BMRCL: ಚಾಲಕರಹಿತ ಮೆಟ್ರೋ ಪ್ರಾಯೋಗಿಕ ಸಂಚಾರ ಯಾವಾಗ?-ಇಲ್ಲಿದೆ ಮಾಹಿತಿ

ಬೆಂಗಳೂರು, ಫೆಬ್ರವರಿ, 23: ನಮ್ಮ ಮೆಟ್ರೋ ಬೆಂಗಳೂರಿನ ಜನರು, ಉದ್ಯೋಗಿಗಳಿಗೆ ಅಚ್ಚುಮೆಚ್ಚಿನ ಸಾರಿಗೆಯಾಗಿದೆ. ಹಾಗೆಯೇ ಇದೀಗ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲನ್ನು ಹೆಬ್ಬಗೋಡಿ ಡಿಪೋದಲ್ಲಿ ಅನಾವರಣಗೊಳಿಸಲಾಗಿದೆ. ಬೆಂಗಳೂರು ಮೆಟ್ರೋದ ಡ್ರೈವಿಂಗ್ ಕೋಚ್‌ನ ಫೋಟವನ್ನು ಬಿಎಂಆರ್‌ಸಿಎಲ್ ಶೇರ್ ಮಾಡಿದ್ದು, ಇದು ಜನರ ಕುತೂಹಲವನ್ನು ಕೆರಳಿದುವಂತೆಚಮಾಡಿದೆ. ಇನ್ನು ಇದರ ಪ್ರಾಯೋಗಿಕ ಸಂಚಾರ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

BMRCL: When will driverless metro trial run?, Know details

ನಮ್ಮ ಮೆಟ್ರೋದ ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಮಾರ್ಚ್ 1ರಂದು ನಡೆಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಈ ಪ್ರೊಟೋ ಟೈಪ್‌ ರೈಲಿನ ಮೊದಲ ಫೋಟೋಗಳನ್ನು ಬಿಎಂಆರ್‌ಸಿಎಲ್‌ ತನ್ನ ಟ್ವಿಟಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇನ್ನು ಈ ರೈಲು ಬೆಂಗಳೂರು ಮೆಟ್ರೋದ ಹಳದಿ (ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಹಾದು ಹೋಗುವ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ) ಮಾರ್ಗದಲ್ಲಿ ಓಡಲಿದೆ.

ಚೀನಾ ಸಹಯೋಗದ ಮೆಟ್ರೋ ರೈಲುಗಳನ್ನು ಆಮದು ಮಾಡಿಕೊಂಡಿದ್ದು, ಜನವರಿ 20ರಂದು ಹಡಗಿನ ಮೂಲಕ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದೆ. ಈ ಚಾಲಕರಹಿತ ಪ್ರೊಟೊಟೈಪ್ ಅನ್ನು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ ಲಿಮಿಟೆಡ್ ತಯಾರು ಮಾಡಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಮಾನದಂಡಗಳನ್ನು ಪೂರ್ಣಗೊಳಿಸುವುದಕ್ಕೆ ಚೀನಾದ ಸಿಆರ್‌ಆರ್‌ಸಿ, ಕೋಲ್ಕತ್ತ ಮೂಲದ ತಿತಾಗಢ ರೈಲ್‌ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಈ ಕಂಪನಿ ಬೋಗಿಗಳ ಉತ್ಪಾದನೆ ಮತ್ತು ಪೂರೈಕೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದವು.

ಹೆಬ್ಬಗೋಡಿ ಡಿಪೋದಲ್ಲಿರುವ ತಲಾ 38.7 ಮೆಟ್ರಿಕ್ ಟನ್ ತೂಕದ 6 ಬೋಗಿಗಳ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿದೆ. ಇದರ ಆಗಮನವು ನವೀನ ತಂತ್ರಜ್ಞಾನ ಮತ್ತು ಸುವ್ಯವಸ್ಥಿತ ಲಾಜಿಸ್ಟಿಕ್ಸ್ ಮೂಲಕ ಭವಿಷ್ಯದ ಸಾರಿಗೆ ಪರಿಹಾರಗಳಲ್ಲಿ ನಗರದ ಪ್ರಗತಿಯನ್ನು ಕಾಣಬಹುದಾಗಿದೆ.

ಇನ್ನು ಹಳದಿ ಮಾರ್ಗದ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಪ್ರಯಾಣಿಕರು ಈ ಮೆಟ್ರೋವನ್ನು ಬಳಸುವುದರಿಂದ ಜಯದೇವ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಗರದ ಅತ್ಯಂತ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಮಾರ್ಗವನ್ನು ಸೇರಿಸುವುದರಿಂದ ಕಡಿಮೆ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆಯಿದೆ. ಈ ಮೆಟ್ರೋ ಮಾರ್ಗವನ್ನು 2024ರ ಮಧ್ಯಭಾಗದಲ್ಲಿ ಸಾರ್ವಜನಿಕರ ಬಳಕೆಗೆ ಸಿಗಬಹುದು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+