ಗ್ರಾಹಕರಿಗೆ ಹೊರೆಯಾಗಲಿದೆಯೇ, ಕೇಬಲ್, ಡಿಟಿಎಚ್ ಹೊಸ ದರ?

Recommended Video

      ಗ್ರಾಹಕರಿಗೆ ಹೊರೆಯಾಗಲಿದೆಯೇ, ಕೇಬಲ್, ಡಿಟಿಎಚ್ ಹೊಸ ದರ?

      ಬೆಂಗಳೂರು, ಡಿಸೆಂಬರ್ 21: ಕೇಬಲ್, ಡಿಟಿಎಚ್ ಹೊಸ ದರ ಗ್ರಾಹಕರಿಗೆ ಹೊರೆಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

      ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜನವರಿ 1ರಿಂದ ಕೇಬಲ್ ಹಾಗೂ ಡಿಟಿಎಚ್ ಗಳಿಗೆ ಹೊಸ ದರ ನಿಗದಿಪಡಿಸಿರುವ ಕ್ರಮಕ್ಕೆ ಕೇಬಲ್ ಹಾಗೂ ಡಿಟಿಎಚ್ ಆಪರೇಟರ್ಸ್ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

      ಟ್ರಾಯ್ ನಿಗದಿಪಡಿಸಿರುವ ಹೊಸ ದರದ ಅನ್ವಯ ಹೊಸ ವ್ಯವಸ್ಥೆಯಲ್ಲಿ 100 ಚಾನೆಲ್ ಆಯ್ಕೆಗೆ ಅವಕಾಶವಿರುತ್ತದೆ. ಟ್ರಾಯ್ ಹೊಸದರ ನಿಗದಿ ನಿರ್ಧಾರವನ್ನು ಹಿಂಪಪಡೆಯಬೇಕು, ಇಲ್ಲವೇ ಹೊಸದರ ನಿಗದಿ ಕ್ರಮದಿಂದ ಗ್ರಾಹಕರಿಗೆ ಯಾವ ರೀತಿಯ ಅನನುಕೂಲ ಆಗಲಿದೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಕುರಿತು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ.

      Cable operators protest over new TRAI norms

      ದೂರದರ್ಶನದ 26 ಚಾನೆಲ್‌ಗಳು ಕಡ್ಡಾಯವಾಗಿರಲಿವೆ. ಜೊತೆಎ ಶೇ.18ರಷ್ಟು ಜಿಎಸ್‌ಟಿ ತೆರಿಗೆ ಒಳಗೊಂಡು ರೂ. 130 ಪಾವತಿಸಬೇಕು. ಹೆಚ್ಚುವರಿಯಾಗಿ 25 ಚಾನೆಲ್‌ಗಳನ್ನು ಪ್ರಸಾರ ಸಿಗಲಿದೆ. ಉಳಿದಂತೆ ಯಾವುದೇ ಹೊಸ ಚಾನೆಲ್ ನಿಗದಿ ಪಡಿಸಿದರೂ ಟ್ರಾಯ್ ದರ ಹೊಸದಾಗಿ ಪಾವತಿಸಬೇಕು.

      ಟ್ರಾಯ್ ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚು ಹೊರೆ ಬೀಳಲಿದೆ. ಉದಾಹರಣೆಗೆ 10 ಚಾನೆಲ್ ಗಳನ್ನು ಗ್ರಾಹಕ ಖರೀದಿಸದರೆ 19 ರೂಗಳಂತೆ 190 ಹೆಚ್ಚುವರಿ ಹೊರೆ ಬೀಳಲಿದೆ.ಇದರಿಂದ ಈ ಹಿಂದೆ ಆಪರೇಟರ್ಸ್‌ಗಳು ನಗರದ ಭಾಗದಲ್ಲಿ 300 ರೂಗಳಿಗೆ 400 ಚಾನೆಲ್‌ ನೀಡುತ್ತಿದ್ದರು, ಇದಕ್ಕೆ ಹೋಲಿಸಿದರೆ ಹೊಸ ದರ ನಿಗದಿ ಗ್ರಾಹಕರಿಗೆ ಸಂಕಷ್ಟ ಎಂಬುದು ಕೇಬಲ್ ಆಪರೇಟರ್ಸ್‌ಗಳ ವಾದವಾಗಿದೆ.

      ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ.ಬಹುತೇಕ ಅನಕ್ಷರಸ್ಥರಾಗಿರುವ ಗ್ರಾಹಕರಿಗೆ ಹೊಸ ದರ ವ್ಯವಸ್ಥೆ, ತಮಗಿಷ್ಟ ಬಂದ ಚಾನೆಲ್ ಬೇಕು ಎಂದರೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಬೇಕು ಎಂಬುದು ಹೇಗೆ ಅರ್ಥವಾಗಲಿದೆ ಎಂಬ ಅಂಶವನ್ನೂ ಮುಂದಿಡುತ್ತಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+