Get Updates
Get notified of breaking news, exclusive insights, and must-see stories!

Bengaluru Theft Cases: ಬೆಂಗಳೂರಿಗೆ ಎಂಟ್ರಿ ಕೊಟ್ಟ ಖತರ್ನಾಕ್ ಕಳ್ಳರ ಗ್ಯಾಂಗ್, ಸಿನಿಮಾ ಸ್ಟೈಲ್‌ನಲ್ಲಿ ಕಳ್ಳತನ!

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್ ಹಾಗೂ ಕಾರು ಚಾಲನೆ ಮಾಡುವವರೊಂದಿಗೆ ಜಗಳ / ರೋಡ್‌ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಪ್ರಕರಣಗಳು ವರದಿಯಾಗುತ್ತಿವೆ. ಹೌದು ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಘಟನೆ ನಗರದ ನಿರ್ದಿಷ್ಟ ಭಾಗದ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಮನೆ ಕಳ್ಳತನ ಪ್ರಕರಣ ಹೆಚ್ಚಳವಾಗಿದೆ. ಕಳೆದ 15 ದಿನಗಳಲ್ಲಿ ಸಾಲು ಸಾಲು ಮನೆಗಳ ಕಳ್ಳತನವನ್ನು ಖತರ್ನಾಕ್ ಗ್ಯಾಂಗ್‌ ಮಾಡುತ್ತಿದೆ. ಈ ಕಳ್ಳರು ಕಾರುಗಳಲ್ಲಿ ಬಂದು ಮನೆ ಕಳ್ಳತನವನ್ನು ಮಾಡುತ್ತಿದ್ದಾರೆ. ಖತರ್ನಾಕ್ ಗ್ಯಾಂಗ್‌ನ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ವಿಶ್ವದ ಪ್ರಮುಖ ನಗರಗಳಲ್ಲಿ ಒಂದು ಹಾಗೂ ಸಿಲಿಕಾನ್‌ ಸಿಟಿಯಾಗಿರುವ ಬೆಂಗಳೂರಿನಲ್ಲಿ ಇದೀಗ ಮತ್ತೊಂದು ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಮನೆಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಆತಂಕಕ್ಕೆ ಕಾರಣವಾಗಿರುವ ಮತ್ತೊಂದು ವಿಷಯವೆಂದರೆ ರೀತಿ ಮನೆಗಳನ್ನು ಕಳ್ಳತನ ಮಾಡುತ್ತಿರುವ ಖತರ್ನಾಕ್ ಗ್ಯಾಂಗ್ ಕಳ್ಳರ ಚಾಲಾಕಿತನ. ಕಳೆದ ಎರಡು ವಾರದ ಅವಧಿಯಲ್ಲಿ ಸಾಲು.. ಸಾಲು ಕಳ್ಳತನಗಳು ಆಗಿದ್ದು. ಬೆಂಗಳೂರು ಪೊಲೀಸರು ಅಲರ್ಟ್‌ ಆಗಬೇಕು ಅಂತ ಜನ ಒತ್ತಾಯಿಸುತ್ತಿದ್ದಾರೆ.

Cinema Style Theft by Gang of Dangerous Thieves in Bengaluru

ಕಾನೂನು ಸುವ್ಯವಸ್ಥೆಗೆ ಬೆಂಗಳೂರು ಹೆಸರು ವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯುವುದು ಮುಂದುವರಿದಿದೆ. ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ, ಗೋವುಗಳಿಗೆ ಹಿಂಸೆ ಹಾಗೂ ರೋಡ್‌ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಜನ ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಖತರ್ನಾಕ್ ಗ್ಯಾಂಗ್‌ನಿಂದ ದರೋಡೆ: ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್‌ವೊಂದು ದರೋಡೆಗೆ ಇಳಿದಿದೆ. ಬೆಂಗಳೂರಿನಲ್ಲಿ ಐಷಾರಾಮಿ ಕಳ್ಳತನ ನಡೆಯುತ್ತಿದೆ. ಕಾರುಗಳಲ್ಲಿ ಬರುವ ಖತರ್ನಾಕ್ ಕಳ್ಳರು ಮುಖ ಮುಚ್ಚಿಕೊಂಡು ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡುತ್ತಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲಾಗುತ್ತಿದೆ.

Cinema Style Theft by Gang of Dangerous Thieves in Bengaluru

ಈ ಕಳ್ಳರು ಬೆಳಗ್ಗೆ ಸಮಯದಲ್ಲಿ ಏರಿಯಾಗಳಲ್ಲಿ ಸುತ್ತುತ್ತಿದ್ದು. ಎಲ್ಲೆಲ್ಲಿ ಐಷಾರಾಮಿ ಮನೆಗಳಿವೆ, ಯಾವ ಮನೆಗಳಿಗೆ ಬೀಗ ಹಾಕಲಾಗಿದೆ ಎಂದು ನೋಡಿಕೊಂಡು ನಂತರ ರಾತ್ರಿ ಸುಮಾರು 1ರಿಂದ 2 ಗಂಟೆಯ ನಡುವೆ ಈ ತಂಡ ಕಳ್ಳತನ ಮಾಡುತ್ತಿದೆ. ಬೀಗ ಮುರಿದು ಮನೆಗಳಿಗೆ ನುಗ್ಗುತ್ತಿದ್ದು ಮನೆಗಳ ಕಳ್ಳತನವನ್ನು ಮಾಡಲಾಗುತ್ತಿದೆ. ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳು, ಚಿನ್ನ ಹಾಗೂ ದುಡ್ಡನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಮತ್ತೆ ಕಾರ್‌ನಲ್ಲಿಯೇ ವೇಗವಾಗಿ ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

15 ದಿನಗಳಲ್ಲಿ 20 ಮನೆಗಳಲ್ಲಿ ಕಳ್ಳತನ!

ಬೆಂಗಳೂರಿನ ಹೊರ ವಲಯದಲ್ಲಿ ಮನೆಗಳ ಕಳ್ಳತನ ಪ್ರಕರಣ ಹೆಚ್ಚಳವಾಗಿದೆ. ಬೆಂಗಳೂರಿನ ಹೊರವಲಯ ಹಾಗೂ ಆವಲಹಳ್ಳಿ ಪ್ರದೇಶದಲ್ಲಿ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿನ 5 ಪ್ರಮುಖ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಖತರ್ನಾಕ್ ಗ್ಯಾಂಗ್ ಮನೆಗಳ ಕಳ್ಳತವನ್ನು ಮಾಡುತ್ತಿದೆ. ಈ ಸಂಬಂಧ ಆವಲಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಹೊರತಾಗಿಯೂ ಕಳ್ಳತನ ನಡೆಯುವುದು ಮಾತ್ರ ನಿಲ್ಲುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಆವಲಹಳ್ಳಿಯಲ್ಲಿ ಕೆಲವೇ ಗಂಟೆಗಳಲ್ಲಿ ಎರಡೆರಡು ಕಡೆ ಮನೆಗಳ ಕಳ್ಳತನ ಆಗಿರುವುದು ಸಹ ವರದಿಯಾಗಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+