BMTC: ಶೀಘ್ರದಲ್ಲೇ ರಸ್ತೆಗಿಳಿಯಲಿವೆ 100 ನಾನ್ ಎಸಿ ಇ-ಬಸ್‌ಗಳು, ಈ 12 ಮಾರ್ಗಗಗಳಲ್ಲಿ ಸಂಚಾರ
ಬೆಂಗಳೂರು, ಡಿಸೆಂಬರ್, 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಹೊಸವರ್ಷಕ್ಕೆ 100 ಹೊಸ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ. ಹಾಗಾದರೆ ಈ ಬಸ್‌ಗಳ ವಿಶೇಷತೆ ಹಾಗೂ ಬಸ್‌ಗಳು ಸಂಚರಿಸುವ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಈ ಬಸ್‌ಗಳ ಬಣ್ಣ ನೀಲಿ ಆಗಿದ್ದು, 12 ಮೀಟರ್ ಉದ್ದವಿರುತ್ತವೆ. ಟಾಟಾ ಮೋಟಾರ್ಸ್‌ನಿಂದ ತಯಾರಿಸಲ್ಪಟ್ಟ ನಾನ್-ಎಸಿ ಬಸ್‌ನ ಮೊದಲ ಈ ಮೂಲ ಮಾದರಿಯು 5 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ (FAME-II)ನಡಿ ಈ ಬಸ್‌ಗಳನ್ನು ತಯಾರು ಮಾಡಲಾಗಿದೆ.

ನಗರ ಮತ್ತು ಉಪನಗರ ಪ್ರದೇಶಗಳು ಸೇರಿದಂತೆ 12 ಮಾರ್ಗಗಳಲ್ಲಿ ಈ ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಗಮವು ಸಿಬಿಡಿ ಪ್ರದೇಶಗಳು ಮತ್ತು ಸರ್ಜಾಪುರ, ಚಂದಾಪುರ, ಬನ್ನೇರುಘಟ್ಟ ರಸ್ತೆ ಮತ್ತು ಇತರ ಮಾರ್ಗಗಳಲ್ಲಿ ಸಂಚರಿಸಲಿದೆ. ಇನ್ನು ಈ ಬಸ್‌ನಲ್ಲಿ ಟಿಕೆಟ್ ದರಗಳು ಸಾಮಾನ್ಯವಾಗಿರುತ್ತದೆ. ಮತ್ತು ಶಕ್ತಿ ಯೋಜನೆಯ ಫಲಾನುಭವಿಗಳು ಕೂಡ ಈ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.
ಇನ್ನು ಇದೇ ಮಾದರಿಯ 552 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಚೆನ್ನೈನಲ್ಲಿ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಎಂಟಿಸಿ)ಗಾಗಿ 352 ಮತ್ತು ಮಧುರೈ ಮತ್ತು ಕೊಯಮತ್ತೂರ್‌ಗೆ 200 ಬಸ್‌ಗಳನ್ನು ಖರೀದಿಸಲಾಗುತ್ತದೆ. ಈ ಬಸ್‌ಗಳ ವೆಚ್ಚ 500.9 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸರ್ಕಾರವು ಆರಂಭದಲ್ಲಿ 442 ಬಸ್‌ಗಳನ್ನು ಖರೀದಿಸಲು ಯೋಜಿಸಿತ್ತು, ಆದರೆ ಹೈಕೋರ್ಟ್ 25% ರಷ್ಟು ಹೆಚ್ಚಳಕ್ಕೆ ನಿರ್ದೇಶನ ನೀಡಿತು.
ಸರ್ಕಾರ ಕನಿಷ್ಠ 699 ಲೋ ಫ್ಲೋರ್ ಬಸ್‌ಗಳನ್ನು ಖರೀದಿಸಬೇಕು ಎಂಬುದು ಅಂಗವಿಕಲರ ಹಕ್ಕುಗಳ ಹೋರಾಟಗಾರರ ವಾದ. ಬಸ್ ಖರೀದಿಯಲ್ಲಿನ ವಿಳಂಬದಿಂದಾಗಿ ಗಾಲಿ ಕುರ್ಚಿ ಬಳಕೆದಾರರಿಗೆ ತೊಂದರೆಯುಂಟಾಗಿದ್ದು, ಆಟೋ ಮತ್ತು ಕ್ಯಾಬ್‌ಗಳಿಗೆ ಸಾಕಷ್ಟು ಖರ್ಚು ಮಾಡುವಂತಾಗಿದೆ.
ಮುಂಬೈ-ನಾಸಿಕ್ ಮಾರ್ಗದಲ್ಲಿ 20 ಎಲೆಕ್ಟ್ರಿಕ್ ಎಸಿ ಬಸ್‌ಗಳನ್ನು ಪರಿಚಯಿಸಲು ಯೋಜಿಸಲಾಗಿದೆ. ಪ್ರಸ್ತುತ ಶಿವ ಶಾಹಿ ಎಸಿ ಬಸ್‌ಗಳನ್ನು ಬದಲಾಯಿಸುತ್ತಿದೆ. ಬಸ್‌ಗಳು 9 ಮೀಟರ್ ಉದ್ದದ ಮಧ್ಯಮ ಗಾತ್ರದ ವಾಹನಗಳಾಗಿದ್ದು, ಇದರಲ್ಲಿ 34 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.
