ಕನಕಪುರ ರಸ್ತೆಯ ಮೆಟ್ರೋ ಸೇವೆ 2020ಕ್ಕೆ ಲಭ್ಯ, ಕಾಮಗಾರಿ ಯಾವ ಹಂತದಲ್ಲಿದೆ?
ಬೆಂಗಳೂರು,
ಮಾರ್ಚ್ 4: ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ 2020ರ ಹೊತ್ತಿಗೆ ನಮ್ಮ ಮೆಟ್ರೋ ಸೇವೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. id="toptextpromo"> id='are-slot-1' class='oiad oi-axt oiadv'>ಯಲಚೇನಹಳ್ಳಿ-ಅಂಜನಾಪುರ
ಮಾರ್ಗದಲ್ಲಿ ಭಾನುವಾರದಿಂದ ಹಳಿ ಅಳವಡಿಸುವ ಕಾರ್ಯ ಆರಂಭವಾಗಿದೆ. ಪದೇ ಪದೇ ಗಡುವು ಮುಂದಕ್ಕೆ ಹೋದರೂ ಈ ಬಾರಿ ಆಗಸ್ಟ್ ಗುರಿಯನ್ನು ಇರಿಸಿಕೊಳ್ಳಲಾಗಿದೆ. id='are-slot-2' class='oiad oi-axt oiadv'>
ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಕಾಮಗಾರಿ
ಯಲಚೇಹಳ್ಳಿ-ಅಂಜನಾಪುರ ಮಾರ್ಗದ ಒಟ್ಟು 6.05 ಕಿ.ಮೀ ಮೆಟ್ರೋ ಮಾರ್ಗದಲ್ಲಿ ಹಳಿ ಅಳವಡಿಸುವ ಕಾರ್ಯ ಆರಂಭವಾಗಿದೆ. ಎರಡೂ ಕಡೆಯ ಹಳಿಗಳ ಕಂಬಿಗಳನ್ನು ಅಳವಡಿಸಲಾಗುತ್ತಿದೆ. 2019ರ ಅಕ್ಟೋಬರ್ ಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಹಳಿಗಳಿಗೆ ವಿದ್ಯುತ್ ಪೂರೈಸುವ ಹಳದಿ ಪಟ್ಟಿ ಅಳವಡಿಕೆ
ಹಳಿಗಳಿಗೆ ವಿದ್ಯುತ್ ಪೂರೈಕೆ ಮಾಡುವ ಹಳದಿ ಪಟ್ಟಿ ಅಳವಡಿಕೆ ಕಾಮಗಾರಿಯೂ ಆರಂಭವಾಗಲಿದೆ. ರೈಲು ಹಳಿಯಲ್ಲಿ ಓಡಾಡಲು ನಿಲ್ದಾಣಗಳ ನಡುವೆ ಹಾಗೂ ರೈಲಿನ ನಡುವೆ ಸಿಗ್ನಲ್‌ಗಳನ್ನು ಅಳವಡಿಸಿ ಅದನ್ನು ನಿಯಂತ್ರಣ ಕೊಠಡಿಗೆ ಸಂಪರ್ಕಿಸಬೇಕು.

ಕನಕಪುರ ರಸ್ತೆಯ ಮೆಟ್ರೋ ಕಾಮಗಾರಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ
ಕನಕಪುರ ರಸ್ತೆಯ ಮೆಟ್ರೋ ಕಾಮಗಾರಿಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಮಾಡುತ್ತಿದೆ. 2017ರಲ್ಲಿ ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಕಾಮಗಾರಿ ಪರಿಶೀಲಿಸಿದ್ದಾಗ 2018ರ ಮಾರ್ಚ್ ನಲ್ಲಿ ಸಿವಿಲ್ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು.

ಭೂಸ್ವಾಧೀನ ಪ್ರಕ್ರಿಯೆಯದ್ದೇ ತೊಂದರೆ
2018ರ ಅಂತ್ಯದಲ್ಲಿ ಈ ಮಾರ್ಗದಲ್ಲಿ ಸಂಚಾರ ಆರಂಭಿಸುವ ಗುರಿ ಇತ್ತು, ಆದರೆ ನಿಲ್ದಾಣಗಳ ನಿಮಾ್ಣದಲ್ಲಿ ವಿಳಣಬ, ಭೂಸ್ವಾದೀನ ಪ್ರಕ್ರಿಯೆ ನಿಧಾನ ಮೊದಲಾದ ಕಾರಣಗಳಿಂದ ಗಡುವು ಮುಂದಕ್ಕೆ ತ್ತು. ನವದೆಹಲಿಯ ಟೆಕ್ಸ್ ಮ್ಯಾಕೋ ರೇಲ್ ಮತ್ತು ಎಂಜಿನಿಯರಿಂಗ್ ಕಂಪನಿ ಮೆಟ್ರೋ 2ನೇ ಎಲ್ಲಾ ಮಾರ್ಗಗಳು ಹಾಗೂ ಡಿಪೋಗಳಲ್ಲಿ 530 ಕೋಟಿ ರೂ ವೆಚ್ಚದಲ್ಲಿ ಹಳಿ ಅಳವಡಿಸಲಿದೆ.












Click it and Unblock the Notifications