ಬ್ರಿಗೇಡ್ ಅಜಂ ಕೊಲೆಗೆ ಸ್ಕೆಚ್ ಹಾಕಿದ್ದ ಅಮೀರ್ ಬಂಧನ
ಬೆಂಗಳೂರು, ಮೇ 7 : ರೌಡಿ ಬ್ರಿಗೇಡ್ ಅಜಂನನ್ನು ಕೊಲೆ ಮಾಡಲು ಕಾದು ಕುಳಿತಿದ್ದ ಕುಖ್ಯಾತ ರೌಡಿ ಅಮೀರ್ ಖಾನ್ ಮತ್ತು ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಖಾನ್ ಕೋಳಿ ಫಯಾಜ್ ಪುತ್ರ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಕನ್ಸನ್ ರಸ್ತೆಯ ಸಮೀಪ ಅಮೀರ್ ಖಾನ್ ಮತ್ತು ಆತನ ಸಹಚರರು ರೌಡಿ ಅಜಂಗಾಗಿ ಕಾದು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. [ಕಾಂಗ್ರೆಸ್ಸಿಗರ ಜತೆ ಕಂಡ ರೌಡಿ ಅಜಂ ಬಂಧನ]

ಬಂಧಿತರನ್ನು ಅಮೀರ್ ಖಾನ್ ಅಲಿಯಾಸ್ ಪಪ್ಪು, ಆಸೀಪ್ ಅಲಿಯಾಸ್ ಮೆಂಟಲ್, ರೋಸನ್ ಅಲಿಯಾಸ್ ಜಮೀರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಡ್ರಾಗರ್, 1 ಚಾಕು, ಖಾರದ ಪುಡಿ ಪೊಟ್ಟಣವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ದಾಳಿ ನಡೆಸಿದಾಗ ಶಿವಾಜಿನಗರದ ಮುದಾಸೀರ್ ಸಹ ಸ್ಥಳದಿಂದ ಪರಾರಿಯಾಗಿದ್ದು ಆತನಿಗಾಗಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಮೀರ್ ಖಾನ್ ಕೋಳಿ ಫಯಾಜ್ ಮಗನಾಗಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ಅಜಂನನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಮೀರ್ ಖಾನ್ ವಿರುದ್ಧ ಶಿವಾಜಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಅಜಂನನ್ನು ಕೊಲೆ ಮಾಡಿ ಹಣ ದೋಚಲು ಸಂಚು ರೂಪಿಸಿದ್ದು, ಅದಕ್ಕಾಗಿ ಮಾರಕಾಸ್ತ್ರಗಳೊಂದಿಗೆ ಸಿದ್ಧವಾಗಿದ್ದೆವು ಎಂದು ಅಮೀತ್ ಖಾನ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.












Click it and Unblock the Notifications