ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ

ಬೆಂಗಳೂರು, ಫೆಬ್ರವರಿ 15: ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೊಮ್ಮೆ ಬಿಎಂಟಿಸಿ ಚಿಂತನೆ ಮಾಡಿದೆ. ಖರೀದಿಸಬೇಕೆ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಬೇಕೆ ಎನ್ನುವ ಗೊಂದಲದಲ್ಲಿದೆ.

ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಐಐಎಸ್‌ಸಿ ವರದಿಯನ್ನು ನಿರ್ದೇಶಕರ ಮಂಡಳಿ ಸಭೆಯಲ್ಲಿ ಇರಿಸಿ ಚರ್ಚಿಸಲು ಬಿಎಂಟಿಸಿ ನಿರ್ಧಾರ ಮಾಡಿದೆ.

ಕೇಂದ್ರದ ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಯೋಜನೆಯಡಿ ಬಸ್ ಸೇರ್ಪಡೆಗೆ ನಿಗಮ ಅನುದಾನ ಪಡೆಯಲಿದೆ.

BMTC Issue e-bus supply order by February 28 or lose subsidy

ಇ-ಬಸ್ ಸೇರ್ಪಡೆಗೆ ಬಿಎಂಟಿಸಿ ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಮೊದಲ ಹಂತದಲ್ಲಿ ಅಂದಾಜು 18 ಕೋಟಿ ರೂ ಅನುದಾನವನ್ನು ನಿಗಮಕ್ಕೆ ನೀಡಲಾಗಿದೆ. ಆದರೆ ಇ-ಬಸ್ ಖರೀದಿ ಮತ್ತು ಕಾರ್ಯಾಚರಣೆ ಆರಂಭವಾಗಿಲ್ಲ. ಆದರೆ ಫೆ.28ರೊಳಗೆ ಎಲೆಕ್ಟ್ರಿಕ್ ಬಸ್ ಪೂರೈಸಲು ಬಿಡ್ಡರ್‌ಗೆ ಆದೇಶ ನೀಡದಿದ್ದರೆ ನೀಡಿರುವ ಸಬ್ಸಿಡಿ ವಾಪಸ್ ಪಡೆಯುವ ಎಚ್ಚರಿಕೆ ನೀಡಿದೆ.

ಹೈದರಾಬಾದ್‌ನಲ್ಲಿ ಫೇಮ್ ಯೋಜನೆಯಡಿ ಅನುದಾನ ಪಡೆದು 40 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. 2014ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಬಸ್‌ನ್ನು ಪ್ರಾಯೋಗಿಕವಾಗಿ ಬಿಎಂಟಿಸಿ ಕಾರ್ಯಾಚರಣೆ ಆರಂಭಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+