BMTC: ಮೃತ ಬಿಎಂಟಿಸಿ ಸಿಬ್ಬಂದಿ ಕುಟುಂಬಸ್ಥರಿಗೆ ನೇಮಕಾತಿ ಪತ್ರ: ವಿವರ ತಿಳಿಯಿರಿ

ಬೆಂಗಳೂರು, ಮಾರ್ಚ್ 03: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮೃತ ನೌಕರರ ಅವಲಂಬಿತರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇಮಕಾತಿ ಪತ್ರ ವಿತರಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅಕಾಲಿಕ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಬಿಎಂಟಿಸಿಯಲ್ಲೇ ಉದ್ಯೋಗ ನೀಡಲಾಗಿದೆ.

BMTC Extends Support Through Jobs To Dependents Of 50 Deceased Staff

ಮಾರ್ಚ್ 02ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 50 ಮೃತ ಸಿಬ್ಬಂದಿ ಅವಲಂಬಿತರಿಗೆ ಕಿರಿಯ ಸಹಾಯಕರು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಗಳನ್ನು ನೀಡುತ್ತಿರುವುದಾಗಿ ಬಿಎಂಟಿಸಿ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ.

200 ಮೃತ ಅಭ್ಯರ್ಥಿಗಳ ಅವಲಂಬಿತರನ್ನು ಅನುಕಂಪದ ಆಧಾರದ ಮೇಲೆ ವರ್ಗ-3 (ಮೇಲ್ವಿಚಾರಕೇತರ) ಮತ್ತು ಕ್ಲಾಸ್-4 ಹುದ್ದೆಗಳಿಗೆ 2023 ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅರ್ಹತೆ ಮತ್ತು ಖಾಲಿ ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿಯಲ್ಲಿ 2,500 ಜನರಿಗೆ ಉದ್ಯೋಗವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಎಂಟಿಸಿಯಲ್ಲಿ ನೇರ ನೇಮಕಾತಿ ಮೂಲಕ ಕಂಡಕ್ಟರ್‌ಗಳನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಮಾರ್ಚ್ 3 ರಿಂದ ಏಪ್ರಿಲ್ ವರೆಗೆ ಕೆಇಎ ವೆಬ್‌ಸೈಟ್ (https://kea.kar.nic.in) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಅರ್ಹತೆಗಳು, ದೈಹಿಕ ಸಾಮರ್ಥ್ಯ ಮತ್ತು ಇತರ ಷರತ್ತುಗಳನ್ನು ತಿಳಿದು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ದ್ವಿತೀಯ ಪಿಯುಸಿ ಉತ್ತೀಣಗೊಳ್ಳಬೇಕು. ಮೂರು ವರ್ಷಗಳ ಡಿಪ್ಲೋಮಾ ಪಡೆದಿರಬೇಕು ಎಂದು ತಿಳಿಸಲಾಗಿದೆ. ಮುಕ್ತ ವಿವಿಯಿಂದ ಪಿಯುಸಿ, ಜೆಒಸಿ / ಜೆಎಲ್‌ಸಿ ಕೋರ್ಸ್ ಪಡೆದವರು ಈ ಹುದ್ದೆ ಪಡೆಯಲು ಅರ್ಹರಲ್ಲ. ಅಭ್ಯರ್ಥಿಗಳು ಮಾನ್ಯತೆ ಪಡೆದ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು. ಪುರುಷರ ಎತ್ತರ 160 ಸೆಂ.ಮಿ ಹಾಗೂ ಮಹಿಳೆಯರ ಎತ್ತರ 150 ಸೆಂ.ಮಿ ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ದಾಟಿರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+