ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್ ಅವಧಿ ಇನ್ನಷ್ಟು ವಿಸ್ತರಣೆ
ಬೆಂಗಳೂರು, ಜುಲೈ 2: ಬಿಎಂಟಿಸಿ ವಿದ್ಯಾರ್ಥಿಗಳ ಪಸ್ ಪಾಸ್ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡಲಾಗಿದೆ.
ಬಿಎಂಟಿಸಿಯು 2018-19ನೇ ಸಾಲಿನಲ್ಲಿ ನೀಡಿದ್ದ ಹಳೆಯ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ಅವಧಿಯನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಹಳೆಯ ಬಸ್ ಪಾಸ್, ಶಾಲಾ ಕಾಲೇಜು ದಾಖಲಾತಿ ರಸೀದಿಯೊಂದಿಗೆ ಜುಲೈ 8ರವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಜೂನ್ 17ರಿಂದಲೇ ಪಾಸುಗಳನ್ನು ವಿತರಣೆ ಮಾಡುತ್ತಿದ್ದು, ಸಂಸ್ಥೆಯ ವೆಬ್‌ಸೈಟಿನಲ್ಲಿ ಆನ್‌ಲೈನ್ ಅರ್ಜಿಗಳು ಲಭ್ಯವಿದೆ. ಈವರೆಗೆ ಆನ್‌ಲೈನ್ ಮೂಲಕ 76,700 ಅರ್ಜಿಗಳನ್ನು ಸ್ವೀಕರಿಸಿದ್ದು, 21,600 ಪಾಸುಗಳನ್ನು ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಬಿಎಂಟಿಸಿ , ಶಾಲಾ-ಕಾಲೇಜು ಅನುಮೋದನೆ ಪಡೆದುಕೊಳ್ಳಬೇಕು.

ವಿದ್ಯಾರ್ಥಿಗಳಿಗೆ ಹೊಸ ಸ್ಮಾರ್ಟ್ ಕಾರ್ಡ್ ಪಾಸ್‌ಗಳನ್ನು ವಿತರಿಸಲು ಮತ್ತು ನವೀಕರಣಕ್ಕೆ 15 ಪ್ರಮುಖ ಬಸ್ ನಿಲ್ದಾಣಗಳಲ್ಲಿ 50 ಕೌಂಟರ್ ತೆರೆಯಲಾಗಿದೆ.












Click it and Unblock the Notifications