ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಬಿಎಂಟಿಸಿ ವಿರುದ್ಧ ದೂರುಗಳ ಸುರಿಮಳೆ
ಬೆಂಗಳೂರು, ಏಪ್ರಿಲ್ 28: ಬೆಂಗಳೂರು ಮಹಾನನಗರ ಸಾರಿಗೆ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಪ್ರಯಾಣಿಕರು ಬಸ್ ಚಾಲಕ, ನಿರ್ವಾಹಕರ ನಿರ್ಲಕ್ಷ್ಯ, ಅಸಭ್ಯ ವರ್ತನೆಗಳ ಕುರಿತು ವ್ಯಾಪಕ ದೂರುಗಳನ್ನು ದಾಖಲಿಸುತ್ತಿದ್ದಾರೆ.
ಸಂಸ್ಥೆಯ ಟ್ವಿಟ್ಟರ್, ಫೇಸ್ ಬುಕ್ ಖಾತೆಗಳು 2017ರ ನವೆಂಬರ್ ನಿಂದ ಚಾಲ್ತಿಯಲ್ಲಿದ್ದು, ಪ್ರತಿ ತಿಂಗಳು 70 ದೂರುಗಳು ದಾಖಲಾಗುತ್ತಿವೆ. ಡಿ.2017ರಲ್ಲಿ 71, 2018ರ ಜನವರಿಯಲ್ಲಿ 67, ಫೆಬ್ರವರಿಯಲ್ಲಿ 71, ಮಾರ್ಚ್ 89 ಮತ್ತು ಏಪ್ರಿಲ್ ತಿಂಗಳಿನಲ್ಲಿ 78 ಮಂದಿ ದೂರು ಸಲ್ಲಿಸಿದ್ದಾರೆ.
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ದಾಖಲಿಸುತ್ತಿದ್ದು, ತಕ್ಷಣ ಸ್ಪಂದಿಸಲಾಗುತ್ತಿದೆ. ಈ ಮೊದಲು ನಿಯಂತ್ರಣ ಕೊಠಡಿಯಲ್ಲಿ ಕೇವಲ ದೂರುಗಳಷ್ಟೇ ಸ್ವೀಕರಿಸಲಾಗುತ್ತಿತ್ತು.ಆದರೆ ದೂರು ನೀಡಿದವರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಾಗುತ್ತಿರಲಿಲ್ಲ. ಈ ಬೇಸಿಗೆಯಲ್ಲಿ ಹವಾನಿಯಂತ್ರಿತ ಬಸ್ ಗಳನ್ನು ಎಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಪ್ರಯಾಣಿಕರು ದೂರು ನೀಡುತ್ತಿದ್ದಾರೆ.
Soon you will get to know about status of your complaint in our website only. pic.twitter.com/4jMggYUQpo
— BMTC (@BMTC_BENGALURU) April 16, 2018
ಅಲ್ಲದೇ ಟ್ವಿಟ್ಟರ್, ಫೇಸ್ ಬುಕ್ ಖಾತೆಗಳಲ್ಲಿ ಪ್ರಯಾಣಿಕರು ಹಲವಾರು ಅಭಿಪ್ರಾಯಗಳನ್ನೂ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕರೊಬ್ಬರು ತುಂಬಾ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆಂದು ಕೆಲವರು ದೂರು ಸಲ್ಲಿಸಿದರೆ ಮತ್ತೊಂದು ಪ್ರಕರಣದಲ್ಲಿ ರಸ್ತೆ ಮಧ್ಯದಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಪ್ರಯಾಣಿಕರು ಬಸ್ಸೇರಲು ಆಗುತ್ತಿಲ್ಲ, ಸಂಚಾರ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.












Click it and Unblock the Notifications