ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ: ಡಿಸಿ ತಮ್ಮಣ್ಣ
ಬೆಂಗಳೂರು, ಜನವರಿ 3: ಸದ್ಯಕ್ಕೆ ಬಸ್ ಡಿಕೆಟ್ ದರ ಏರಿಕೆಯಿಲ್ಲ ಎಂದು ಸಚಿವ ಡಿಸಿ ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ದರ ಇಳಿಕೆಯಾಗುತ್ತ ಹೋದರೆ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡುವುದೇ ಬೇಕಾಗಿಲ್ಲ, ಸ್ವಲ್ಪ ದಿನ ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.
ದರ ಏರಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಬಸ್ ದರ ಏರಿಕೆ ಕುರಿತು ಇನ್ನೂ ಅಂತಿಮವಾಗಿಲ್ಲ, 53 ರೂ ಇದ್ದಾಗ ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನಂತರದಲ್ಲಿ ಡೀಸೆಲ್ ದರ 75 ರೂಗೆ ಏರಿಕೆಯಾಗಿತ್ತು, ಪ್ರಸ್ತುತ 63-65 ರೂ ಇದೆ. ದಿನೇ ದಿನೇ ಡೀಸೆಲ್ ದರ ಇಳಿಯುತ್ತಿದೆ, ಮತ್ತಷ್ಟು ಇಳಿದರೆ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದಿದ್ದಾರೆ. ಬಸ್ ಹಿಂಬದಿ ಇರುವ ಜಾಹೀರಾತಿನಿಂದ ಅಪಘಾತವಾಗುತ್ತಿಲ್ಲ ಅಪಘಾತಕ್ಕೆ ನೂರೆಣಟು ಕಾರಣಗಳಿರುತ್ತವೆ ಎಂದು ಹೇಳಿದರು.












Click it and Unblock the Notifications