ಜಿಂಕೆ ಮಾಂಸ ಮಾರಾಟ ಆರೋಪ: ಅಬ್ಬಬ್ಬಾ.. 7 ಜನರಿಗೆ ತಲಾ ₹50,000 ದಂಡ, ಎಲ್ಲಿ ಗೊತ್ತಾ?-ಮಾಹಿತಿ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌, 26: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಸಂಹಾರ ಮಾಡಿ ಅವುಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಮಾರಾಟ ಮಾಡಿದ ಆರೋಪದ ಮೇಲೆ 7 ಜನರಿಗೆ ತಲಾ 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಡೆಂಕಣಿಕೋಟೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಚೆಲ್ಲಪ್ಪನ್ (65), ರಾಮರಾಜ್ (31), ರಾಜೀವ್ (31), ನಾಗರಾಜ್ (28), ಶಿವರಾಜಕುಮಾರ್ (31), ಮರಿಯಪ್ಪನ್ (65) ಮತ್ತು 18 ವರ್ಷದ ಬಾಲಕ ಆರೋಪಿಗಳಾಗಿದ್ದಾರೆ.

Deer meat sale allegation: Each ₹50,000 fined to 7 people, Know where?

ಬೆಂಗಳೂರಿನಿಂದ ಸುಮಾರು 38 ಕಿ.ಮೀ. ದೂರದಲ್ಲಿರುವ ಹೊಸೂರು ಬಳಿಯ ಜುಜುವಾಡಿ ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಚುಕ್ಕೆ ಜಿಂಕೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಚುಕ್ಕೆ ಜಿಂಕೆಯ ಮೃತದೇಹವನ್ನು ಹೊರತೆಗೆದಿದ್ದಾರೆ.

ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಆರೋಪಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಚುಕ್ಕೆ ಜಿಂಕೆಯ ಶವವನ್ನು ಹೊರತೆಗೆದು ತುಂಡರಿಸಿದ್ದರು. ಚುಕ್ಕೆ ಜಿಂಕೆಯನ್ನು ಬೇಟೆಯಾಡಿರುವುದು ಅರಣ್ಯ ಇಲಾಖೆಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಳಿಕ ಅರಣ್ಯ ಇಲಾಖೆ ಏಳು ಮಂದಿಯನ್ನು ಹಿಡಿದು ತಲಾ 50,000 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಿದರೆ ಅಥವಾ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದರೆ ವನ್ಯಜೀವಿ ಕಾಯಿದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ರವಾನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+