವುದು ಬಹುತೇಕ ಖಚಿತವಾಗಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಹೇಳಿಕೆಯನ್ನು ಗಮನಿಸಿದರೆ ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್ ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವ ಸಾಧ್ಯತೆ ಹೆಚ್ಚಿದೆ.

ಆದರೆ ಈ ವಿವಾದಿತ ಉಕ್ಕಿನ ಸೇತುವೆ ನಿರ್ಮಾಣದ ವೆಚ್ಚ ಕೂಡ ಹೆಚ್ಚಾಗುವುದು ಖಾತ್ರಿಯಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಯೋಜನೆಯನ್ನು ಮೊದಲ ಬಾರಿಗೆ ಘೋಷಿಸಿದಾಗ ಅದರ ವೆಚ್ಚ 1791 ಕೋಟಿ ರೂ ಆಗಿತ್ತು. ಈಗ 2016ರಲ್ಲಿ 1900 ಕೋಟಿ ರೂಗೆ ಏರಿಕೆಯಾಯಿತು.

Dept admits cost of steel flyover will only soar

ಅಂತಿಮವಾಗಿ ಸಿದ್ದರಾಮಯ್ಯ ಸರ್ಕಾರವು ಯೋಜನೆ ಕೈಗೆತ್ತಿಕೊಳ್ಳುವಾಗ 2100 ಕೋಟಿ ರೂ ಗೆ ಏರಿಕೆಯಾಗಿತ್ತು. ಇದಕ್ಕೆ ಸರ್ಕಾರ ಕೊಟ್ಟ ಕಾರಣ ವರ್ಷದಿಂದ ವರ್ಷಕ್ಕೆ ಮರಳು ಹಾಗೂ ಸಿಮೆಂಟ್ ದರ ಏರಿಕೆ ಎಂದು ಹೇಳಲಾಗಿತ್ತು.

ಇದೇ ಲೆಕ್ಕಾಚಾರ ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಇನ್ನುಷ್ಟು ಏರಿಕೆಯಾಗಲಿದೆ. 2100 ಕೋಟಿ ಹಣ ಸ್ಟೀಲ್ ಬ್ರಿಡ್ಜ್‌ಗೆ ಖರ್ಚಾಗುವ ಸಾಧ್ಯತೆ ಇದೆ. ಈ ವಿವಾದಿತ ಉಕ್ಕಿನ ಸೇತುವೆವನ್ ಮೊತ್ತವು ವರ್ಷದಿಂದ ವರ್ಷಕ್ಕೆ ಕೋಟಿಗಟ್ಟಲೆ ಹೆಚ್ಚಾಗುತ್ತಿದೆ.

ಈ ಲೆಕ್ಕಾಚಾರವನ್ನು ಬಿಜೆಪಿಯ ಸುರೇಶ್ ಕುಮಾರ್ ಬೇರೊಂದು ದೃಷ್ಟಿಯಿಂದ ನೋಡುತ್ತಿದ್ದಾರೆ. ಯೋಜನೆಯಲ್ಲಿನ ಪಾರದರ್ಶಕತೆ ಕೊರತೆಯು ಯೋಜನಾ ವೆಚ್ಚ ಹೆಚ್ಚಾಗಲು ಕಾರಣ ಎನ್ನುತ್ತಿದ್ದಾರೆ. ಆದರೆ ಸಿಮೆಂಟ್ ಹಾಗೂ ಉಕ್ಕಿನ ಏರಿಕೆಯೇ ಇದಕ್ಕೆ ಕಾರಣ ಎಂದು ಸರ್ಕಾರ ಹೇಳುತ್ತಿದೆ. ಈ ಯೋಜನೆಯು ಮತ್ತಷ್ಟು ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+