ಬೆಂಗಳೂರಲ್ಲಿ ಮಹಿಳೆಯರು ಇನ್ಮುಂದೆ ರಾತ್ರಿಯೂ ಭಯವಿಲ್ಲದೆ ಓಡಾಡಬಹುದು; ಹೇಗೆ ಅಂತೀರಾ?

ಬೆಂಗಳೂರು, ಆಗಸ್ಟ್‌ 24: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಭದ್ರತೆಯ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ಮಹಿಳೆಯರ ಭದ್ರತೆಗಾಗಿ ವಿವಿಧ ಕ್ರಮಗಳು ಈಗಾಗಲೇ ತೆಗೆದುಕೊಂಡಿದೆ. ಇದೀಗ ರಾತ್ರಿ ವೇಳೆಯೂ ಮಹಿಳೆಯರ ಭದ್ರತೆಗೆ ಹೆಚ್ಚಿನ ಒತ್ತು ನೀಡಿರುವ ಪೊಲೀಸರು, ರಾತ್ರಿ ಪಾಳಿಯಲ್ಲೂ ಮಹಿಳಾ ಪೊಲೀಸರನ್ನು ನಿಯೋಜಿಸಲು ಮುಂದಾಗಿದೆ.

ಇದಕ್ಕಾಗಿ ರಾತ್ರಿ ವೇಳೆ ಮಹಿಳೆಯರಿಗೆ ನೆರವಾಗಲು ಪ್ರತ್ಯೇಕವಾಗಿ 100 ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ನಗರ ಪೊಲೀಸ್‌ ಇಲಾಖೆ ನಿಯೋಜಿಸಿದೆ. ಮಹಿಳಾ ಚಾಲಕರ ಆಕ್ಸಿಡೆಂಟ್‌ ಪ್ರಕರಣಗಳನ್ನು ನಿಯಂತ್ರಿಸಲು ಮಹಿಳಾ ಸಂಚಾರ ಪೊಲೀಸರು ಕೂಡ ರಾತ್ರಿ ವೇಳೆ ಕರ್ತವ್ಯದಲ್ಲಿರಲಿದ್ದಾರೆ. ಪ್ರತಿ ಪೊಲೀಸ್‌ ಸ್ಟೇಷನ್‌ನಲ್ಲಿ ಇನ್ನು ಮುಂದೆ ಮಹಿಳಾ ಸಿಬ್ಬಂದಿ ನೈಟ್‌ ಶಿಫ್ಟ್‌ನಲ್ಲಿ ಕಡ್ಡಾಯವಾಗಿ ಕರ್ತವ್ಯದಲ್ಲಿರಲಿದ್ದಾರೆ ಎನ್ನಲಾಗಿದೆ.

Deployment Of Lady Police On Night Shift In Bengaluru Area For Women Safety

ಒಂದು ವೇಳೆ ರಾತ್ರಿ ವೇಳೆ ಮಹಿಳೆಯರ ಮೇಲೆ ಏನಾದರೂ ದೌರ್ಜನ್ಯ ನಡೆದರೆ, ಅಪಘಾತ ಪ್ರಕರಣಗಳು ಅಥವಾ ದೂರು ಕೊಡಲು, ನ್ಯಾಯಕ್ಕಾಗಿ ಪೊಲೀಸ್‌ ಸ್ಟೇಷನ್‌ಗಳಿಗೆ ಬರುವ ಮಹಿಳೆಯರ ಸಹಾಯಕ್ಕಾಗಿ ಒಬ್ಬ ಮಹಿಳಾ ಸಿಬ್ಬಂದಿ ಪೊಲೀಸ್‌ ಸ್ಟೇಷನ್‌ನಲ್ಲೇ ಇರಲಿದ್ದಾರೆ. ಮತ್ತೊಬ್ಬ ಮಹಿಳಾ ಪೊಲೀಸ್‌ ಗಸ್ತಿನಲ್ಲಿರುತ್ತಾರೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಹೆಚ್ಚು ಜನ ಸೇರುವ ದಟ್ಟಣೆ ಪ್ರದೇಶದಲ್ಲಿ ಗಸ್ತು ತಿರುಗುವುದು ಅಥವಾ ಮದ್ಯ ಸೇವನೆ ತಪಾಸಣೆ ನಡೆಸುವ ಪುರುಷ ಸಿಬ್ಬಂದಿ ಜೊತೆಗೆ ಮತ್ತೊಬ್ಬ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ರಾತ್ರಿ ವೇಳೆ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಡೆಂಟ್‌ಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವ ಗುರಿಯೊಂದಿಗೆ ನಗರದ ಎಲ್ಲ ಠಾಣೆಯಲ್ಲಿ ರಾತ್ರಿ ವೇಳೆ ಇಬ್ಬರು ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಮುಂದಾಗಿದ್ದೇವೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಅನುಚೇತ್ ಅವರು ಮಾಹಿತಿ ನೀಡಿದ್ದಾರೆ.

Deployment Of Lady Police On Night Shift In Bengaluru Area For Women Safety

ಈಗಾಗಲೇ ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಮಹಿಳಾ ಸಿಬ್ಬಂದಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಪೊಲೀಸರ ಈ ಕ್ರಮದಿಂದ ಮಹಿಳೆಯರು ಇನ್ನು ಮುಂದೆ ರಾತ್ರಿ ವೇಳೆಯೂ ನಿರ್ಭೀತಿಯಿಂದ ಹೊರಗೆ ಬರಬಹುದು ಎಂದು ಹೇಳಲಾಗುತ್ತಿದೆ. ರಾತ್ರಿ ವೇಳೆ ಮಹಿಳಾ ದೌರ್ಜನ್ಯಗಳು ಕೂಡ ನಗರ ಪ್ರದೇಶದಲ್ಲಿ ಕ್ರಮೇಣ ತಡೆಗಟ್ಟಬಹುದಾಗಿದೆ.

ಇನ್ಮುಂದೆ ವೀಕೆಂಡ್‌ನಲ್ಲಿ ತಪಾಸಣೆ: ಬೆಂಗಳೂರಿನಲ್ಲಿ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ವೀಕೆಂಡ್‌ನಲ್ಲಿ ವಾಹನ ತಪಾಸಣೆ ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ. ಪ್ರತಿ ವಾರ ಗುರುವಾರದಿಂದ ಭಾನುವಾರದವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಬೈಕ್‌ ಸವಾರರು ಹಾಗೂ ಚಾಲಕರ ವಿರುದ್ಧ ಕಡ್ಡಾಯವಾಗಿ ವಿಶೇಷ ಕಾರ್ಯಾಚರಣೆ ನಡೆಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ಕೂಡ ಕೊಡಲಾಗಿದೆ. ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸಿರುವ ಕಡೆಗಳಲ್ಲಿ ಪಾತ್ರ ಪೊಲೀಸರು ಚೆಕಿಂಗ್‌ ಮಾಡಿ ಕೇಸ್‌ ದಾಖಲಿಸಬೇಕು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+