ಹಿಂದಿನ ಬಸ್‌ಗಳಲ್ಲಿನ ಎಸಿ ಅಸಮರ್ಪಕ ಕಾರ್ಯದ ಬಗ್ಗೆ ಪ್ರಯಾಣಿಕರ ದೂರುಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಮಹಾರಾಷ್ಟ್ರದ ನಗರಗಳಿಗೆ ಒಟ್ಟು 150 ಎಲೆಕ್ಟ್ರಿಕ್ ಎಸಿ ಬಸ್‌ಗಳು ಮತ್ತು 9 ಮೀಟರ್ ಉದ್ದದ 2,350 ಬಸ್‌ಗಳನ್ನು ಖರೀದಿಸಲಾಗುವುದು. ಈ ಬಸ್‌ಗಳು ಉತ್ತಮ ಕೂಲಿಂಗ್, ಶಬ್ದರಹಿತ ಕಾರ್ಯಾಚರಣೆ, ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಆದರೆ ಸಿಬ್ಬಂದಿ ನೇಮಕಾತಿ ಮಾಡದಿರುವುದರಿಂದ ರಸ್ತೆ ಸಾರಿಗೆ ನಿಗಮಗಳು ಒದಗಿಸುವ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಶಕ್ತಿ ಯೋಜನೆ ಜಾರಿಯಿಂದ ಪ್ರಯಾಣಿಕರ ದಟ್ಟಣೆ ಹಾಗೂ ಆದಾಯ ಹೆಚ್ಚಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಸಿಬ್ಬಂದಿ ಕೊರತೆಯಿಂದಾಗಿ ತನ್ನ ಪ್ರಯಾಣವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತಿಲ್ಲ.
BMTC 1,857 ಚಾಲಕರು ಮತ್ತು ಕಂಡಕ್ಟರ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೂಡ ಬಸ್‌ಗಳು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಆರ್‌ಟಿಸಿಗಳಿಗೆ 7 ವರ್ಷಗಳಿಂದ ಹೊಸ ಸಿಬ್ಬಂದಿ ನೇಮಕವಾಗಿಲ್ಲ.
EV ಬಸ್‌ನ ವಿಶೇಷತೆಗಳೇನು?
1. 12 ಮೀಟರ್ ಉದ್ದದ 400 ಮಿಮಿ ಫ್ಲೋರ್ ಎತ್ತರದ ಹವಾನಿಯಂತ್ರಣ ರಹಿತ ಬಸ್ ಇದಾಗಿದೆ.
2. 35 ಸಂಖ್ಯೆ ಪ್ಲಾಸ್ಟಿಕ್ ಮೌಲ್ಡೆಡ್ ಪ್ರಯಾಣಿಕರ ಆಸನಗಳನ್ನು ಒಳಗೊಂಡಿರುತ್ತದೆ.
3. ಚಾಲಕರ ಅನುಕೂಲಕ್ಕಾಗಿ ಬಸ್‌ನ ಒಳಬಾಗದಲ್ಲಿ 3 ಕ್ಯಾಮರಾ ಮತ್ತು ಹಿಂದಿನ ಭಾಗದಲ್ಲಿ 1 ಕ್ಯಾಮರಾ ಅಳವಡಿಕೆ.
4. ಒಂದು ಬಾರಿ ಚಾರ್ಜ್ ಮಾಡಿದರೆ ಪ್ರತಿ ದಿನ 200 ಕಿಲೋ ಮೀಟರ್ ಸಂಚಾರ ಮಾಡುತ್ತದೆ.
5. ಪ್ರಯಾಣಿಕರಿಗೆ ಮತ್ತು ಅಂಗವಿಕಲರ ಅನುಕೂಲಕ್ಕಾಗಿ 4 ಎಲ್ಇಡಿ ಡೆಸ್ಟಿನೇಷನ್ ಬೋರ್ಡ್ ಮತ್ತು ವಾಯ್ಸ್ ಅನೌನ್ಸ್ಮೆಂಟ್ ಅಳವಡಿಸಲಾಗಿದೆ.
6. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 10 ಪ್ಯಾನಿಕ್ ಬಟನ್ ಅಳವಡಿಸಲಾಗಿರುತ್ತದೆ.
7. ಫೈರ್ ಡಿಟೆಕ್ಷನ್ ಮತ್ತು ಅಲರ್ಮಿಂಗ್ ವ್ಯವಸ್ಥೆ ಮತ್ತು ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ.
8. ಹೊಗೆ ರಹಿತ ಹಾಗೂ ಪರಿಸರ ಸ್ನೇಹಿಯಾಗಿದೆ.
9. ಅಂಗವಿಕಲರಿಗಾಗಿ ವೀಲ್ ಚೇರ್ ಪ್ರವೇಶಕ್ಕೆ ನಿಲಿಂಗ್ ವ್ಯವಸ್ಥೆ ಇರಲಿದೆ.
10. ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ಚಾಲನೆಯಲ್ಲಿರುವಾಗ ಬಸ್ಸಿನ ಬಾಗಿಲನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಬಾಗಿಲುಗಳು ಮುಚ್ಚಿದ ನಂತರವೇ ಬಸ್ ಚಲಿಸಲಿದೆ.












Click it and Unblock the Notifications