ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಲ್ಲಿ 2 ದಿನದಿಂದ ಅತೀ ಕಡಿಮೆ ತಾಪಮಾನ ದಾಖಲು, ಚಳಿ ಏರಿಕೆ

|
Google Oneindia Kannada News

ಬೆಂಗಳೂರು ಜನವರಿ 17: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಮತ್ತೆ ತೀವ್ರ ಚಳಿ ಹಾಗೂ ದಟ್ಟ ಮಂಜಿನ ವಾತವರಣ ಆವರಿಸಿದೆ. ನಾಲ್ಕು ವರ್ಷಗಳ ನಂತರ ಆಗಾಗ ಅತಿ ಕನಿಷ್ಠ 13ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.

ನಗರದಲ್ಲಿ ಕಳೆದ ವಾರವಷ್ಟೇ 12.5 ರಿಂದ 13 ಡಿಗ್ರಿ ಸೆಲ್ಸಿಯಸ್ ನಷ್ಟು ಅತೀ ಕನಿಷ್ಠ ತಾಪಮಾನ ದಾಖಲಾಗಿತ್ತು. ಇದು 2018ರಿಂದ ಈಚೆಗೆ ಕಂಡು ಬಂದಿದ್ದು, ಅತೀ ಕನಿಷ್ಠ ಹಾಗೂ ತೀವ್ರ ಚಳಿ ಪ್ರಮಾಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಭಾನುವಾರ ಸಂಜೆಯಿಂದ ಬೆಂಳೂರಿನಲ್ಲಿ ಮತ್ತೆ ಚಳಿ, ತೇವಾಂಶ ಭರಿತ ಗಾಳಿ ಬೀಸುವಿಕೆ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಉತ್ತರ ಭಾಗದಿಂದ ಗಾಳಿ ಹೆಚ್ಚಾಗಿ ಬಿಸುತ್ತಿದೆ. ಚಳಿಗಾಲದಲ್ಲಿ ಅದರಲ್ಲೂ ಜನವರಿಯಲ್ಲಿ ಸಾಮಾನ್ಯವಾಗಿ ಚಳಿ ತುಸು ಹೆಚ್ಚೆ ಕಂಡು ಬರತ್ತದೆ. ಆಕಾಶ ನಿರ್ಮಲವಾಗಿದ್ದು, ಭೂಮಿಯ ತಾಪಮಾನ ಬಹುಬೇಗನೇ ಇಳಿಕೆಯಾಗುವ ಕಾರಣ ಬೆಳಗ್ಗೆ ಚುಮು ಚುಮು ಚಳಿ ಕಂಡು ಬರುತ್ತದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

Bengaluru Cold: recorded very lowest 13 degree temperature last 2 days

ನಗರದಲ್ಲಿ ಸೋಮವಾರ ಹಾಗೂ ಮಂಗಳವಾರ ಬೆಳಗ್ಗೆ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಚಳಿ ಹೆಚ್ಚಾಗಿದೆ. ಇದು ಬುಧವಾರವರೆಗೆ ಮುಂದುವರಿಯಲಿದೆ. ನಂತರ ಮಂಜು ಹಾಗೂ ತಂಪು ವಾತಾವರಣದಲ್ಲಿ ತುಸು ಕಡಿಮೆಯಾಗಿ ವಾತಾವರಣ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಬರಲಿದೆ. ನಂತರದ ದಿನಗಳಲ್ಲಿ ಗುರುವಾರದಿಂದ ಕನಿಷ್ಠ ತಾಪಮಾನ 14-15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 29-30ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ವರದಿ ತಿಳಿಸಿದೆ.

Bengaluru Cold: recorded very lowest 13 degree temperature last 2 days

ಬಾಗಲಕೋಟೆಯಲ್ಲಿ ಚಳಿ ಏರಿಕೆ

ಇನ್ನೂ ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಬಾಗಲಕೋಟೆ ಅತೀ ಕನಿಷ್ಠ ಉಷ್ಣಾಂಶ 8.6ಡಿಗ್ರಿ ಸೆಲ್ಸಿಯಸ್ ಹಾಗೂ ಮೈಸೂರಲ್ಲಿ ಕನಿಷ್ಠ 9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಾಗಲಕೋಟೆ, ಮಂಡ್ಯ, ಮೈಸೂರು, ಚಿತ್ರದುರ್ಗ ಸೇರಿದಂತೆ ಕೆಲವೆಡೆ ಮುಂದಿನ ನಾಲ್ಕು ದಿನ ದಿನ ಇದೇ ವಾತಾವರಣ ಮುಂದುವರಿಯಲಿದೆ. ಈ ಭಾಗದಲ್ಲಿ ಶೀತದ ಅಲೆಗಳು ಸಕ್ರಿಯವಾಗಿವೆ ಎಂದು ವಿಜ್ಞಾನಿ ಡಾ. ಪ್ರಸಾದ್ ಹೇಳಿದ್ದಾರೆ.

English summary
Bengaluru Cold: Bengaluru recorded very lowest 13 degree temperature last 2 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X