BMTC: ಹೊಸ ಮಾರ್ಗಗಳ ಪರಿಚಯ-ಮಾಹಿತಿ ತಿಳಿಯಿರಿ

ಬೆಂಗಳೂರು, ಫೆಬ್ರವರಿ, 04: ರಾಜ್ಯದ ರಾಜಧಾನಿ ಜೀವನಾಡಿ ಸಾರಿಗೆ ಆಗಿರುವ ಬಿಎಂಟಿಸಿಯು ಪ್ರಯಾಣಿಕರ ಸನುಕೂಲತೆಗೆ ತಕ್ಕಂತೆ ಆಗಾಗ ಶುಬಸುದ್ದಿಯನ್ನು ನೀಡುತ್ತಲೇ ಬಂದಿದೆ. ಇನ್ನು ಇದೀಗ ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಆ ಮಾರ್ಗಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಿಎಂಟಿಸಿ ಇಲ್ಲಿನ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಮೂರು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿರುವುದಾಗಿ ತಿಳಿಸಿದೆ. ಹೆಬ್ಬಾಳದಿಂದ ತೂಬುಗೆರೆವರೆಗೆ, ಶಿವಾಜಿನಗರ ಬಸ್ ನಿಲ್ದಾಣದಿಂದ ಹೆಸರಘಟ್ಟ ಬಸ್ ನಿಲ್ದಾಣದವರೆಗೆ ಹಾಗೂ ಯಲಹಂಕದಿಂದ ಹೆಸರಘಟ್ಟ ಬಸ್ ನಿಲ್ದಾಣದವರೆಗೆ ಒಟ್ಟು ಮೂರು ಬಸ್ಸುಗಳನ್ನು ಬಿಟ್ಟಿರುವುದಾಗಿ ಬಿಎಂಟಿಸಿ ತಿಳಿಸಿದೆ. ಅಲ್ಲದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಯಾಣಿಕರಲ್ಲಿ ವಿನಂತಿ ಮಾಡಿಕೊಂಡಿದೆ.

BMTC introduced new routes, Know details

ಮಾರ್ಗಗಳ ವಿವರ: 285-MN: ಹೆಬ್ಬಾಳದಿಂದ ತೂಬುಗೆರೆಯವರೆಗೆ ಚಲಿಸಿದರೆ, 267: ಬಸ್‌ಗಳು ಶಿವಾಜಿ ನಗರ ಬಸ್ ನಿಲ್ದಾಣದಿಂದ ಹೆಸರಘಟ್ಟ ಬಸ್ ನಿಲ್ದಾಣದವರೆಗೆ ಸಂಚರಿಸಲಿವೆ. 405: ಯಲಹಂಕ ಎನ್ಇಎಸ್‌ನಿಂದ ಹೆಸರಘಟ್ಟದವರೆಗೆ ಸಂಚರಿಸಲಿದೆ. ಪ್ರತಿದಿನವೂ ಹೆಬ್ಬಾಳದಿಂದ ನಿರ್ಗಮಿಸಲಿರುವ 285-MN, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ ಮಾರ್ಗದ ಮೂಲಕ ತೂಬುಗೆರೆಗೆ ಹೋಗಲಿದೆ. ಈ ಬಸ್‌ ದಿನಕ್ಕೆ 5 ಟ್ರಿಪ್ ಸಂಚಾರ ಮಾಡುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಿವಾಜಿ ನಗರದಿಂದ ಪ್ರತಿನಿತ್ಯವೂ ನಿರ್ಗಮಿಸು 267 ರೂಟ್ ಬಸ್‌, ಮೇಖ್ರಿ ಸರ್ಕಲ್, ಬಿಇಎಲ್ ಸರ್ಕಲ್, ಎಂ.ಎಸ್.ಪಾಳ್ಯ, ವೀರಸಾಗರ, ಬ್ಯಾಲಕೆರೆ, ಶಿವಕೋಟೆ ಮಾರ್ಗದ ಮೂಲಕ ಹೆಸರಘಟ್ಟಕ್ಕೆ ಹೋಗಲಿದೆ. ಇನ್ನು 405 ರೂಟ್ ಬಸ್ ಬಸ್‌ ಯಲಹಂಕದ ಬಸ್ ನಿಲ್ದಾಣದಿಂದ ನಿರ್ಗಮಿಸಿ ಅಟ್ಟೂರು, ವೀರಸಾಗರ, ಬೈಲಕೆರೆ, ಶಿವಕೋಟೆ ಮಾರ್ಗದ ಮೂಲಕ ಹೆಸರುಘಟ್ಟಕ್ಕೆ ಹೋಗಲಿದೆ.

