Get Updates
Get notified of breaking news, exclusive insights, and must-see stories!

BMTC Good News: ಬೆಂಗಳೂರಿನ ಈ ಭಾಗದ ಪ್ರಯಾಣಿಕರಿಗೆ ಬಿಎಂಟಿಸಿ ಭರ್ಜರಿ ಗುಡ್‌ನ್ಯೂಸ್

ಬೆಂಗಳೂರು: ಬೆಂಗಳೂರಿನ ಮೆಟ್ರೋ ಮತ್ತು ಬಸ್ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ಹೊಸ ಬಸ್ ಸೇವೆ ಹಾಗೂ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಮ್ಮ ಮೆಟ್ರೋದ ಯೆಲ್ಲೋ ಲೈನ್ ಮಾರ್ಗವು ಬೆಂಗಳೂರಿನ ಮಧ್ಯ ಭಾಗ ಮತ್ತು ದಕ್ಷಿಣದ ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಇದೀಗ ಈ ಮಾರ್ಗದಲ್ಲಿ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟಿದೆ.

ಕರ್ನಾಟಕ ಮತ್ತು ತಮಿಳುನಾಡಿನ ಗಡಿಪ್ರದೇಶ ವ್ಯಾಪ್ತಿಯಲ್ಲಿ ಬಸ್‌ಗಳ ಸೇವೆಯನ್ನು ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ. ತಮಿಳುನಾಡು ಗಡಿ ಮತ್ತು ಇತರ ಉಪನಗರಗಳ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ. ಬಿಎಂಟಿಸಿ ಫೀಡರ್ ಸೇವೆಗಳನ್ನು ನೀಡಲು ಮೊದಲಿನಿಂದಲೂ ಬೇಡಿಕೆ ಇದೆ.

BMTC Good News MF-22D Bus Schedules Increased from Anekal to Bommasandra Metro

ಇದೀಗ ಬೆಂಗಳೂರಿನ ದಕ್ಷಿಣ ಉಪನಗರವಾದ ಆನೇಕಲ್ ಪ್ರದೇಶದಲ್ಲಿ ಪ್ರಯಾಣಿಕರಿಂದ ಬಸ್ ಬೇಡಿಕೆ ಹೆಚ್ಚಳವಾಗಿದ್ದು, ಬಿಎಂಟಿಸಿಯು ಹೊಸ ಅಪ್ಡೇಟ್ಸ್‌ ಕೊಟ್ಟಿದೆ. 361C ಮತ್ತು 356M ಬಸ್ ಮಾರ್ಗಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಆನೇಕಲ್‌ಗೆ ಹೆಚ್ಚುವರಿ ಫೀಡರ್ ಬಸ್‌ಗಳ ಸೇವೆ ಕಲ್ಪಿಸಬೇಕು ಎನ್ನುವ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.

ಬಿಎಂಟಿಸಿಯು ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಆನೇಕಲ್ ಬಸ್ ನಿಲ್ದಾಣದಿಂದ ಚಿಕ್ಕ ಹೆಗ್ದೆ ಕ್ರಾಸ್, ಇಗ್ಗಲೂರು ಹಾಗೂ ಚಂದಾಪುರ ಮಾರ್ಗವಾಗಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾರ್ಗ ಸಂಖ್ಯೆ ಎಂ.ಎಫ್-22ಡಿ ರಲ್ಲಿ ಬಸ್ ಸಂಚಾರ ಸೇವೆಯನ್ನು ಜನವರಿ 5 ರಿಂದ ಹೆಚ್ಚಿಸಿದೆ.

ಆನೇಕಲ್ ಬಸ್ ನಿಲ್ದಾಣ - ಬೊಮ್ಮಸಂದ್ರ ಮೆಟ್ರೋ (ಸ್ಟೇಷನ್ ಬಿಡುವ ವೇಳೆ)

5:35, 5:55, 6:15, 6:35, 7:00, 7:20, 7:45, 8:05, 8:35, 8:55, 9:10, 9:30, 9:50, 10:45, 10:55, 11:05. 12:50, 14:45, 14:50, 15:10, 15:35, 15:55, 16:20, 16;40, 17:20. 17:40. 18:10, 18:30, 19;05, 19;25, 19:55, 20:15, 21:00, 21:20 5:35, 5:55, 6:15, 6:35, 7:00, 7:20, 7:45, 8:05, 8:35, 8:55, 9:30, 9:50, 10:05, 10:45, 11:05. 12;05, 14:00, 15:35, 15:50, 15:55, 16:20, 16:40, 17:20, 17:40, 18:10, 18:30, 19:05, 19:25, 19;55, 20:15, 21:00, 21:20

ಪೀಕ್ ಅವರ್‌ನಲ್ಲಿ ಸಮಸ್ಯೆ

ಬೆಂಗಳೂರಿನ ಈ ಪ್ರದೇಶ ಹಾಗೂ ಹೊರ ವಲಯಗಳಲ್ಲಿ ಪೀಕ್ ಅವರ್‌ನಲ್ಲಿ ಬಸ್‌ಗಳು ಸಿಗದೆ ಸಮಸ್ಯೆ ಆಗುತ್ತಿದೆ. ಆನೇಕಲ್ ತಲುಪಲು ಚಂದಾಪುರಕ್ಕೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಮೂಲಕ ಹೋಗಬೇಕಾದ ಅನಿವಾರ್ಯತೆ ಇದೆ. ಬೊಮ್ಮಸಂದ್ರ ಮತ್ತು ಆನೇಕಲ್ ನಡುವೆ ಫೀಡರ್ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಪೀಕ್ ಸಮಯದಲ್ಲಿ ಲಭ್ಯತೆಯ ಕೊರತೆಯಿಂದಾಗಿ ಸಮಸ್ಯೆ ಆಗುತ್ತಿದೆ ಎಂದು ಈ ಭಾಗದ ಜನ ದೂರಿದ್ದರು. ಕೊನೆಯ ಬಸ್ ಸಂಜೆ 4 ಗಂಟೆಗೆ ಹೊರಡುತ್ತದೆ. ಇದು ಪೀಕ್ ಸಮಯದಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಇರುವುದಿಲ್ಲ. ಇದರಿಂದ ಈ ಭಾಗದಲ್ಲಿ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ ಎಂದು ಈ ಭಾಗದ ಜನ ಬಿಎಂಟಿಸಿಗೆ ಮನವಿ ಮಾಡಿದ್ದರು. ಇದೀಗ ಈ ಭಾಗದ ಜನರ ಬೇಡಿಕೆಗೆ ಕೊನೆಗೂ ಬಿಎಂಟಿಸಿ ಸ್ಪಂದಿಸಿದೆ.

ಭವಿಷ್ಯದಲ್ಲಿ ಫೀಡರ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಮೆಟ್ರೋ ಸೇವೆ ವಿಸ್ತರಣೆ ಆಗುತ್ತಿದ್ದು ಈ ಭಾಗಗಳಲ್ಲಿ ಬಿಎಂಟಿಸಿ ಫೀಡರ್ ಸೇವೆಯನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಇದರಿಂದ ಬೆಂಗಳೂರಿನಲ್ಲಿ ಲಾಸ್ಟ್‌ ಮೈಲ್ ಕನೆಕ್ಟಿವಿಟಿ ( ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಮೂಹ ಸಾರಿಗೆ) ಮೂಲಕ ಹೋಗುವುದಕ್ಕೆ ಅನುಕೂಲವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+