ಫೋನ್ ಪೇ, ಗೂಗಲ್ ಪೇ ಮೂಲಕವೇ ಲಂಚ ಪಡೆದ 7 ಬಿಎಂಟಿಸಿ ಅಧಿಕಾರಿಗಳ ಅಮಾನತು, ಇವರ ಅಕೌಂಟ್‌ನಲ್ಲಿ ಎಷ್ಟು ಕೋಟಿ ಹಣ ಇತ್ತು ಗೊತ್ತಾ?

ಬೆಂಗಳೂರು, ಜನವರಿ, 15: ಬಿಎಂಟಿಸಿಯು ಬೆಂಗಳೂರು ಜನರ ಜೀವನಾಡಿ ಸಾರಿಗೆಯಾಗಿದ್ದು, ಇದೀಗ ಈ ಸಾರಿಗೆಯ ಅಧಿಕಾರಿಗಳೇ ಲಂಚ ಪಡೆಯುತ್ತಿದ್ದಾರೆ ಎನ್ನುವ ಆರೋಪವೊಂದು ಎದುರಾಗಿದೆ. ಅಷ್ಟಕ್ಕೂ ಲಂಚ ಪಡೆದಿದ್ದಾರೂ ಯಾವ ಮಾರ್ಗದ ಮೂಲಕ ಹಾಗೂ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಾಮಾನ್ಯವಾಗಿ ಬಿಎಂಟಸಿ ಬಸ್‌ ಚಾಲಕರು ನಿರ್ವಾಹಕ, ಲಂಚ ಪಡೆಯಲು ಹಿಂದುಮುಂದು ನೋಡುತ್ತಾರೆ. ಆದರೆ ಅಧಿಕಾರಿಗಳ ಒತ್ತಡದಿಂದ ಯಾವುದೇ ಬೇರೆ ದಾರಿಯಿಲ್ಲದೆ ಪಡೆಯುವಂತಹ ಪರಿಸ್ಥಿರಿ ನಿರ್ಮಾಣವಾಗಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇನ್ನು ಯಾವ್ಯಾವ ಅಧಿಕಾರಿಗಳ ಖಾತೆಯಲ್ಲಿ ಎಷ್ಟು ಹಣ ಪತ್ತೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

BMTC: 7 BMTC officials suspended who received bribe through phone pay, google pay

ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿದ್ದ ಬಿಎಂಟಿಸಿಯ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರುಪಾಯಿಗೂ ಹೆಚ್ಚು ವಸೂಲಿ ಮಾಡಿದ್ದು, ಬಿಎಂಟಿಸಿಯ 7 ಅಧಿಕಾರಿಗಳ ಅಕೌಂಟ್‌ನಲ್ಲಿ ಕೋಟಿ ಲೆಕ್ಕದಲದಲಿ ಹಣ ಪತ್ತೆ ಆಗಿದೆ. ಬಿಎಂಟಿಸಿಯಲ್ಲಿ ಇದೆ ಮೊದಲ ಬಾರಿಗೆ ಅಧಿಕಾರಿಗಳ ಅಕೌಂಟ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಪತ್ತೆಯಾಗಿರುವುದು ಎಂದು ತಿಳಿದುಬಂದಿದೆ.

ಅದರಲ್ಲೂ ಈ ಅಧಿಕಾರಿಗಳ ಖಾತೆಯಲ್ಲೂ ಸುಮಾರು 20-25 ಲಕ್ಷ ರೂಪಾಯಿ ಸಿಕ್ಕಿದೆ ಅಂತಾ ಟಿವಿ 9 ವರದಿ ಮಾಡಿದೆ. ಅಲ್ಲದೆ ಒಟ್ಟು 7 ಅಧಿಕಾರಿಗಳಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ ಆಗಿದೆ. ಕೆಲಸದ ವೇಳೆ, ವಾರದ ರಜೆ ಹಾಗೂ ಕಂಡಿಷನ್ ಇರುವ ಮತ್ತು ಹೆಚ್ಚು ಕಲೆಕ್ಷನ್ ಬರುವ ಬಸ್ ಬೇಕೆಂದರೆ ಡಿಪೋ ಮ್ಯಾನೇಜರ್, ಮತ್ತು ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡಿದರೆ, ಎಲ್ಲಾ ವ್ಯವಸ್ಥೆ ಮಾಡುತ್ತಾರೆ. ಹಣ ನೀಡಿಲ್ಲ ಅಂದರೆ ಮಾನಸಿಕವಾಗಿ ಕಿರುಕುಳ ನೀಡುವುದು ಮಾಡುತ್ತಾರೆ ಎಂದು ವರದಿಯಾಗಿದೆ

ಈ ಹಿನ್ನೆಲೆ ಚಾಲಕ, ನಿರ್ವಾಹಕರಿಂದ ಪ್ರತಿ ವಾರ 500 ರೂಪಾಯಿನಂತೆ ಪ್ರತಿ ತಿಂಗಳಿಗೆ 2,000 ರೂಪಾಯಿ ವಸೂಲಿ ಮಾಡಲಾಗುತ್ತಿತ್ತು. ಈ ಬಗ್ಗೆ ಟಿವಿ9 ಅಕ್ಟೋಬರ್-2ರಂದು ಸುದ್ದಿ ಪ್ರಸಾರ ಮಾಡಿತ್ತು. ಅಲ್ಲದೇ ಖುದ್ದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ತರಲಾಗಿತ್ತು.

ಸಚಿವರು ಕೂಡಲೇ ಅಂದಿನ ಬಿಎಂಟಿಸಿ ಎಂಡಿ ಜಿ.ಸತ್ಯವತಿ ಅವರಿಗೆ ತನಿಖೆ ಮಾಡಲು ಆದೇಶ ಮಾಡಿದ್ದರು. ಈ ಹಿನ್ನೆಲೆ ತನಿಖೆ ನಡೆಸಿದ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು, 7 ಅಧಿಕಾರಿಗಳ ಎಲ್ಲಾ ಬ್ಯಾಂಕ್ ಡಿಟೇಲ್ಸ್ ಬಗ್ಗೆ ತನಿಖೆ ನಡೆಸಿದಾಗ ಪ್ರತಿಯೊಬ್ಬರ ಅಕೌಂಟ್‌ಗೆ ಚಾಲಕ, ನಿರ್ವಾಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಳಿದುಬಂದಿದೆ.

1. ಮಂಜುಳಾ.ಆರ್- ಸಿಬ್ಬಂದಿ ಮೇಲ್ವಿಚಾರಕಿ ಡಿಪೋ ನಂ-27 2. ಪ್ರೀತಮ್- ಕಿರಿಯ ಸಹಾಯಕ ಡಿಪೋ ನಂ-27 3. ಮನೋಜ್ ಕುಮಾರ್ ಎಲ್.ಎಸ್- ಕಿರಿಯ ಸಹಾಯಕ ಡಿಪೋ ನಂ-27 4. ಧನಂಜಯ.ವಿ- ಸಹಾಯಕ ಲೆಕ್ಕಿಗ ಡಿಪೋ ನಂ-27 5.ಸುಮ.ಎ- ಕಿರಿಯ ಸಹಾಯಕಿ ಡಿಪೋ ನಂ-27 6. ಶಾಂತವ್ವ- ಕಿರಿಯ ಸಹಾಯಕಿ ಡಿಪೋ ನಂ-27 7. ದೇವರಾಜ್.ಜಿ- ಸಹಾಯಕ ಕುಶಲಕರ್ಮಿ ಡಿಪೋ ನಂ-27 ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+