ಬಿಎಂಟಿಸಿ ಇನ್ನುಮುಂದೆ ಪರಿಸರ ಸ್ನೇಹಿಯಾಗ್ತಿದೆ, ಹೇಗೆ?
ಬೆಂಗಳೂರು, ಫೆಬ್ರವರಿ 12: ಬೆಂಗಳೂರು ಮಹಾನಗರ ಸಾರಿಗೆ ನಿಗಮ ಇನ್ನುಮುಂದೆ ಪರಿಸರ ಸ್ನೇಹಿಯಾಗಲಿದೆ. ಹೇಗೆ ಅಂತೀರಾ?
ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ವಿಪರೀತವಾಗುತ್ತಿದೆ. ಅದರಿಂದ ಹೊಸ ವಾಹನಗಳ ನೋಂದಣಿ ರದ್ದು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಇದೀಗ ಬಿಎಂಟಿಸಿಯನ್ನೇ ಪರಿಸರ ಸ್ನೇಹಿಯಾಗಿಸಲು ಸರ್ಕಾರ ನಿರ್ಧರಿಸಿದೆ.
ಬಿಎಂಟಿಸಿ ಬಸ್‌ಗಳನ್ನು ಹಂತಹಂತವಾಗಿ ಎಎಲೆಕ್ಟ್ರಿಕ್, ಹೈಬ್ರಿಡ್ ಅಥವಾ ಸಿಎನ್‌ಜಿಗೆ ಪರಿವರ್ತಿಸಲು ಚಿಂತನೆ ನಡೆಸಿದೆ.

ಈ ಕುರಿತು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ವಾಯಮಾಲಿನ್ಯದಿಂದ 4800ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿದರೆ ಶೇ.50 ರಿಂದ 60 ಅಪಘಾತಗಳು ಕಡಿಮೆಯಾಗುತ್ತವೆ. ನಗರದಲ್ಲಿ 1 ಕೋಟಿಗೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ.












Click it and Unblock the Notifications