ಸಿದ್ದರಾಮಯ್ಯಗೆ ಮತ್ತೊಂದು ದುಬಾರಿ ಗಿಫ್ಟ್: ಶಿಷ್ಯ ಕೊಟ್ಟ ಉಡುಗೊರೆ!
ಬೆಂಗಳೂರು, ಜನವರಿ 19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಶಾಸಕ ಬೈರತಿ ಸುರೇಶ್ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಪರಮ ಶಿಷ್ಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ನೀಡಿರುವ ಉಡುಗೊರೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಉತ್ತರಾಧಿಕಾರಿಯನ್ನು ಬೆಳೆಸಲು ಮುಂದಾಗಿದ್ದು, ಮಗ ರಾಜಕೀಯಕ್ಕೆ ಕಾಲಿಟ್ಟರೂ ತಮ್ಮದೇ ಸಮುದಾಯದ ಬೈರತಿ ಸುರೇಶ್ ಅವರನ್ನು ಮುಂಚೂಣಿಗೆ ತರಲು ಬಯಸಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೂ ಬೈರತಿ ಪರ ಸಿದ್ದರಾಮಯ್ಯ ಒಲವು ಪ್ರದರ್ಶಿಸಿದ್ದರು.

ಈ ಕಾರಣಗಳಿಂದ ಬೈರತಿ ಸುರೇಶ್, ತಮ್ಮ ರಾಜಕೀಯ ಗುರುವಿಗೆ ಸುಮಾರು ಒಂದು ಕೋಟಿ ರೂ. ಮೌಲ್ಯದ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಕಾರು ಪದ್ಮಾವತಿ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದ್ದು, ಪದ್ಮಾವತಿ ಯಾರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಕಾರು ಸಿದ್ದರಾಮಯ್ಯ ಅವರ ಗೃಹಕಚೇರಿ ಕಾವೇರಿಯಲ್ಲಿ ನಿಂತಿದೆ.
ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಉದ್ಯಮಿ ಒಬ್ಬರೊ ದುಬಾರಿ ಹ್ಯೂಬ್ಲೊ ವಾಚ್ ಉಡುಗೊರೆ ನೀಡಿದ್ದ ಭಾರಿ ವಿವಾದಕ್ಕೆ ಕಾರಣವಾಗಿತ್ತು.












Click it and Unblock the Notifications