• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈಟ್ ಫೀಲ್ಡಲ್ಲಿ ಗಾಯ ಚಿಕಿತ್ಸಾ ಕೇಂದ್ರ ಆರಂಭಿಸಿದ ಯುಎಸ್ ಆಸ್ಪತ್ರೆ

|

ಬೆಂಗಳೂರು, ಮೇ 09: ಡಾಲ್ವಕೋಟ್ ವೂಂಡ್ ಕೇರ್ (ಡಿಡಬ್ಲ್ಯುಸಿ) ಒಂದು ವಿಶಿಷ್ಟ ಹಾಗೂ ಅಪರೂಪದ ಗಾಯ ಸುರಕ್ಷಾ ಕೇಂದ್ರವಾಗಿದ್ದು, ತನ್ನ ಮೊಟ್ಟ ಮೊದಲ ಪರಿಪೂರ್ಣ ಗಾಯಗೊಂಡವರ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ವೈಟ್‍ಫೀಲ್ಡ್ ನಲ್ಲಿರುವ ವೈದೇಹಿ ಕ್ಯಾಂಪಸ್‍ನಲ್ಲಿ ಇಂದು ಆರಂಭಿಸಿದೆ.

ಡಿಡಬ್ಲ್ಯುಸಿ ಸ್ಥಾಪನೆಯು ಅಮೆರಿಕಾದ ಟೆಕ್ಸಾಸ್ ನಗರದ ಡಲ್ಲಾಸ್‍ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಮತ್ತು ಗಾಯಗೊಂಡವರ ಚಿಕಿತ್ಸಾ ತಜ್ಞ ಡಾ. ಮಹೇಶ್ ಕೊಟಪಲ್ಲಿ, ಎಂ.ಡಿ. ಅವರ ಕನಸಿನ ಕೂಸು. ದೀರ್ಘಾವಧಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಕ್ರಮಣಶೀಲವಲ್ಲದ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವ ಸದುದ್ದೇಶದೊಂದಿಗೆ ಒಂದು ಗುರಿ ಇಟ್ಟುಕೊಂಡು ಆರಂಭವಾದ ಸಂಸ್ಥೆ. ಇದು ಇಷ್ಟು ಮಾತ್ರವಲ್ಲದೇ ಇದುವರೆಗೂ ಭಾರತ ದೇಶದಲ್ಲಿ ಚಿಕಿತ್ಸೆ ಲಭ್ಯವಿರದ "ಮೊಣಕಾಲು ಸಾಲ್ವೇಜ್ ಸಮಸ್ಯೆ'ಗೂ ಪರಿಹಾರ ಒದಗಿಸುವ ಕೇಂದ್ರವಾಗಿ ಲಭಿಸಿದೆ.

