ಬಿಎಂಟಿಸಿ ಬಸ್ ಟಿಕೆಟ್ ತಪಾಸಣಾ ಅಧಿಕಾರಿಗೂ ಕ್ಯಾಮೆರಾ!
Recommended Video

ಬೆಂಗಳೂರು, ಫೆಬ್ರವರಿ 3 : ಟಿಕೆಟ್ ತಪಾಸಣಾ ಅಧಿಕಾರಿಗಳು ಮತ್ತು ನಿರ್ವಾಹಕರ ಮಧ್ಯೆ ಬಸ್ ಗಳಲ್ಲಿ ನಡೆಯುವ ಜಟಾಪಟಿಗೆ ಅಂತ್ಯ ಹಾಡಲು ಬಿಎಂಟಿಸಿ ಹೊಸ ಉಪಾಯ ಮಾಡಿದೆ. ತನಿಖಾ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಕೊಟ್ಟು ಬಸ್ ಗಳಲ್ಲಿ ನಡೆಯುವ ಪ್ರತಿಯೊಂದು ಚಲನವಲನ ಬಗ್ಗೆ ಹದ್ದಿನ ಕಣ್ಣಿಡಲು ತೀರ್ಮಾನಿಸಲಾಗಿದೆ.
ಮಾರ್ಗ ತಪಾಸಣೆ ವೇಳೆ ಸಿಬ್ಬಂದಿ ಮತ್ತು ನಿರ್ವಾಹಕರ ನಡುವೆ ಜಗಳ, ವಾಗ್ವಾದಗಳು ನಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ. ಇದು ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಬ್ರೇಕ್ ಹಾಕಲು ಸಂಚಾರ ಪೊಲೀಸರು ಮಾದರಿಯಲ್ಲೇ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಾಡಿ ವೋರ್ನ್ ಕ್ಯಮೆರಾ ಗಳನ್ನು ನೀಡಲಾಗುತ್ತದೆ.
ಬಿಎಂಟಿಸಿಯಲ್ಲಿ 66 ಮಂದಿ ಟಿಕೆಟ್ ತಪಾಸಣಾ ಸಿಬ್ಬಂದಿಯು ಐದು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಲಾ ಇಬ್ಬರು ಸಿಬ್ಬಂದಿಗಳಲ್ಲೊಳಗೊಂಡ 22 ತಂಡಗಳು ಮಾರ್ಗ ತಪಾಸಣೆ ನಡೆಸಿ, ಟಿಕೆ ರಹಿತ ಪ್ರಯಾಣಿಕರು ಮತ್ತು ಮಹಿಳೆಯರಿಗೆ ಮೀಸಲಿರುವ ಆಸನದಲ್ಲಿ ಕುಳಿತು ಸಂಚರಿಸುವವರಿಂದ ದಂಡ ವಸೂಲಿ ಮಾಡುತ್ತಾರೆ. ಅಲ್ಲದೇ ದುಡ್ಡು ಪಡೆದು ಟಿಕೇಟ್ ನೀಡದ ನಿರ್ವಾಹಕರ ವಿರುದ್ಧವೂ ಪ್ರಕರಣ ದಾಖಲಿಸ, ನೋಟಿಸ್ ನೀಡುವ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ಯಾಮರಾ ದರ 11ಸಾವಿರ ರೂ: ಈ ಕ್ಯಾಮೆರಾ ಗಳ ಬೆಲೆಯು ಸರಕು ಮತ್ತು ಸೇವಾ ತೆರಿಗೆ ಹೊರತುಪಡಿಸಿ 11 ಸಾವಿರ ರೂ. ಇದೆ. ಬಿಎಂಟಿಸಿಯು100 ಬಾಡಿ ವೋರ್ನ್ ಕ್ಯಾಮರಾಗಳ ಖರೀದಿಗೆ 11ಲಕ್ಷ ರೂ. ವೆಚ್ಚ ಮಾಡುತ್ತಿದೆ.












Click it and Unblock the Notifications