ನಿಮ್ಮ ಹಾಗೂ ಕುಟುಂಬದ ಸುರಕ್ಷತೆಗಾಗಿ ಬಳಸಿ ಕ್ಯಾಚ್‌ಮಿ ಆ್ಯಪ್
ಬೆಂಗಳೂರು, ಡಿಸೆಂಬರ್ 19: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಅದನ್ನು ತಡೆಯುವ ನಿಟ್ಟಿನಲ್ಲಿ 'ಕ್ಯಾಚ್‌ಮಿ' ಅಪ್ಲಿಕೇಷನ್ ಬಿಡುಗಡೆಗೊಳಿಸಲಾಗಿದ್ದು, ನಿಮ್ಮ ಮಕ್ಕಳು, ಪತ್ನಿ, ಪತಿ, ತಂದೆ-ತಾಯಿ, ಸ್ನೇಹಿತರು ಎಲ್ಲಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಲೈವ್ ಲೊಕೇಷನ್ ಒಮ್ಮೆ ಶೇರ್ ಮಾಡಿದರೆ ಸಾಕು ಇಡೀ ದಿನ ನೀವೆಲ್ಲಿದ್ದೀರಾ ಎನ್ನುವ ಮಾಹಿತಿ ಲಭ್ಯವಾಗುತ್ತದೆ.
ಕ್ಯಾಬ್‌ಗಳು, ಸ್ಕೂಲ್, ಬಸ್ , ಸಮೂಹ ಸಾರಿಗೆ ಕೂಡ ಸುರಕ್ಷಿತವಾಗಿಲ್ಲ ಎಂಬ ಆತಂಕ ಎಲ್ಲರಲ್ಲಿದೆ ಅಷ್ಟೇ ಅಲ್ಲದೆ ಕೆಲವರು ಮನೆಯಲ್ಲಿ ಇರಲು ಕೂಡ ಭಯ ಪಡುತ್ತಾರೆ ಅಂತಹ ಸಮಯದಲ್ಲಿ ಈ ಅಪ್ಲಿಕೇಷನ್ ಸಹಾಯ ಮಾಡಲಿದೆ.

ಈ ಅಪ್ಲಿಕೇಷನ್ ನ್ನು ಎಸ್‌ಓಎಸ್ ಕೋಡ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಎಸ್‌ಓಎಸ್ ಅಲಾರ್ಮ್ ಫ್ಯೂಚರ್ ಮೂಲಕ ನಿಮಗೆ ಬೇಕಾದವರಿಗೆ ಅಲರ್ಟ್ ಮೆಸೇಜ್ ಕಳುಹಿಸುವಂತೆ ಮಾಡಬಹುದು.ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ, ಮೊದಲು ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ, ಅದಕ್ಕೆ ಓಟಿಪಿ ಬರುತ್ತದೆ .

ಅದನ್ನು ನಮೂದಿಸಿ, ಬಳಿಕ ನಿಮ್ಮ ಲೈವ್ ಲೊಕೇಷನ್ ಶೇರ್ ಮಾಡಬಹುದು. ಸೇಫ್ ಸರ್ಕಲ್ ಗಳನ್ನು ಮಾಡಿಕೊಂಡು ಎಲ್ಲರಿಗೂ ಲೊಕೇಷನ್ ಕಳುಹಿಸಬಹುದು. ಶಾಲಾ ಬಸ್, ಸಾಕು ಪ್ರಾಣಿಗಳು ಸೇರಿದಂತೆ ಇತರರನ್ನು ಸುಲಭವಾಗಿ ಎಲ್ಲಿದ್ದಾರೆ ಎಂದು ಕಂಡುಹಿಡಿಯಬಹುದಾಗಿದೆ.












Click it and Unblock the Notifications