ಇಂದು, ನಗರೀಕರಣದ ಪ್ರಭಾವ ಹಾಗೂ ಜೀವನ ಶೈಲಿಯ ಅಳವಡಿಕೆಯ ಕಾರಣದಿಂದಾಗಿ ನಮ್ಮ ಆರೋಗ್ಯ ಹದಗೆಡುತ್ತಿದೆ. ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇದರಿಂದಾಗಿ ಜೀವನಶೈಲಿ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಮಧುಮೇಹ, ಅಧಿಕರಕ್ತದೊತ್ತಡ, ಹೃದಯ ಉಸಿರಾಟದ ಸಮಸ್ಯೆ ಹಾಗೂ ಕ್ಯಾನ್ಸರ್‍ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಇಂತಹ ಅಸ್ವಸ್ಥತೆಯಿಂದ ಉಂಟಾಗುವ ದೀರ್ಘಾವಧಿ ಕಾಯಿಲೆಗಳು, ಗಾಯಗಳು ಎದುರಿಸುವುದು ಕೂಡ ಸವಾಲಾಗಿ ಜನರನ್ನು ಕಾಡುತ್ತಿದೆ. ಡಿಡಬ್ಲ್ಯುಸಿ ಇದೀಗ ನಗರಕ್ಕೆ ಬಂದಿದ್ದು, ಇಲ್ಲಿನ ಜನರ ಗಾಯದ ಸುರಕ್ಷೆಯ ಬಗ್ಗೆ ಇದುವರೆಗೂ ಇದ್ದ ನೋಟವನ್ನು ಬದಲಿಸಲಿದೆ. ಜತೆಗೆ ತಜ್ಞ ವೈದ್ಯಕೀಯ ತಂಡದ ಕಾಳಜಿಯೊಂದಿಗೆ ಗಾಯಗಳನ್ನು ಗುಣಪಡಿಸಲು ಇತ್ತೀಚಿನ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲಿದೆ. ಕೇಂದ್ರವನ್ನು ಇವುಗಳ ಜತೆ ಮಧುಮೇಹಿಗಳ ಕಾಲಿನ ಸುರಕ್ಷತೆಗೂ, ಶಸ್ತ್ರಚಿಕಿತ್ಸಾ ನಂತರದ ಗಾಯ ಗುಣಪಡಿಸಲು, ಎಂಡೊ ವಾಸ್ಕ್ಯುಲರ್ ಕಾರ್ಯವಿಧಾನ, ಲೇಸರ್ ಥೆರಪಿ ಹಾಗೂ ಗಾಯಗೊಂಡವರ ಪುನರ್ವಸತಿ ಕಾರ್ಯಕ್ರಮಗಳಿಗೂ ಸಹಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ಕೇಂದ್ರವು ಹೈಪರ್ಬೇರಿಕ್ ಆಕ್ಸಿಜನ್ ಥೆರಫಿ (ಎಚ್‍ಬಿಒಟಿ)ಯೊಂದಿಗೆ ಸುಸಜ್ಜಿತವಾಗಿದ್ದು, ಒತ್ತಡದ ಚೇಂಬರ್‍ನಲ್ಲಿ ಶುದ್ಧ ಉಸಿರಾಟದ ಆಮ್ಲಜನಕವನ್ನು ಇರಿಸುವ ಸೌಲಭ್ಯವನ್ನು ಒಳಗೊಂಡಿದೆ. ದೀರ್ಘಕಾಲದ ಗಾಯವನ್ನು ಸರಿಪಡಿಸಲು ಡಿಡಬ್ಲ್ಯುಸಿ ಹೈಪರ್‍ರ್ಬೇರಿಕ್ ಆಮ್ಲಜನಕ ಚೇಂಬರ್ ಸ್ಥಾಪಿಸಿದೆ. ಇದು ಹೆಚ್ಚಿನ ಅಂಗಾಂಶಗಳಿಗೆ ಆಮ್ಲಜನಕ ಲಭ್ಯತೆಯಿಂದ ಪ್ರಯೋಜನವಾಗುವ ಹಾಗೂ ಎಲ್ಲಾ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೇ ಇದರ ಪ್ರತಿಜೀವಕ ಗುಣಲಕ್ಷಣಗಳಿಗೆ ಬಳಸಬಹುದಾದ ಸೋಂಕುಗಳು ಹಾಗೂ ಪ್ರಾಥಮಿಕ ಚಿಕಿತ್ಸೆಯಾಗಿ ಅಥವಾ ಇತರೆ ಔಷಧಿಗಳ ಜತೆ ಬಳಸಬಹುದಾಗಿದೆ. ಈ ಕಾರ್ಯವಿಧಾನವನ್ನು ಹೊರರೋಗಿಗಳ ದಿನ (ಒಪಿಡಿ) ನಿರ್ವಹಣೆಯಲ್ಲೂ ಬಳಸಬಹುದು. ಚಿಕಿತ್ಸಾ ವಿಧಾನ ಮತ್ತು ಆಸ್ಪತ್ರೆವಾಸದ ಅಗತ್ಯ ಇಲ್ಲಿರುವುದಿಲ್ಲ.

