ಕಂಟೋನ್ಮೆಂಟ್-ವೈಟ್‌ಫೀಲ್ಡ್ ಜೋಡಿ ರೈಲ್ವೆ ಹಳಿಗೆ ಸಮ್ಮತಿ

ಬೆಂಗಳೂರು, ಮಾರ್ಚ್ 22: ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವೆ 25ಕಿ.ಮೀ ಉದ್ದದ ಹೊಸ ಜೋಡಿಹಳಿ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಇದು ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರಕವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

492.8 ಕೋಟಿ ರೂ ವೆಚ್ಚದಲ್ಲಿ ಈಗಿರುವ ಎರಡು ಹಳಿಯ ಮತ್ತೆರೆಡು ಹಳಿ ನಿರ್ಮಾಣವಾಗಲಿದೆ. ಐಟಿ ಕಾರಿಡಾರ್ ವೈಟ್‌ಫೀಲ್ಡ್ ಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಹೆಚ್ಚಿನ ರೈಲು ಓಡಾಟಕ್ಕೆ ಹಲವು ದಶಕಗಳಿಂದ ಬೇಡಿಕೆ ಇದೆ. 1997-98ರಲ್ಲಿ ಬೆಂಗಳೂರು ನಗರದಿಂದ ಕಂಟೋನ್ಮೆಂಟ್ ಮೂಲಕ ವೈಟ್‌ಫೀಲ್ಡ್ ವರೆಗೆ ಹೊಸ ಜೋಡಿ ಹಳಿ ನಿರ್ಮಾಣ ಯೋಜನೆ ಬಜೆಟ್ ನಲ್ಲಿ ಘೋಷಣೆಯಾಗಿತ್ತು.

ನಂತರದಲ್ಲಿ ಈ ಕುರಿತು ಯಾವುದೇ ಆಸಕ್ತಿಯನ್ನು ರೈಲ್ವೆ ಇಲಾಖೆ ವಹಿಸದಿದ್ದ ಕಾರಣ ಜಾಗದ ಕೊರತೆ, ಭೂಸ್ವಾಧೀನ ಮೌಲ್ಯ ಹೆಚ್ಚಾಗುತ್ತ ಯೋಜನೆಯೇ ರದ್ದಾಗುವ ಹಂತಕ್ಕೆ ಬಂದಿತ್ತು. 2013ರಲ್ಲಿ ಯೋಜನಾ ವೆಚ್ಚ ಹಂಚಿಕೊಳ್ಳುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕಳುಹಿಸಿತ್ತಾದರೂ ಕೊನೆಯಲ್ಲಿ ಹಿಂದೆ ಸರಿದಿತ್ತು.

Central nod for Contonment-White field new double lane project

3ವರ್ಷಗಳಲ್ಲಿ ಪೂರ್ಣ: ಕಂಟೋನ್ಮೆಂಟ್ -ವೈಟ್‌ಫೀಲ್ಡ್ ನಡುವೆ ಅತಿ ಶೀಘ್ರ ಹಳಿ ಕಾಮಗಾರಿ ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಮುಂದಿನ 3 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಈ ಮೂಲಕ ಐಟಿ ಹಬ್ ಗೆ ಸೂಕ್ತ ಸಾರಿಗೆ ಸಂಪರ್ಕ ದೊರೆಯಲಿದ್ದು, ನಿತ್ಯ 62ಸಾವಿರ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ ಎಂದು ನೈಋತ್ಯ ರೈಲ್ವೆ ಅಂದಾಜಿಸಿದೆ.

ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು ಈಸ್ಟ್, ಬೈಯಪ್ಪನಹಳ್ಳಿ, ಕೆಆರ್ ಪುರ, ಹೂಡಿ ಮತ್ತು ವೈಟ್ ಫೀಲ್ಡ್ ಹೀಗೆ 6 ನಿಲ್ದಾಣಗಳು ಈ ಮಾರ್ಗದಲ್ಲಿ 4 ಹಳಿಗೆ ತಕ್ಕಂತೆ ಅಭಿವೃದ್ಧಿಯಾಗಲಿದೆ. ಈಗ ಬೆಂಗಳೂರು ನಗರ ಮತ್ತು ವೈಟ್‌ಫೀಲ್ಡ್ ನಡುವೆ ಇರುವ ಏಕೈಕ ಜೋಫಡಿ ಹಳಿ ಅತಿಹೆಚ್ಚು ದಟ್ಟಣೆಯಿಂದ ಕೂಡಿದ್ದು, ಬೆಂಗಳೂರಿನಿಂದ 146 ಮತ್ತು ಯಶವಂತಪುರದಿಂದ 94ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+