ಹಳಿಯಲ್ಲಿ ಬಿರುಕು: ಮೂರು ನಿಲ್ದಾಣಗಳ ಮೆಟ್ರೋ ಸಂಚಾರ ಬಂದ್

ಬೆಂಗಳೂರು,ಫೆಬ್ರವರಿ 24 : ನಮ್ಮ ಮೆಟ್ರೋ ಆರ್ ವಿ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಣದವರೆಗೆ ಹಳಿ ದುರಸ್ತಿ ನಡೆಯಲಿರುವುದರಿಂದ ಫೆ.24 ರ ರಾತ್ರಿ 9 ರಿಂದ ಫೆ.25 ರ ರಾತ್ರಿ 11 ಗಂಟೆಯವರೆಗೆ ಮೂರು ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ.

ಒಂದು ದಿನ ನಾಗಸಂದ್ರದಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಕಾರ್ಯಾಚರಣೆ ನಡೆಯಲಿದೆ. ನಾಗಸಂದ್ರ ಅಥವಾ ಮೆಜೆಸ್ಟಿಕ್ ಕಡೆಯಿಂದ ಬರುವ ಪ್ರಯಾಣಿಕರು ಆರ್.ವಿ. ರಸ್ತೆ ನಿಲ್ದಾಣದಲ್ಲಿ ಇಳಿದು ಪರ್ಯಾಯ ಸಾರಿಗೆ ಬಳಸಿಕೊಳ್ಳುವಂತೆ ಬಿಎಂಆರ್ ಸಿಎಲ್ ಮನವಿ ಮಾಡಿದೆ.

ಬನಶಂಕರಿ, ಜೆಪಿನಗರ ಹಾಗೂ ಯಲಚೇನಹಳ್ಳಿ ನಿಲ್ದಾಣಗಳನ್ನು ಎರಡು ದಿನ ಮುಚ್ಚಲಾಗುತ್ತದೆ. ಒಂದು ದಿನ ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಬಿಎಂಟಿಸಿ ಹೆಚ್ಚುವರಿ ಬಸ್ ಗಳ ಸೇವೆ ನೀಡಲಿದೆ. ಫೆ.26 ರ ಮುಂಜಾನೆ 5 ಗಂಟೆಯಿಂದ ರೈಲು ಸೇವೆ ಸೊರೆಯಲಿದೆ.

Cracks on tracks: Metro service to be disrupted

ಫೆ.9 ರಂದು ಜೆಪಿನಗರ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗೆ ಒಂದು ಬದಿಯ ಹಳಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಐದು ದಿನಗಳವರೆಗೆ ಮುಂದುವರೆದಿತ್ತು. ಬನಶಂಕರಿ ನಿಲ್ದಾಣದಿಂದ ಜೆಪಿನಗರ ನಿಲ್ದಾಣಕ್ಕೆ ರೈಲು 2 ನೇ ಪ್ಲಾಟ್ ಫಾರಂನಲ್ಲಿ ಬರುತ್ತದೆ. ಹಳಿ ಹಾಳಾಗಿದ್ದರಿಂದ ಜೆಪಿನಗರ ನಿಲ್ದಾಣವನ್ನು ಪ್ರವೇಶಿಸುವಾಗ ರೈಲನ್ನು ಬಲಬದಿಯ ಹಳಿಗೆ ತಿರುಗಿಸಿ ಒಂದನೇ ಪ್ಲಾಟ್ ಫಾರಂ ನಲ್ಲಿ ನಿಲ್ಲಿಸಲಾಗುತ್ತಿತ್ತು.

ಯಲಚೇನಹಳ್ಳಿ ಟರ್ಮಿನಲ್ ನಿಲ್ದಾಣ ದಿಂದ ಬರುತ್ತಿದ್ದ ರೈಲುಗಳು ಕೂಡಾ ಇದೇ ಹಳಿಯಲ್ಲಿ ಬರುತ್ತದೆ. ಇದರಿಂದಾಗಿ ಪ್ರಯಾಣಿಕರು ಒಂದೇ ಹಳಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ಪರಸ್ಪರ ವಿರುದ್ಧ ಸಿಕ್ಕಿಗೆ ತೆರಳುತ್ತಿದ್ದ ರೈಲನ್ನು ಪ್ರವೇಶಿಸುತ್ತಿದ್ದರು.

ಐದು ದಿನಗಳ ಬಳಿಕ ಹಳಿಯಲ್ಲಿನ ದೋಷವನ್ನು ತಾತ್ಕಾಲಿಕವಾಗಿ ನಿವಾರಿಸಲಾಗಿತ್ತು. ಆದರೆ ಹಳಿಯಲ್ಲಿನ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಎರಡು ದಿನ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+