ಡಾಲ್ವಕೋಟ್ ವೂಂಡ್ ಕೇರ್ (ಡಿಡಬ್ಲ್ಯುಸಿ): ಅಮೆರಿಕ ಮೂಲದ ಗಾಯದ ಆರೈಕೆ ಕಾರ್ಯಕ್ರಮ ಸಹಯೋಗದೊಂದಿಗೆ ಡಿಡಬ್ಲ್ಯುಸಿ "ಲಿಂಬ್ ಸಾಲ್ವೇಜ್ ಕಾರ್ಯಕ್ರಮ' ವನ್ನು ಭಾರತದಲ್ಲಿ ಎಚ್‍ಡಿಒಟಿಯೊಂದಿಗೆ ನೀಡುತ್ತಿರುವ 1ನೇ ವಿಶೇಷ ಗಾಯ ಸುರಕ್ಷಾ ಕೇಂದ್ರವಾಗಿದೆ. ತರಬೇತಿ ಪಡೆದ ಗಾಯದ ಆರೈಕೆ ಪರಿಣಿತರು ಮತ್ತು ತಜ್ಞರ ಮೂಲಕ ಎಚ್‍ಬಿಒಟಿ ನಡೆಸುವಿಕೆ ಇಲ್ಲಾಗುತ್ತಿದೆ. ಇದು ಗಾಯದ ಕಲೆಗೂ ಆರೈಕೆ ಒದಗಿಸಲಿದೆ. ಗಾಯದ ಆರೈಕೆಯ ಬಗ್ಗೆ ಈಗಿರುವ ಗ್ರಹಿಕೆ ಬದಲಿಸಲು ಸಂಸ್ಥೆ ಶ್ರಮಿಸುತ್ತಿದೆ. ವೇಗವಾಗಿ ಚಿಕಿತ್ಸೆ ಒದಗಿಸಲು ಉತ್ತಮ ಆರೈಕೆ ಕೇಂದ್ರವನ್ನು ಒದಗಿಸುತ್ತಿದೆ.

ಗಾಯದ ಆರೈಕೆ ತಜ್ಞರ ತಂಡ, ಎಂಡಾವಾಸ್ಕ್ಯುಲರ್ ಮತ್ತು ಹೃದಯ ಶಸ್ತ್ರಚಿಕಿತ್ಸಕರು ಮತ್ತು ಬೋರ್ಡ್ ಆಫ್ ಡೈರೆಕ್ಟರ್ಸ್ ಮತ್ತು 50 ಗಾಯದ ಆರೈಕೆ ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ತಂಡದಿಂದ ಡಿಡಬ್ಲ್ಯುಸಿ ಭಾರತದಲ್ಲಿ ಕೈಗೆಟುಕುವ ಬೆಲೆಗೆ, ಕೇಂದ್ರೀಕೃತವಾದ ಮತ್ತು ಮುಂದಿನ ಜನಾಂಗಕ್ಕೆ ಅತ್ಯಂತ ಉಪಯುಕ್ತವಾಗುವ ಚಿಕಿತ್ಸಾ ಪದ್ಧದಿ ಹಾಗೂ ಆರೋಗ್ಯ ನಿರ್ವಹಣೆ ಮೂಲಕ ಹೊಸ ಅಧ್ಯಾಯವನ್ನು ರಾಜ್ಯದಲ್ಲಿ ತೆರೆಯಲು ಮುಂದಾಗಿದೆ. ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆದೂ ಗುಣಮುಖರಾಗದವರ ಪಾಲಿಗೆ ಇದು ಎರಡನೇ ಆಯ್ಕೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dalvkot Wound Care (DWC), a one-of-its-kind wound care centre, launched its first dedicated wound care centre at Vydehi Campus, Whitefield, Bengaluru today. DWC offers the ‘Limb Salvage Program’, which was not available in India until now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more