ಹೆಬ್ಬಾಳದಿಂದ ತೂಬುಗೆರೆವರೆಗೆ ಹೋಗುವ 285-MN ಮಾರ್ಗಡಿಯಲ್ಲಿ ಬಸ್ ಪ್ರತಿದಿನ ತೂಬುಗೆರೆಯಿಂದ ಬೆಳಗ್ಗೆ 7:30ಕ್ಕೆ ಸಂಚಾರ ಆರಂಭ ಮಾಡಲಿದೆ. ಹೆಬ್ಬಾಳದಿಂದ ತನ್ನ ಮೊದಲ ಸಂಚಾರವನ್ನು ಸಂಜೆ 4 ಗಂಟೆಗೆ ಪ್ರಾರಂಭಿಸಲಿದೆ. ಪುನಃ ತೂಬುಗೆರೆಯಿಂದ ಸುಮಾರು ಸಂಜೆ 5:30ಕ್ಕೆ ನಿರ್ಗಮಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

267 ಬಸ್‌: ಶಿವಾಜಿ ನಗರದಿಂದ ಬೆಳಗ್ಗೆ 6, 7, 7:35, 8:30, 9:20, 10:50, 12:40, ಮಧ್ಯಾಹ್ನ 2:20, 3:05, 4:05, 4:50, ಸಂಜೆ 6:15, 7 ಗಂಟೆ, 8:45ಕ್ಕೆ ನಿರ್ಗಮಿಸಲಿದೆ. ಮತ್ತೆ ಅತ್ತ ಹೆಸರಘಟ್ಟದಿಂದ ಬೆಳಗ್ಗೆ 6 ಗಂಟೆ, 6:45, 7:35, 8:05, 8:45, 9:20, 10:40, ಮಧ್ಯಾಹ್ನ 2:20, 3:05, 4:05, 4:50, ಸಂಜೆ 6:15, 7 ಗಂಟೆ, ರಾತ್ರಿ 9 ಗಂಟೆಗೆ ನಿರ್ಗಮಿಸಲಿದೆ.

405: ಮಾರ್ಗದಲ್ಲಿನ ಬಸ್‌ ಯಲಹಂಕದಿಂದ ಬೆಳಗ್ಗೆ 6:10, 7:10, 8:20, 9:20, 11:05, 12:05, 11:35, ಮಧ್ಯಾಹ್ನ 1:30, 2:30, 3:40, ಸಂಜೆ 4:40, 6:45, 7:15ಕ್ಕೆ ಹೊರಟು ಹೆಸರಘಟ್ಟಕ್ಕೆ ತಲುಪಲಿದೆ. ಹಾಗೆಯೇ ಹೆಸರಘಟ್ಟದಿಂದ ಪ್ರತಿನಿತ್ಯ ಬೆಳಗ್ಗೆ 7:15, 8:15, 10ಗಂಟೆ, 10:30, 11 ಗಂಟೆ, 12:10, ಮಧ್ಯಾಹ್ನ 12:10, 01:10, 2:35, 3:35, ಸಂಜೆ 5:40, 6:10, 7:50 ಹಾಗೂ ರಾತ್ರಿ 8:20ಕ್ಕೆ ನಿರ್ಗಮಿಸಲಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+