ಕಳೆದು ಹೋಗಿದ್ದ 5 ವರ್ಷದ ಬಾಲಕ ವಾಟ್ಸಪ್‌ನಿಂದಾಗಿ ಮನೆಗೆ ಮರಳಿದ
ಬೆಂಗಳೂರು, ಜೂನ್ 24: ಕಳೆದು ಹೋಗಿದ್ದ ಮೊಬೈಲ್ ವಾಟ್ಸಪ್ ಕಳೆದ ಹೋಗಿದ್ದ ಬಾಲಕನನ್ನು ಐದು ಗಂಟೆಯ ಒಳಗೆ ಪೋಷಕರ ಬಳಿ ಸೇರಿಸಲು ಸಾಧ್ಯವಾಯಿತು. ಭಾನುವಾರ ಕಾಣೆಯಾಗಿದ್ದ ಐದು ವರ್ಷದ ಬಾಲಕನನ್ನು ಪೊಲೀಸರು ಐದು ಗಂಟೆಗಳಲ್ಲೇ ಪತ್ತೆ ಹಚ್ಚಿದ್ದಾರೆ.
ಕಂಡಕ್ಟರ್ ಪುಟ್ಟರಾಜು ಎನ್ನುವವರು ಕೆಎಸ್ ಲೇಔಟ್ ಕಡೆ ಹೋಗುತ್ತಿದ್ದ ತಮ್ಮ ಬಸ್ಸಿನಲ್ಲಿ ಮಗುವನ್ನು ನೋಡಿದ್ದಾರೆ. ಮಗು ಪೋಷಕರನ್ನು ಹುಡುಕುತ್ತಿತ್ತು. ಮಗುವಿನ ಪೋಷಕರು ಹಿಂದಿನ ಬಸ್ ಸ್ಟಾಪಿನಲ್ಲಿ ಎಲ್ಲಾದರೂ ಇಳಿದುಕೊಂಡಿದ್ದಾರೆಯೇ ಎನ್ನುವ ಅನುಮಾನ ಬಂದಿತ್ತು. ಮಗುವನ್ನು ತಲಘಟ್ಟ ಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಗು ತನ್ನ ಹೆಸರು ರಾಹುಲ್ ಎಂದು ಹೇಳಿದ್ದಾನೆ. ಬಳಿಕ ಪೊಲೀಸರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ.

ಗಣಪತಿಪುರದ ನೇತ್ರಾ ಬಾಯಿ ಎಂಬುವವರ ಮಗ ಕಾಣೆಯಾಗಿರುವುದು ಕೆಲವು ನಿಮಿಷಗಳ ಬಳಿಕ ಗೊತ್ತಾಗಿದೆ. ಬಳಿಕ ಪತಿ ರುದ್ರಾ ನಾಯಕ್‌ಗೆ ವಿಷಯ ತಿಳಿಸಿದ್ದಾರೆ. ರಿಕ್ಷಾ ಚಾಲಕರಾದ ಅವರು ಸುತ್ತಮುತ್ತಲ ಜಾಗವೆಲ್ಲಾ ಹುಡುಕಾಡಿ ಬಳಿಕ ಕೆಎಸ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಲಘಟ್ಟಪುರ ಪೊಲೀಸರು ವಾಟ್ಸಪ್‌ನಲ್ಲಿ ಮಗುವಿನ ಫೋಟೊವನ್ನು ಹರಿಬಿಟ್ಟಿದ್ದಾರೆ. ಆ ಫೋಟೊವನ್ನು ಪೋಷಕರು ನೋಡಿ ಇದು ತಮ್ಮ ಮಗುವೇ ಎಂದು ಹೇಳಿದ್ದಾರೆ. ಬಳಿಕ ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ಮಗವನ್ನು ಕರೆದುಕೊಂಡು ಬಂದಿದ್ದಾರೆ.












Click it and Unblock the Notifications