ಭಾರಿ ಭ್ರಷ್ಟಾಚಾರ-ಕೋಮುವಾದದ ಬಿಜೆಪಿ ತೊಲಗಿಸಲು ಇದು ಸಕಾಲ: ಕಾಂಗ್ರೆಸ್‌ ಮನವಿ

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮೇಲೆ ಕಾಂಗ್ರೆಸ್ ಮುಗಿಬಿದ್ದಿದೆ. ಭ್ರಷ್ಟಾಚಾರ ಎತ್ತಿ ತೋರಿಸಿರುವ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರುದ್ಧ ವೆಬ್‌ಸೈಟ್ ವೊಂದನ್ನೇ ತೆರೆದಿದೆ. ಅದರಲ್ಲಿ ಬಿಜೆಪಿ ಭ್ರಷ್ಟಾಚಾರ ಕುರಿತು 186 ದೂರುಗಳು ಸಲ್ಲಿಕೆಯಾಗಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ ನೀವು ಸಹ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ತತ್ತರಿಸಿದ್ದರೆ, ನೀವು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಲು ಮನಸ್ಸು ಮಾಡಿದ್ದರೆ ಇದು ಸುವರ್ಣ ಅವಕಾಶ ಎಂದು ಹೇಳಿಕೊಂಡಿದೆ. ಭ್ರಷ್ಟಾಚಾರ ಮಾಡುವ, ಕಮಿಷನ್ ಪಡೆಯುವ ಹಾಗೂ ಕೋಮುವಾದಿ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ಥಾನವಿಲ್ಲ ಎಂದು #Defeat40PercentBJPSarkara ಹ್ಯಾಷ್ಟ್ಯಾಗ್ ಹಾಕಿ ಕಾಂಗ್ರೆಸ್ ಕಿಡಿ ಕಾರಿದೆ.

Congress Tweets Know Corruption Of Communalism 40% of BJP, Vote For Congress This Time

ಸದರಿ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು 40 ಪರ್ಸೆಂಟ್ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಕಾಂಗ್ರೆಸ್‌ ಆಗ್ರಹಿಸಿದೆ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಪಕ್ಷ ಮನವಿ ಮಾಡಿದೆ.

ಅಷ್ಟೇ ಅಲ್ಲದೇ ಭ್ರಷ್ಟ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ (https://40percentsarkara.com/#/home) ಅನ್ನು ಕ್ಲಿಕ್ ಮಾಡಿ ಎಂದು ವೆಬ್‌ಸೈಟ್‌ ವಿಳಾಸ ಸಹ ನೀಡಿದೆ.

ವೈಬ್‌ಸೈಟ್ ನಲ್ಲಿ ಏನಿದೆ?
ಚುನಾವಣೆ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು ಬಿಜೆಪಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ಸರಮಾಲೆಯನ್ನು ರಾಜ್ಯದ ಜನರ ಮುಂದೆ ಇಟ್ಟಿದೆ.

ಬಿಜೆಪಿಯ '40ಪರ್ಸೆಂಟ್ ಕಮಿಷನ್ ಸರ್ಕಾರ' ಎಂಬ ಲೈನ್‌ ಹಾಕಿ ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೊ ಹಾಕಲಾಗಿದೆ. ಅದೇ ರೀತಿ ಪಿಎಸ್ಐ ಅಕ್ರಮ, ರಸ್ತೆ ಅಭಿವೃದ್ಧಿಯಲ್ಲಿ ಹಣ ಲೂಟಿ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಸರ್ಕಾರ ಮೇಲೆ ಹಲವು ಆರೋಪ ಮಾಡಿದೆ.

Congress Tweets Know Corruption Of Communalism 40% of BJP, Vote For Congress This Time

ಬಿಜೆಪಿ ಭ್ರಷ್ಟಾಚಾರ- ಧ್ವನಿ ಏರಿಸಿ

ಇಂತಹ ಸರ್ಕಾರಕ್ಕೆ ಕರ್ನಾಟಕಕ್ಕೆ ಸ್ಥಾನ ಇಲ್ಲ. ಇವರ ವಿರುದ್ಧ ನೀವು 'ಧ್ವನಿ ಏರಿಸಿ' ಭಷ್ಟಾಚಾರ ಕುರಿತು ದೂರು ನೀಡಿ ಎಂದು ಕಾಂಗ್ರೆಸ್‌ ಕೋರಿದೆ. ಅವರ ಹಗರಣ ಬಯಲಿಗೆ ಎಳೆಯಿರಿ. ಅಲ್ಲದೇ ವೆಬ್‌ಸೈಟ್‌ನಲ್ಲಿ ಸಹಾಯವಾಣಿ (84477 04040) ನೀಡಿದೆ. ದೂರು ನೀಡುವವರಿಗೆ ಅರ್ಜಿ ನಮೂನೆಯನ್ನು ನೀಡಲಾಗಿದೆ. ಅದರಲ್ಲಿ ಹೆಸರು ದೂರವಾಣಿ ಸಂಖ್ಯೆ ದೂರಿನ ವಿವರ ಕುರಿತು ಬಿಜೆಪಿ ವಿರುದ್ಧ ಧ್ವನಿ ಏರಿಸಬಹುದು ಎಂದು ಕಾಂಗ್ರೆಸ್‌ ಹೇಳಿದೆ.

ಇದರೊಂದಿಗೆ ಈಗಾಗಲೇ ದೂರು ನೀಡಿರುವ 186 ಮಂದಿಯ ದೂರುಗಳನ್ನು ಬೇರೆಯವರಿಗೂ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಿಸಿದೆ. ಟ್ವೀಟ್ ಪೋಸ್ಟ್‌ನಲ್ಲೂ ಸಹ ಬಿಜೆಪಿ ಅಕ್ರಮಗಳ ವಿಡಿಯೋ ಹಂಚಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+