BMTC: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಬಿಎಂಟಿಸಿ ಭರ್ಜರಿ ಗುಡ್‌ ನ್ಯೂಸ್‌

BMTC: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಇದು ಪ್ರಯಾಣಿಕರ ಅನುಕೂಕ್ಕೆ ತಕ್ಕಂತೆ ಆಹಾಗ ಶುಭಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಶುಭಸುದ್ದಿಯೊಂದನ್ನು ನೀಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಸದ್ಯ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಹೆಚ್ಚಾಗಿ ಜನಮನ್ನಣೆ ಪಡೆದಿವೆ. ಬಹುತೇಕ ವಾಯು ವಜ್ರ ಬಸ್‌ಗಳು ವೋಲ್ವೋ ಕಂಪನಿ ನಿರ್ಮಿತ ಬಸ್‌ಗಳಾಗಿದ್ದು, ಇವುಗಳ ಬದಲಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಹಾಗಾದರೆ ಯಾವಾಗಿನಿಂದ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

BMTC Decides to Introduce 320 Electric Buses for Kempegowda International Airport Route

ಬಿಎಂಟಿಸಿ ಈ ನಿರ್ಧಾರಕ್ಕೆ ಕಾರಣವೇನು?: ಈಗಾಗಲೇ ನಗರದಲ್ಲಿ ಬಿಎಂಟಿಸಿಯ ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಮಾಡುತ್ತಿವೆ. ಇದೀಗ ಈ ಸೇವೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ವಿಸ್ತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಮುಂದಿನ ತಿಂಗಳಿನಿಂದಲೇ ಅಂದರೆ ಡಿಸೆಂಬರ್‌ನಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಓಡಲಿವೆ. ವೋಲ್ವೋ ಬಸ್‌ಗಳ ಕಾರ್ಯಾಚರಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಇದನ್ನು ನಿಯಂತ್ರಿಸಲು ಬಿಎಂಟಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದಲ್ಲಿ ವೋಲ್ವೋ ಬಸ್‌ಗಳು ತುಂಬಾ ಹಿಂದಿನಿಂದಲೂ ಸೇವೆ ಒದಗಿಸುತ್ತಾ ಬಂದಿವೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣವನ್ನು ಒದಗಿಸುತ್ತಾ ಬಂದಿದ್ದವು. ಆದರೆ, ಹೆಚ್ಚಿನ ನಿರ್ವಹಣಾ ವೆಚ್ಚಗಳ ಹಿನ್ನೆಲೆ ವೋಲ್ವೋ ಬಸ್‌ಗಳ ನಿರ್ವಹಣೆ ಬಿಎಂಟಿಸಿಗೆ ಲಾಭದಾಯಕ ಆಗಿಲ್ಲ. ಇದೇ ವೇಳೆ, ಅಶೋಕ್‌ ಲೇಲ್ಯಾಂಡ್ ಒದಗಿಸುವ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯಿಂದ ಬಿಎಂಟಿಸಿಗೆ ಲಾಭವಾಗಲಿದೆ ಎಂದು ತಿಳಿದುಬಂದಿದೆ.

ಬಳಿಕ ಇದನ್ನರಿತ ಬಿಎಂಟಿಸಿ ಅಧಿಕಾರಿಗಳು ಎಲೆಕ್ಟ್ರಿಕ್‌ ಬಸ್‌ಗಳ ಕಡೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಈ ಬಸ್‌ಗಳನ್ನು ತುಂಬಾ ಸಹಕಾರಿಯಾಗಲಿವೆ. ಆದ್ದರಿಂದ ಐಷಾರಾಮಿ ವೋಲ್ವೋ ಬಸ್‌ಗಳ ಬದಲು ಬಿಎಂಟಿಸಿಯು 320 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಬಸ್‌ಗಳನ್ನು ಅಶೋಕ್ ಲೇಲ್ಯಾಂಡ್ ಕಂಪನಿಯು ಒದಗಿಸಲಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಈಗಾಗಲೇ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಹಾಗೆಯೇ ಇದೀಗ ಈ ಬಸ್‌ಗಳ ಸೇವೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲೂ ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ. ಈ ಉಪಕ್ರಮವು ಫೇಮ್‌ 2 ರೀತಿಯ ರಾಷ್ಟ್ರೀಯ ಯೋಜನೆಗಳಂತೆ ತನ್ನ ಫ್ಲೀಟ್ ಅನ್ನು ಆಧುನೀಕರಿಸಲು ಮುಂದಾಗಿದೆ. ಇದು ಬಿಎಂಟಿಸಿಯ ವಿಸ್ತೃತ ಕಾರ್ಯಾಚರಣೆಯ ಕಾರ್ಯತಂತ್ರದ ಭಾಗವಾಗಿದೆ. ಇದರಂತೆಯೇ ಬೆಂಗಳೂರು ನಗರದಾದ್ಯಂತ 1,751 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+